ETV Bharat / bharat

DIG Suicide: ಗುಂಡು ಹಾರಿಸಿಕೊಂಡು ಕೊಯಮತ್ತೂರು ಡಿಐಜಿ ವಿಜಯಕುಮಾರ್ ಆತ್ಮಹತ್ಯೆ

ಕೊಯಮತ್ತೂರು ಡಿಐಜಿ ವಿಜಯಕುಮಾರ್ ಅವರು ಕ್ಯಾಂಪ್ ಕಚೇರಿಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

author img

By

Published : Jul 7, 2023, 9:08 AM IST

Updated : Jul 7, 2023, 11:08 AM IST

DIG Vijayakumar
ಡಿಐಜಿ ವಿಜಯಕುಮಾರ್

ಕೊಯಮತ್ತೂರು : ಕೊಯಮತ್ತೂರು ಕಾರ್ಗೋ ವಿಭಾಗದ ಡಿಐಜಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವಿಜಯಕುಮಾರ್ (45) ಅವರು ಬಂಟ ರಸ್ತೆಯ ಪಾಂಥಯ ಸಲೈನಲ್ಲಿರುವ ತಮ್ಮ ಕ್ಯಾಂಪ್ ಕಚೇರಿಯಲ್ಲಿ ಶುಕ್ರವಾರ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 2009ರ ಐಪಿಎಸ್ ಬ್ಯಾಚ್‌ನವರಾಗಿದ್ದ ಇವರು, 2022 ಜನವರಿ 6ರಂದು ಚೆನ್ನೈನ ಅಣ್ಣಾನಗರ ಡೆಪ್ಯುಟಿ ಕಮಿಷನರ್‌ನಿಂದ ಕೊಯಮತ್ತೂರು ಡಿಐಜಿಯಾಗಿ ಬಡ್ತಿ ಪಡೆದಿದ್ದರು. ಕಾಂಚೀಪುರಂ, ಕಡಲೂರು, ನಾಗಪಟ್ಟಿಣಂ ಮತ್ತು ತಿರುವರೂರ್​ನಲ್ಲಿ ಡಿಎಸ್​ಪಿಯಾಗಿ ಕೆಲಸ ಮಾಡಿದ್ದಾರೆ.

ನಿನ್ನೆ ರಾತ್ರಿ ಜಿಲ್ಲಾಧಿಕಾರಿ ಸಂದೀಶ್ ಅವರ ಮಗುವಿನ ಹುಟ್ಟುಹಬ್ಬಕ್ಕೆ ವಿಜಯಕುಮಾರ್ ತೆರಳಿದ್ದರು. ಇಂದು ಬೆಳಗ್ಗೆ 6.50ಕ್ಕೆ ವಾಕಿಂಗ್ ಮುಗಿಸಿ ಪಂಥಿಯಾ ಸಲೈನಲ್ಲಿರುವ ಕ್ಯಾಂಪ್​ ಕಚೇರಿಗೆ ಬಂದಿದ್ದರು. ಬಳಿಕ, ತಮ್ಮ ಅಂಗರಕ್ಷಕ ರವಿ ಬಳಿ ಪಿಸ್ತೂಲ್ ತೆಗೆದುಕೊಂಡು ಕೋಣೆಗೆ ಹೋದವರು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಡಿಐಜಿ ಅವರ ಮೃತದೇಹವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಗಾಗಿ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲದೇ, ಅವರ ಆತ್ಮಹತ್ಯೆಗೆ ಕಾರಣವೇನು? ಎಂದು ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ : ಚಾಲಕ ಆತ್ಮಹತ್ಯೆ ಯತ್ನ ಪ್ರಕರಣ : ಹಿರಿಯ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ ತನಿಖೆ: ಜಿ.ಪರಮೇಶ್ವರ್

ವಿಜಯಕುಮಾರ್ ತೇಣಿ ಜಿಲ್ಲೆಯ ಅನಕಾರಿಪಟ್ಟಿಯವರು. ತೇಣಿ ನಾಡರ್ ಸರಸ್ವತಿ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. ವಿಜಯ ಅವರ ತಾಯಿ, ತಂದೆ ಮತ್ತು ತಂಗಿ ಸೇರಿದಂತೆ ಇಡೀ ಕುಟುಂಬ ತೇಣಿ ರತ್ನಂನಲ್ಲಿ ವಾಸಿಸುತ್ತಿದ್ದು, ತಾಯಿ ನಿವೃತ್ತ ಶಾಲಾ ಶಿಕ್ಷಕಿ. ಮಗನ ಆತ್ಮಹತ್ಯೆ ಸುದ್ದಿ ಕೇಳಿ ಇಡೀ ಕುಟುಂಬವೇ ಆಘಾತಕ್ಕೊಳಗಾಗಿದೆ. ವಿಜಯಕುಮಾರ್ ಮೃತದೇಹವನ್ನು ತೇಣಿ ರತ್ನಂನಲ್ಲಿರುವ ಅವರ ಮನೆಗೆ ಕರೆತಂದು ಇಂದು ಸಂಜೆ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ : ಪ್ರಥಮ ಪಿಯುಸಿಯಲ್ಲಿ ಎರಡು ಬಾರಿ ಫೇಲಾಗಿದ್ದಕ್ಕೆ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ

ಸಿಎಂ ಸಂತಾಪ : ವಿಜಯಕುಮಾರ್ ಐಪಿಎಸ್ ಅವರ ಆತ್ಮಹತ್ಯೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ. "ಕೊಯಮತ್ತೂರು ವೃತ್ತದ ಪೊಲೀಸ್​ ಉಪ ಮಹಾನಿರ್ದೇಶಕ ವಿಜಯಕುಮಾರ್ ಐಪಿಎಸ್ ಅವರು ಇಂದು ನಿಧನರಾಗಿದ್ದಾರೆ ಎಂಬ ದುಃಖದ ಸುದ್ದಿ ಕೇಳಿ ನನಗೆ ಆಘಾತವಾಗಿದೆ. ವಿಜಯಕುಮಾರ್ ಅವರು ತಮಿಳುನಾಡು ಪೊಲೀಸ್ ಇಲಾಖೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ಭಗವಂತ ಕರುಣಿಸಲಿ" ಎಂದಿದ್ದಾರೆ.

ಇದನ್ನೂ ಓದಿ : ಬಾಡಿಗೆದಾರರ ಕಿರುಕುಳ ತಾಳಲಾರದೇ ಮನೆ ಯಜಮಾನಿ ಆತ್ಮಹತ್ಯೆ : ಮಗಳ ಸಾವಿನ ಸುದ್ದಿ ತಿಳಿದು ತಾಯಿಗೂ ಹೃದಯಾಘಾತ

Last Updated : Jul 7, 2023, 11:08 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.