ನವದೆಹಲಿ: ಕೋ-ವಿನ್ 2.0 ಲಸಿಕಾ ನೋಂದಣಿಗಾಗಿ ಅಂಗವೈಕಲ್ಯ ಗುರುತಿನ (ಯುಡಿಐಡಿ) ಕಾರ್ಡ್‌ಗಳನ್ನು ಗುರುತಿನ ಚೀಟಿಯಾಗಿ ಬಳಕೆ ಮಾಡಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದ ಪತ್ರದಲ್ಲಿ, ವಿಕಲಾಂಗ ವ್ಯಕ್ತಿಗಳಿಗೆ ಸಬಲೀಕರಣ ಇಲಾಖೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಯುಡಿಐಡಿ ಕಾರ್ಡ್ ನೀಡಲಾಗುತ್ತದೆ ಅದರಲ್ಲಿ ಹೆಸರು, ವರ್ಷ ಮುಂತಾದ ಎಲ್ಲ ಅಗತ್ಯ ಮಾಹಿತಿ ಇರುತ್ತದೆ ಈ ಹಿನ್ನೆಲೆ ಇದನ್ನು ಲಸಿಕೆ ಹಾಕಿಸಿಕೊಳ್ಳಲು ಪ್ರೂಫ್ ಆಗಿ ಬಳಕೆ ಮಾಡಬಹುದು ಎಂದು ಸಚಿವಾಲಯ ತಿಳಿಸಿದೆ.
ಹಾಗೆಯೇ ಕೋವಿಡ್ ವ್ಯಾಕ್ಸಿನೇಷನ್ಗಾಗಿ ಈ ಕಾರ್ಡ್ ಬಗ್ಗೆ ವ್ಯಾಪಕವಾಗಿ ಪ್ರಚಾರ ಮಾಡಲು ರಾಜ್ಯಗಳು / ಯುಟಿಗಳಿಗೆ ಸಚಿವಾಲಯ ಸೂಚಿಸಿದೆ.