ETV Bharat / bharat

ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ನಿವಾರಿಸಿದ ರಿಸೈಕಲ್ ಸಂಸ್ಥೆಗೆ ಡಿಜಿಟಲ್ ಇಂಡಿಯಾ ಪ್ರಶಸ್ತಿ ಗರಿ.. - Recykal

ಹೈದ್ರಾಬಾದ್ ಮೂಲದ ರಿಸೈಕಲ್ ಸೀರಿಯಲ್ ಸಂಸ್ಥೆಗೆ ಡಿಜಿಟಲ್ ಇಂಡಿಯಾ ಪ್ರಶಸ್ತಿ - ಕೇದಾರನಾಥದಲ್ಲಿ ಪ್ಲಾಸ್ಟಿಕ್ ಬಾಟಲ್ ತ್ಯಾಜ್ಯ ತಡೆಗೆ ಯಶಸ್ವಿ ಹೆಜ್ಜೆ ಇರಿಸಿದ ಸಂಸ್ಥೆ - ಸ್ಟಾರ್ಟ್‌ಅಪ್‌ ಸಹಯೋಗದ ಡಿಜಿಟಲ್ ಉಪಕ್ರಮಗಳಡಿ ಪ್ರಶಸ್ತಿಗೆ ಆಯ್ಕೆ - ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ.

Plastic bottles
ಪ್ಲಾಸ್ಟಿಕ್ ಬಾಟಲ್​ಗಳು
author img

By

Published : Jan 7, 2023, 7:13 PM IST

ಹೈದರಾಬಾದ್:ಪ್ಲಾಸ್ಟಿಕ್ ಬಾಟಲ್ ತ್ಯಾಜ್ಯ ರಾಶಿ ರಾಶಿ ಬೀಳುವುದನ್ನು ತಡೆಗೆ ಹೈದರಾಬಾದ್ ಮೂಲದ ರಿಸೈಕಲ್ ಸೀರಿಯಲ್ ಸಂಸ್ಥೆಯೂ ಡಿಜಿಟಲ್ ಠೇವಣಿ ಮರುಪಾವತಿ ಉಪಾಯ ಅನುಸರಿಸುವ ಮೂಲಕ ಯಶಸ್ವಿಯಾಗಿದೆ. ಉತ್ತರಾಖಂಡದ ಕೇದಾರನಾಥದಲ್ಲಿ ರಿಸೈಕಲ್ ಸೀರಿಯಲ್ ಸಂಸ್ಥೆ ನಡೆಸಿದ 'ಸ್ಟಾರ್ಟ್‌ಅಪ್‌ ಸಹಯೋಗದಲ್ಲಿ ಡಿಜಿಟಲ್ ಉಪಕ್ರಮಗಳು' ಯೋಜನೆಯಡಿ 'ಡಿಜಿಟಲ್ ಇಂಡಿಯಾ ಪ್ರಶಸ್ತಿ' ಲಭಿಸಿದೆ. ಶನಿವಾರ ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡುವರು.

ಕೇದಾರನಾಥದಲ್ಲಿ 1 63 000 ಬಾಟಲ್​ಗಳು ಸಂಗ್ರಹ:ಕೇದಾರನಾಥ ಯಾವಾಗಲೂ ಪ್ರವಾಸಿಗರಿಂದ ಸದಾ ಕಿಕ್ಕಿರಿದು ತುಂಬಿರುವ ಪ್ರದೇಶ. 50 ಕಿ.ಮೀ ಉದ್ದದ ರಸ್ತೆ ಉದ್ದಕ್ಕೂ ಅಂಗಡಿಗಳಲ್ಲಿ ತಂಪು ಪಾನೀಯಗಳು ಮತ್ತು ನೀರಿನ ಬಾಟಲಿಗಳು ರಾಶಿ ರಾಶಿ ಬಿದ್ದಿರುತ್ತವೆ. ಇದನ್ನು ಪರಿಶೀಲಿಸಿದ ಜಿಲ್ಲಾಡಳಿತ ಇಲಾಖೆಯೂ ಮರುಬಳಕೆಗಾಗಿ ರಿಸೈಕಲ್ ಸೀರಿಯಲ್ ಕಂಪನಿ ಸಂಪರ್ಕಿಸಿದೆ. 'ಡಿಜಿಟಲ್ ಠೇವಣಿ ಮರುಪಾವತಿ ವ್ಯವಸ್ಥೆ' ಕಲ್ಪನೆ ಪ್ರಾರಂಭಿಸಿದ ರಿಸೈಕಲ್ ಸಂಸ್ಥೆ ​, 1,63,000 ಪ್ಲಾಸ್ಟಿಕ್ ಬಾಟಲಿಗಳನ್ನು ವಾಪಸ್​ ಸಂಗ್ರಹಿಸಿ ದಾಖಲೆ ಬರೆದಿದೆ.

ಡಿಜಿಟಲ್ ಉಪಕ್ರಮದಡಿ ಪ್ರವಾಸಿಗರು ಮತ್ತು ಯಾತ್ರಿಕರು ಪ್ಲಾಸ್ಟಿಕ್ ಪ್ಯಾಕೇಜಿಂಗ್‌ ಉತ್ಪನ್ನಗಳನ್ನು ಖರೀದಿಸುವಾಗ ಹೆಚ್ಚುವರಿ ರೂ 10 ಠೇವಣಿ ಮಾಡಿದರು. ಈ ಪ್ರದೇಶದಲ್ಲಿ ಮರು ಬಳಕೆ ಆರಂಭಿಸಿದ ಠೇವಣಿ ಮರುಪಾವತಿ ಕೇಂದ್ರದಲ್ಲಿ ಪ್ಲಾಸ್ಟಿಕ್ ಬಾಟಲಿಯನ್ನು ಹಿಂದಿರುಗಿಸಿದ ನಂತರ ನಗದು ಅಥವಾ UPI ಮೂಲಕ ಮರುಪಾವತಿ ಪಡೆದಿದ್ದಾರೆ.

ಡಿಡಿಆರ್‌ಎಸ್ ಏನಿದು: 'ಡಿಜಿಟಲ್ ಠೇವಣಿ ಮರುಪಾವತಿ ವ್ಯವಸ್ಥೆಯಡಿ ಪ್ರವಾಸಿಗರು ಮತ್ತು ನಾಗರಿಕರು ತಾವು ಖರೀದಿಸುವ ಯಾವುದೇ ಪ್ಲಾಸ್ಟಿಕ್ ವಸ್ತುಗಳಿಗೆ ಎಂಆರ್‌ಪಿಯ ಮೇಲಿನ ಹೆಚ್ಚುವರಿ ರೂ.10ಗಳನ್ನು ಪಾವತಿಸಬೇಕಾಗುತ್ತದೆ. ಅದನ್ನು ಪಾವತಿಸುವ ವೇಳೆ ಗ್ರಾಹಕರಿಗೆ ಕ್ಯೂಆರ್​ ಕೋಡ್ ಸ್ಟಿಕ್ಕರ್ ಅನ್ನು ಅಂಟಿಸಲಾಗುತ್ತದೆ. ಬಾಟಲಿಗಳನ್ನು ಹಿಂತಿರುಗಿಸಿದ ನಂತರ ಮತ್ತು ನೀಡಿದ ನಂತರ QR ಕೋಡ್ ಅನ್ನು ಸ್ಕ್ಯಾನ್ ಮಾಡಲಾಗುತ್ತದೆ.

ತೆಗೆದುಕೊಂಡ ಹೆಚ್ಚುವರಿ ಹಣವನ್ನು UPI ಪಾವತಿಯ ಮೂಲಕ ಮರುಪಾವತಿಸಲಾಗುತ್ತದೆ. ಈ ಕಾರ್ಯಕ್ರಮ ಆರಂಭವಾದ ಬಳಿಕ ನಾಗರಿಕರಲ್ಲಿ ಸ್ವಚ್ಛತೆಯ ಬಗ್ಗೆ ಪ್ರಜ್ಞೆ ಹೆಚ್ಚಿದೆ. ಬಾಟಲಿಗಳನ್ನು ಎಸೆಯದೇ ಬಹಳಷ್ಟು ಪ್ರವಾಸಿಗರು ಪ್ಲಾಸ್ಟಿಕ್ ಬಾಟಲಿ ಹಿಂತುರುಗಿಸಿದ್ದು ಉಂಟು. ಕೆಲವರು ಎಲ್ಲಿ ಬೇಕಾದರೂ ಬೀಸಾಡಿ ಹೋಗಿದ್ದರೂ, ಭಿಕ್ಷುಕರು ಈ ಕ್ಯೂಆರ್ ಕೋಡ್ ಬಾಟಲಿಗಳನ್ನು ತಂದು ಆದಾಯ ಗಳಿಸುತ್ತಿದ್ದಾರೆ

ರಾಷ್ಟದಲ್ಲಿ ರಿಸೈಕಲ್​ಗೆ ಮನ್ನಣೆ:ರಿಸೈಕಲ್ ಸೀರಿಯಲ್ ಸಂಸ್ಥೆಯೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವುದು ಸಂತಸ ತಂದಿದೆ. ಹಿಮಾಲಯದ ಸಮೀಪವಿರುವ ಜಲಮೂಲಗಳಿಗೆ ಹೆಚ್ಚಿನ ಪ್ಲಾಸ್ಟಿಕ್ ಸೇರುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಉತ್ತರಾಖಂಡ ಸರ್ಕಾರ, ಸ್ಥಳೀಯ ಸಂಘಗಳು, ಸಂಘಗಳು ಮತ್ತು ನಾಗರಿಕರ ಸಹಕಾರ ಅಪಾರವಾಗಿದೆ ಎಂದು ​ ಸಿಇಒ ಅಭಯ್ ದೇಶಪಾಂಡೆ ತಿಳಿಸಿದ್ದಾರೆ.

ರುದ್ರಪ್ರಯಾಗ ಜಿಲ್ಲಾಡಳಿತ, ಉತ್ತರಾಖಂಡ್, ಕೇದಾರನಾಥ ತೀರ್ಥಯಾತ್ರೆಯಲ್ಲಿ ಪ್ಲಾಸ್ಟಿಕ್ ಕಸದ ಸಮಸ್ಯೆಯನ್ನು ನಿರ್ವಹಿಸುವ ಉದ್ದೇಶದಿಂದ ಡಿಜಿಟಲ್ ಡಿಆರ್‌ಎಸ್ ಅನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಜಿಲ್ಲಾಡಳಿತವು ಮೇ 2022 ರಲ್ಲಿ ಭಾರತದಲ್ಲಿ ಸರ್ಕ್ಯುಲಾರಿಟಿ ವೇಗಗೊಳಿಸುವ ಟೆಕ್ ಡಿಸ್ಟ್ರಪ್ಟರ್ ರೆಸೈಕಲ್ ಜತೆ ಸಹಿ ಹಾಕಿದೆ. ಅಭಯ್ ದೇಶಪಾಂಡೆ ಅವರು 2016 ರಲ್ಲಿ ಸ್ಥಾಪಿಸಿರುವ Recykal ರಿಸೈಕಲ್ ಸೀರಿಯಲ್ ಉದ್ದಿಮೆ ಆರಂಭಿಸಿದರು.

ಸ್ಟಿಕ್ ತ್ಯಾಜ್ಯ, ಇ-ತ್ಯಾಜ್ಯದ ಪರಿಣಾಮಕಾರಿ ಮರುಬಳಕೆಯನ್ನು ಉತ್ತೇಜಿಸಲು ಭಾರತದ ತ್ಯಾಜ್ಯ ನಿರ್ವಹಣೆ ಮತ್ತು ಮರುಬಳಕೆ ಮೌಲ್ಯ ಸರಪಳಿಯಾದ್ಯಂತ ಎಲ್ಲ ಪಾಲುದಾರರಿಗೆ ವಹಿವಾಟು ನಡೆಸುತ್ತಿದೆ. ತ್ಯಾಜ್ಯ ಸಂಗ್ರಹಣೆ Recykal ನ ಡಿಜಿಟಲ್ ಹೆಜ್ಜೆಗುರುತು 400,000 ಕ್ಕೂ ಹೆಚ್ಚು ಗ್ರಾಹಕರು, 1,000 ವ್ಯವಹಾರಗಳು, 500 ಸಂಗ್ರಾಹಕರು ಮತ್ತು ತ್ಯಾಜ್ಯ ನಿರ್ವಹಣಾ ಕಂಪನಿಗಳು, 100 ಕ್ಕೂ ಹೆಚ್ಚು ಮರುಬಳಕೆದಾರರು ಮತ್ತು 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 30 ಪುರಸಭೆಗಳನ್ನು ಒಳಗೊಂಡಿದೆ.

ಇದನ್ನೂಓದಿ:ಗಂಗಾ ನದಿಯಲ್ಲಿ ಶೀಘ್ರದಲ್ಲೇ ವಾಟರ್ ಟ್ಯಾಕ್ಸಿ ಸೇವೆ ಆರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.