ETV Bharat / bharat

ರಾಜ್ಯದಲ್ಲೂ 100ರ ಗಡಿ ದಾಟಿದ ಡೀಸೆಲ್​​... ನಿಮ್ಮ ಜಿಲ್ಲೆಯಲ್ಲಿ ತೈಲ ಬೆಲೆ ಹೀಗಿದೆ - ರಾಜ್ಯದಲ್ಲೂ ಡಿಸೇಲ್​ 100 ರೂ

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ನಿರಂತರವಾಗಿ ಇಂಧನ ಬೆಲೆ ಏರಿಕೆ ಮಾಡುತ್ತಿರುವ ಕಾರಣ ರಾಜ್ಯದಲ್ಲಿ ಇದೀಗ ಡೀಸೆಲ್​​ ​ ಬೆಲೆ ಕೂಡ ಪ್ರತಿ ಲೀಟರ್​ಗೆ 100ರ ಗಡಿ ದಾಟಿದೆ.

Diesel rate
Diesel rate
author img

By

Published : Oct 11, 2021, 5:52 PM IST

ನವದೆಹಲಿ: ಕಳೆದ ಕೆಲ ದಿನಗಳಿಂದ ನಿರಂತರವಾಗಿ ತೈಲ ಬೆಲೆಯಲ್ಲಿ ಏರಿಕೆ ಕಂಡು ಬರುತ್ತಿರುವ ಕಾರಣ ಇದೀಗ ಡಿಸೇಲ್​ ಬೆಲೆ ರಾಜ್ಯದಲ್ಲೂ ಸೆಂಚುರಿ ಬಾರಿಸಿದೆ. ತೈಲ ಕಂಪನಿಗಳು ಇಂಧನದ ದರ ಏರಿಕೆ ಮಾಡಿರುವ ಕಾರಣ ಈ ಬೆಳವಣಿಗೆ ಕಂಡು ಬಂದಿದ್ದು, ಕರ್ನಾಟಕದ ಜೊತೆಗೆ ಕೇರಳದಲ್ಲೂ ಡೀಸೆಲ್​​​​ 100ರ ಗಡಿ ದಾಟಿದೆ.

ದೇಶದಲ್ಲಿಂದು ಪೆಟ್ರೋಲ್​ ಪ್ರತಿ ಲೀಟರ್​ಗೆ 30 ಪೈಸೆ ಹಾಗೂ ಡಿಸೇಲ್​ 35 ಪೈಸೆ ಏರಿಕೆಯಾಗಿದೆ. ಹೀಗಾಗಿ ಪ್ರತಿ ದಿನ ವಾಹನ ಸವಾರರು ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ. ಕರ್ನಾಟಕದ ದಾವಣಗೆರೆಯಲ್ಲಿ ಡೀಸೆಲ್​​​ ದರ ಲೀಟರ್​ಗೆ 100.34ರಷ್ಟಾಗಿದ್ದು, ಶಿವಮೊಗ್ಗದಲ್ಲಿ ಡಿಸೇಲ್​ ದರ ಲೀಟರ್​ಗೆ 100.12 ಪೈಸೆ ಇದೆ.

ಬೆಂಗಳೂರಿನಲ್ಲಿ ಡಿಸೇಲ್​ ಪ್ರತಿ ಲೀಟರ್​ಗೆ 98.85 ಪೈಸೆ ಇದೆ. ಒಡಿಶಾ, ಮಧ್ಯಪ್ರದೇಶ, ಬಿಹಾರ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್​, ಮುಂಬೈ, ರಾಜಸ್ಥಾನ ಹಾಗೂ ಲೇಹ್​ಗಳಲ್ಲಿ ಡಿಸೇಲ್​ ದರ ಈಗಾಗಲೇ 100ರ ಗಡಿ ದಾಟಿದೆ.

ಇದನ್ನೂ ಓದಿರಿ: Gold Price Today : ಚಿನ್ನ, ಬೆಳ್ಳಿ ಬೆಲೆಯಲ್ಲಿ ತುಸು ಇಳಿಕೆ

ರಾಜ್ಯದಲ್ಲೂ ಅಬಕಾರಿ ಸುಂಕ ಇಳಿಕೆ?

ಪೆಟ್ರೋಲ್​ - ಡೀಸೆಲ್​ ಬೆಲೆಯಲ್ಲಿ ಈಗಾಗಲೇ ಗಣನೀಯ ಮಟ್ಟದ ಏರಿಕೆ ಕಂಡು ಬಂದಿರುವ ಕಾರಣ ರಾಜ್ಯದಲ್ಲೂ ಅಬಕಾರಿ ಸುಂಕ ಇಳಿಕೆ ಮಾಡುವ ಸಾಧ್ಯತೆ ಇದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈಗಲೇ ಏನು ಹೇಳಲು ಆಗಲ್ಲ. ರಾಜ್ಯದ ಹಣಕಾಸು ಪರಿಸ್ಥಿತಿ ಹಾಗೂ ವರಮಾನ ಸಂಗ್ರಹದ ಪರಿಶೀಲನೆ ನಡೆಸಿದ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.

ತಮಿಳುನಾಡಿನಲ್ಲಿ ಸ್ಟಾಲಿನ್​ ನೇತೃತ್ವದ ಸರ್ಕಾರ ಈಗಾಗಲೇ ತನ್ನ ಪಾಲಿನ ಅಬಕಾರಿ ಸುಂಕ ಕಡಿಮೆ ಮಾಡಿರುವ ಕಾರಣ ಪೆಟ್ರೋಲ್​ ಹಾಗೂ ಡಿಸೇಲ್​ ದರದಲ್ಲಿ 3 ರೂಪಾಯಿ ಇಳಿಕೆ ಕಂಡು ಬಂದಿದೆ.

ರಾಜ್ಯದ ಬಾಗಲಕೋಟೆಯಲ್ಲಿ ಡಿಸೇಲ್​ ಪ್ರತಿ ಲೀಟರ್​ಗೆ 99.80 ಪೈಸೆ, ಬೆಳಗಾವಿಯಲ್ಲಿ 99.94 ಪೈಸೆ, ಬೀದರ್​​ 99.64 ಪೈಸೆ, ಚಿಕ್ಕಮಗಳೂರು 99.61 ಪೈಸೆ ಇದೆ. ಬಹುತೇಕ ಜಿಲ್ಲೆಗಳಲ್ಲಿ ಡಿಸೇಲ್​ ಬೆಲೆ 99ರ ಗಡಿ ದಾಟಿದ್ದು, ಇದೇ ರೀತಿ ತೈಲ ಬೆಲೆ ಏರಿಕೆಯಾದರೆ ಮುಂದಿನ ಎರಡು ದಿನದಲ್ಲಿ 100ರ ಗಡಿ ದಾಟುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.