ETV Bharat / bharat

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧ್ಯಕ್ಷರ ಮೇಲೆ ಹಲ್ಲೆ.. ಟಿಎಂಸಿ ಮೇಲೆ ಆರೋಪ ಮಾಡಿದ ದಿಲೀಪ್​!

4ನೇ ಹಂತದ ಮತದಾನಕ್ಕಾಗಿ ಚುನಾವಣಾ ಪ್ರಚಾರ ನಡೆಸ್ತಿದ್ದ ವೇಳೆ ಬಿಜೆಪಿ ಮುಖಂಡ ದಿಲೀಪ್​ ಗೋಷ್​ ಮೇಲೆ ಕೆಲ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.

dilip ghosh attack
dilip ghosh attack
author img

By

Published : Apr 7, 2021, 8:23 PM IST

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್​ ಘೋಷ್​​ ಅವರ ಕಾರಿನ ಮೇಲೆ ಕೆಲ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಪರಿಣಾಮ ಕಾರಿನ ಗ್ಲಾಸ್​ ಸಂಪೂರ್ಣವಾಗಿ ಒಡೆದು ಹೋಗಿವೆ. ಪಶ್ಚಿಮ ಬಂಗಾಳ ಕೊಚ್​ ಬೆಹಾರ್​ನಲ್ಲಿ ಈ ಘಟನೆ ನಡೆದಿದೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧ್ಯಕ್ಷರ ಮೇಲೆ ಹಲ್ಲೆ

ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಸಿಟಾಲ್ಕುಚಿ ಪ್ರದೇಶದಿಂದ ವಾಪಸ್​​ ಆಗ್ತಿದ್ದ ವೇಳೆ ಅವರ ಮೇಲೆ ಹಲ್ಲೆ ನಡೆದಿದೆ. ಇದರ ಬಗ್ಗೆ ಮಾತನಾಡಿರುವ ದಿಲೀಪ್​ ಘೋಷ್​, ತೃಣಮೂಲ ಕಾಂಗ್ರೆಸ್​ನ ಬಾವುಟ ಕೈಯಲ್ಲಿ ಹಿಡಿದುಕೊಂಡು ಬಂದ ಕೆಲವರು ನನ್ನ ಮೇಲೆ ಹಲ್ಲೆ ನಡೆಸಿದ್ದು, ಕಚ್ಚಾ ಬಾಂಬ್​ ಎಸೆದಿದ್ದಾರೆ. ಈ ವೇಳೆ ನನ್ನ ಕಾರಿನ ಗಾಜು ಒಡೆದಿದ್ದು, ಕೈಗೆ ಗಾಯವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ನಕ್ಸಲ್​ ದಾಳಿ: ಸಂಬಳಕ್ಕಾಗಿ ದುಡಿಯುವವರು ದಾಳಿಯಲ್ಲಿ ಮೃತಪಟ್ಟಿದ್ದಾರೆಂದ ಬರಹಗಾರ್ತಿ ಬಂಧನ

ದಾಳಿ ನಡೆದಾಗ ಯಾವುದೇ ಸ್ಥಳೀಯ ಪೊಲೀಸರು ಅಲ್ಲಿ ಉಪಸ್ಥಿತರಿರಲಿಲ್ಲ ಎಂದಿದ್ದಾರೆ. ಇನ್ನು ಫೆಬ್ರವರಿ 2021ರಲ್ಲಿ 24 ನಾರ್ಥ್​ ಪರಗಣದಲ್ಲಿ ಪ್ರಚಾರ ಸಭೆ ನಡೆಸಿದ್ದಾಗಲೂ ಅವರ ಮೇಲೆ ಹಲ್ಲೆ ನಡೆದಿತ್ತು. ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಮೂರು ಹಂತದ ಚುನಾವಣೆ ಮುಗಿದಿದ್ದು, ನಾಲ್ಕನೇ ಹಂತದ ಮತದಾನ ಏಪ್ರಿಲ್​ 10ರಂದು 44 ಸ್ಥಾನಗಳಿಗೆ ನಡೆಯಲಿದೆ. ಈ ಸಲದ ಚುನಾವಣೆ ಬಿಜೆಪಿ ಹಾಗೂ ಟಿಎಂಸಿಗೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.