ETV Bharat / bharat

ಸಂಕೋಲೆಯಲ್ಲಿ ಬಂಧಿಯಾಗಿರುವ ಡಿಜಿಟಲ್ ಮಾಧ್ಯಮ! - Digital media in fetters

ಮಾಹಿತಿ ತಂತ್ರಜ್ಞಾನ ಕಾಯ್ದೆ 69ಎ ಅಡಿ ಸರ್ಕಾರ ಹೆಚ್ಚು ಕಠಿಣ ನಿಯಮಗಳನ್ನು ರೂಪಿಸಿದೆ. ಆ ಮೂಲಕ ಈವರೆಗೆ, ನಿಯಂತ್ರಣಗಳಿಂದ ಮುಕ್ತವಾಗಿದ್ದ, ಡಿಜಿಟಲ್ ಮಾಧ್ಯಮಗಳ ಮೇಲೆ ಸಂಕೋಲೆ ಹೇರಿದೆ.

Digital media in fetters
ಸಂಕೋಲೆಯಲ್ಲಿ ಬಂಧಿಯಾಗಿರುವ ಡಿಜಿಟಲ್ ಮಾಧ್ಯಮ
author img

By

Published : Mar 10, 2021, 10:23 AM IST

ಸುಮಾರು 6 ವರ್ಷಗಳ ಹಿಂದೆ, ಸರ್ವೋಚ್ಚ ನ್ಯಾಯಾಲಯ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಎ ಅನ್ನು ರದ್ದುಗೊಳಿಸಿತು. ಈ ವಿಧಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಮೇಲೆ ಅನಗತ್ಯವಾಗಿ ಆಕ್ರಮಿಸಿದೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತು. ಈ ಸಂಧರ್ಭದಲ್ಲಿ ಘನ ನ್ಯಾಯಾಲಯವು ಸಂವಿಧಾನದ ಮೂಲಭೂತ ಹಕ್ಕಾಗಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮಹತ್ವವನ್ನು ಎತ್ತಿ ಹಿಡಿಯಿತು. ಇದರ ಜೊತೆಗೆ, ಹಲವು ಕಡಿವಾಣಗಳೊಂದಿಗೆ, ನ್ಯಾಯಾಲಯ ಇದೇ ಕಾಯ್ದೆಯ ಸೆಕ್ಷನ್ 69ಎ, 79 ಮುಂದುವರಿಸಲು ಅನುಮತಿ ನೀಡಿತು.

2020ರ ಸೆಪ್ಟೆಂಬರ್​ನಲ್ಲಿ ವಿವಾದಾತ್ಮಕ ಟಿವಿ ಸರಣಿಯ ಮೇಲಿನ ವಿಚಾರಣೆಯ ಸಮಯದಲ್ಲಿ, ಭಾರತ ಸರ್ಕಾರ ಡಿಜಿಟಲ್ ಮಾಧ್ಯಮವು ಸಂಪೂರ್ಣವಾಗಿ ಎಲ್ಲ ರೀತಿಯ ನಿಯಂತ್ರಣಗಳನ್ನೂ ಮೀರಿ ಬೆಳೆದಿದೆ ಎಂದು ವಿಷಾದಿಸಿತ್ತು. ಜೊತೆಗೆ, ಈ ಮಾಧ್ಯಮವನ್ನು ಮೊದಲು ನಿಯಂತ್ರಿಸಬೇಕು ಎಂದು ವಾದಿಸಿತ್ತು. ಎರಡು ವಾರಗಳ ಹಿಂದೆ, ಅದು ಅದರ ಉದ್ದೇಶವನ್ನು ಜಾರಿಗೊಳಿಸಿತು.

ಮಾಹಿತಿ ತಂತ್ರಜ್ಞಾನ ಕಾಯ್ದೆ 69ಎ ಅಡಿ ಸರ್ಕಾರ ಹೆಚ್ಚು ಕಠಿಣ ನಿಯಮಗಳನ್ನು ರೂಪಿಸಿದೆ. ಆ ಮೂಲಕ ಈವರೆಗೆ, ನಿಯಂತ್ರಣಗಳಿಂದ ಮುಕ್ತವಾಗಿದ್ದ, ಡಿಜಿಟಲ್ ಮಾಧ್ಯಮಗಳ ಮೇಲೆ ಸಂಕೋಲೆ ಹೇರಿದೆ. ಈ ತಿದ್ದುಪಡಿ ಮೂಲಕ, ಡಿಜಿಟಲ್ ಮಾಧ್ಯಮಗಳ ಮೇಲೆ ಕಣ್ಗಾವಲು ನಡೆಸುವತ್ತ ಸರ್ಕಾರ ಚಿಂತನೆ ನಡೆಸಿದೆ. ಇದು ಡಿಜಿಟಲ್ ಮಾಧ್ಯಮಗಳ ಮೇಲೆ ಸರ್ಕಾರಕ್ಕೆ ದೊಡ್ಡ ರೀತಿಯಲ್ಲಿ ನಿಯಂತ್ರಣ ಹೇರಲು ಅವಕಾಶ ಒದಗಿಸುತ್ತದೆ. ಸಹಜವಾಗಿಯೇ ಇದು ಹಲವು ಆತಂಕಗಳಿಗೆ ಕಾರಣವಾಗಿದೆ.

ಪತ್ರಕರ್ತರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಸರ್ಕಾರದ ಈ ಕಾಯ್ದೆ ತಿದ್ದುಪಡಿ ಪ್ರಸ್ತಾಪವನ್ನು ವಿರೋಧಿಸಿದೆ. ಹೊಸದಾಗಿ ಸೆಕ್ಷನ್ 69ಎಗೆ ಸೇರ್ಪಡೆ ಮಾಡಲಾಗಿರುವ ನಿಯಮಗಳು ಮೂಲಭೂತವಾಗಿ ಇಡಿ ಕಾಯ್ದೆಯನ್ನು ಬದಲಾಯಿಸುತ್ತದೆ ಹಾಗೂ ಡಿಜಿಟಲ್ ಮಾಧ್ಯಮದ ಮೇಲೆ ಅನಗತ್ಯ ನಿರ್ಬಂಧಗಳನ್ನು ಹೇರಲು ಅನುವು ಮಾಡಿಕೊಡುತ್ತದೆ. ಹೀಗಾಗಿ ಈ ಹೊಸ ತಿದ್ದುಪಡಿಗಳನ್ನು ಹಿಂದೆಗೆದುಕೊಳ್ಳಬೇಕು ಎಂದು ಅದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಆದರೆ, ಸರ್ಕಾರ ಮಾತ್ರ ಈ ತಿದ್ದುಪಡಿಗಳನ್ನು ಬಲವಾಗಿ ಸಮರ್ಥಿಸಿಕೊಂಡಿದೆ. ಈ ನಿಯಮಗಳನ್ನು ಅನುಷ್ಠಾನಗೊಳಿಸುವ ಅಧಿಕಾರ ತನಗೆ ಮಾತ್ರ ಇರುತ್ತದೆ ಎಂದು ಅದು ತಿಳಿಸಿದೆ. ಆದರೂ ಸರಿಯಾದ ನಿರ್ಧಾರವೆಂದರೆ ಈ ತಿದ್ದುಪಡಿಗಳನ್ನು ಹಿಂತೆಗೆದುಕೊಳ್ಳುವುದು. ಏಕೆಂದರೆ ಈ ತಿದ್ದುಪಡಿಗಳು ಡಿಜಿಟಲ್ ಮಾಧ್ಯಮಗಳನ್ನು ಸರ್ಕಾರದ ನಿಯಂತ್ರಣದೊಳಕ್ಕೆ ತರುತ್ತವೆ ಹಾಗೂ ಮಾಧ್ಯಮಗಳನ್ನು ಹರಿತವಾದ ಖಡ್ಗಗಳ ಪಂಜರದೊಳಕ್ಕೆ ತಳ್ಳುತ್ತವೆ. ಒಟ್ಟಾರೆಯಾಗಿ, ಇದು ಡಿಜಿಟಲ್ ಮಾಧ್ಯಮಗಳನ್ನು ದುರ್ಬಲಗೊಳಿಸುತ್ತವೆ.

ಅಧಿಕಾರದಲ್ಲಿರುವ ಪಕ್ಷ ಯಾವುದೇ ಇರಲಿ, ಆಡಳಿತಾರೂಢ ಪಕ್ಷಗಳು ಸದಾ ಮಾಧ್ಯಮಗಳನ್ನು ತಮ್ಮ ಮುಷ್ಟಿಯಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತವೆ. ಯಾವುದೇ ಭೀತಿ ಇಲ್ಲದೆ, ಸತ್ಯ ಮತ್ತು ವಾಸ್ತವ ಸುದ್ದಿಗಳನ್ನು ಪ್ರಕಟಿಸುವ ಮಾಧ್ಯಮಗಳನ್ನು ತಮ್ಮ ಹದ್ದು ಬಸ್ತಿನಲ್ಲಿಟ್ಟುಕೊಳ್ಳಲು ಎಲ್ಲ ಸರ್ಕಾರಗಳು ಯತ್ನಿಸುತ್ತವೆ. 12 ವರ್ಷಗಳ ಹಿಂದೆ, ಅಂದಿನ ಯುಪಿಎ ಸರ್ಕಾರ ವಿದ್ಯುನ್ಮಾನ ಮಾಧ್ಯಮಗಳಿಗೆ ಅವು ಪ್ರಸಾರ ಮಾಡುವ ಕಾರ್ಯಕ್ರಮಗಳಿಗೆ ಕಂಟೆಂಟ್ ಕೋಡ್ ವಿಧಿಸಲು ಹೋಗಿ ಮುಖಭಂಗ ಅನುಭವಿತ್ತು ಎಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

ಕೇಂದ್ರ ಸರ್ಕಾರ ಡಿಜಿಟಲ್ ಮಾಧ್ಯಮಗಳಿಗೆ ಪ್ರಸ್ತಾಪಿಸಿರುವ ಹೊಸ ಮಾರ್ಗಸೂಚಿ ಹೇಗಿದೆ ಎಂದರೆ, ಮಾಧ್ಯಮಗಳು ಸರ್ಪದ ಹೆಡೆಯಂಚಿನಲ್ಲಿ ಸಿಲುಕಿಕೊಂಡಿರುವ ಕಪ್ಪೆಯಂತೆ ಇರಬೇಕಾಗುತ್ತದೆ. ಡಿಜಿಟಲ್ ಮಾಧ್ಯಮಗಳ ಮೇಲೆ ಸರ್ಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅಫಿಡವಿಟ್ ತುಂಬಾ ಕಠಿಣವಾಗಿದೆ. ಈ ಅಫಿಡವಿಟ್ ಪ್ರಕಾರ, ಈ ಡಿಜಿಟಲ್ ಮಾಧ್ಯಮಗಳು ದ್ವೇಷದ ವಿಷ ಹರಡುವುದರ ಜೊತೆಗೆ, ಭಯೋತ್ಪದನೆ ಹಾಗೂ ಹಿಂಸೆಗೆ ಕಾರಣವಾಗಬಲ್ಲ ವಿಷಯಗಳನ್ನು ಉದ್ದೇಶ ಪೂರ್ವಕವಾಗಿ ಹಾಗೂ ಅರಿತುಕೊಂಡೆ ಹರಡಬಲ್ಲವು. ಜೊತೆಗೆ, ಅವುಗಳು ವ್ಯಕ್ತಿಗಳ ಹಾಗು ಸಂಸ್ಥೆಗಳ ಚಾರಿತ್ರ್ಯಹರಣ ಮಾಡಬಲ್ಲವು.

ಇದೀಗ ಕೇಂದ್ರ ಸರ್ಕಾರ ಡಿಜಿಟಲ್ ಮಾಧ್ಯಮದ ತಜ್ಞರೊಂದಿಗೆ ಯಾವುದೇ ಹಂತದಲ್ಲೂ ಚರ್ಚಿಸದೆ, ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್ ರಚಿಸಿದೆ. ಕೇಂದ್ರ ಸರ್ಕಾರ ರಚಿಸಿರುವ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಎಥಿಕ್ಸ್ ಕೋಡ್) ನಿಯಮಗಳು 2021 ಮೂರು ಹಂತದ ನಿಯಂತ್ರಣಗಳನ್ನು ಡಿಜಿಟಲ್ ಮಾಧ್ಯಮಗಳಿಗೆ ಪ್ರಸ್ತಾಪಿಸಿದೆ.

ಈ ನಿಯಮಗಳ ಪ್ರಕಾರ, ವಿವಿಧ ಸಚಿವಾಲಯಗಳ ಅಧಿಕಾರಿಗಳನ್ನೊಳಗೊಂಡ ಒಂದು ಸಮಿತಿಯು ಕೇಂದ್ರ ಮಟ್ಟದಲ್ಲಿರುತ್ತದೆ. ಈ ಸಮಿತಿಗೆ ಅನಿರ್ಬಂಧಿತ ಅಧಿಕಾರ ನೀಡಲಾಗುವುದು. ಇದು ಡಿಜಿಟಲ್ ಮಾಧ್ಯಮಗಳು ಸದಾ ಸರ್ಕಾರದ ಹೆದರಿಕೆಯಲ್ಲಿಯೇ ಇರಬೇಕಾದ ಸ್ಥಿತಿಯನ್ನು ತಂದೊಡ್ಡಲಿದೆ.

ಡಿಜಿಟಲ್ ಮಾಧ್ಯಮವು ಭವಿಷ್ಯದ ಮಾಧ್ಯಮ ಎಂದೇ ಎಲ್ಲೆಡೆ ಪರಿಗಣಿಸಲ್ಪಟ್ಟಿದೆ. ಇದು ನಮ್ಮ ಯುವ ಜನಾಂಗದ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ಪ್ರತಿನಿಧಿಸುವ ಭವಿಷ್ಯದ ವೇದಿಕೆಯಾಗಿದೆ. ಇದು ನಮ್ಮಲ್ಲಿ ಕ್ರಾಂತಿಕಾರಿ ಬದಲಾವಣೆಗಳಿಗೆ ಅವಕಾಶ ಮಾಡಿಕೊಡುವ ವೇದಿಕೆ ಎಂದೇ ಹೇಳಲಾಗುತ್ತಿದೆ. ಇಂತಹ ವೇದಿಕೆಯೊಂದು ಸರ್ಕಾರದ ಹತೋಟಿಗೆ ಬೀಳುವುದ್ದಕ್ಕಿಂತ ದೊಡ್ಡ ಅನಾಹುತ ಏನಿದೆ?. ಏಕೆಂದರೆ, ಒಮ್ಮೆ ಡಿಜಿಟಲ್ ಮಾಧ್ಯಮ ಸರ್ಕಾರದ ಹತೋಟಿಗೆ ಬಂದು ಬಿಟ್ಟರೆ, ಅಲ್ಲಿ ಮಾಧ್ಯಮ ಸ್ವಾತಂತ್ರ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ಸಿಗಲಾರದು.

ಕಳೆದ ಹಲವಾರು ದಶಕಗಳಿಂದ ದೇಶದ ಸುದ್ದಿ ಮಾಧ್ಯಮಗಳು ದೇಶದ ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈಗ ಅಂತರ್ಜಾಲ ಆಧಾರಿತ ಸುದ್ದಿ ಮಾಧ್ಯಮಗಳಿಗೆ ಇತ್ತೀಚಿಗೆ ವಿಧಿಸಲಾಗಿರುವ ನಿರ್ಬಂಧಗಳು ದೇಶದ ಹಿತಾಸಕ್ತಿಗಳಿಗೆ ಹಾನಿ ಉಂಟು ಮಾಡುವಂಥವುಗಳಾಗಿವೆ.

ಅಂತರ್ಜಾಲ ಆಧಾರಿತ ಸುದ್ದಿ ಮಾಧ್ಯಮಗಳನ್ನು ಸಮಾಜ ವಿರೋಧಿ ಚಟುವಟಿಕೆ, ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಬಳಸುವುದನ್ನು ತಡೆಯಲು ಈಗಾಗಲೇ ಹಲವಾರು ಸಶಕ್ತ ಕಾನೂನುಗಳಿವೆ. ಈ ಹಿನ್ನೆಲೆಯಲ್ಲಿ ಡಿಜಿಟಲ್ ಮಾಧ್ಯಮಗಳ ವಿರುದ್ಧ ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಏಕಪಕ್ಷೀಯ ನಿಯಂತ್ರಣ ಕ್ರಮಗಳು ಅನಗತ್ಯವಾಗಿದ್ದವು.

ಕಾನೂನು ತಜ್ಞರು ಈಗಾಗಲೇ ಇಂತಹ ನಿಯಂತ್ರಣಗಳು ಅಸಂವಿಧಾನಿಕವೆಂದು ಅಭಿಪ್ರಾಯ ಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹೊಸ ನಿರ್ಬಂಧ ವಿಧಿಸುವ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು. ಆ ಮೂಲಕ ಮಾಧ್ಯಮ ಸ್ವಾತಂತ್ರ್ಯಕ್ಕೆ ಅದು ಗೌರವ ಸಲ್ಲಿಸಬೇಕು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.