ETV Bharat / bharat

ಪಾಟ್ನಾದಲ್ಲಿದೆ ಡೀಸೆಲ್ ಎಂಜಿನ್ ಬುಲೆಟ್ : ಒಂದು ಲೀಟರ್​ಗೆ 80 ಕಿ.ಮೀ ಮೈಲೇಜ್ - ಪಾಟ್ನಾದಲ್ಲಿದೆ ಡೀಸೆಲ್ ಎಂಜಿನ್ ಬುಲೆಟ್

ಮೋಹನ್ ಅವರು ಕಳೆದ 50 ವರ್ಷಗಳಿಂದ ಬುಲೆಟ್ ಮೆಕ್ಯಾನಿಕ್ ಆಗಿದ್ದಾರೆ. 15ನೇ ವಯಸ್ಸಿನಿಂದಲೇ ಅವರು ಬುಲೆಟ್ ಸರಿಪಡಿಸುವ ಕೆಲಸ ಮಾಡತೊಡಗಿದರು. ತನ್ನ ಹಳೆಯ ಬುಲೆಟ್​ನನ್ನು ಮಾರ್ಪಡಿಸುವ ಮೂಲಕ, ಅವರು ಹೊಸ ಬಿಎಸ್ 5 ಬುಲೆಟ್‌ಗೆ 350 ಸಿಸಿ ನೋಟವನ್ನು ನೀಡಿದ್ದಾರೆ..

Diesel engine bullet in Patna
ಪಾಟ್ನಾದಲ್ಲಿದೆ ಡೀಸೆಲ್ ಎಂಜಿನ್ ಬುಲೆಟ್
author img

By

Published : Apr 4, 2022, 7:31 PM IST

ಪಾಟ್ನಾ: ಕಳೆದ ಕೆಲವು ವರ್ಷಗಳಿಂದ ಬುಲೆಟ್​ ಬೈಕ್​​ಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ರೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಬುಲೆಟ್ ರೈಡ್ ದುಬಾರಿಯಾಗಿದೆ. 30 ಮೈಲೇಜ್ ನೀಡುವ ನಿಮ್ಮ ಬುಲೆಟ್ 80 ಮೈಲೇಜ್ ನೀಡಿದರೆ ಎಷ್ಟು ಅದ್ಭುತವಾಗಿರುತ್ತದೆ ಅಲ್ವಾ?. ಪಾಟ್ನಾದ ಮೆಕ್ಯಾನಿಕ್ ನಿಮ್ಮ ಈ ಆಸೆಯನ್ನು ಪೂರೈಸಬಲ್ಲರು. ಅವರ ಸಹಾಯದಿಂದ, ನಿಮ್ಮ ಬುಲೆಟ್ 1 ಲೀಟರ್ ಡೀಸೆಲ್‌ನಲ್ಲಿ 80 ಕಿ.ಮೀ ಮೈಲೇಜ್ ನೀಡುತ್ತದೆ.

ಪಾಟ್ನಾದಲ್ಲಿದೆ ಡೀಸೆಲ್ ಎಂಜಿನ್ ಬುಲೆಟ್..

1998ರ ಮಾದರಿಯ ಡೀಸೆಲ್ ಇಂಜಿನ್ ಬುಲೆಟ್ : ರಾಜಧಾನಿ ಪಾಟ್ನಾದ ಭಟ್ಟಾಚಾರ್ಯ ರಸ್ತೆಯಲ್ಲಿ ಮೆಕ್ಯಾನಿಕ್ ಆಗಿ 65 ವರ್ಷದ ಮೋಹನ್ ಕೆಲಸ ಮಾಡುತ್ತಿದ್ದಾರೆ. ಹಳೆಯ ಬುಲೆಟ್‌ಗಳನ್ನು ಮಾರ್ಪಡಿಸುವ ಮೂಲಕ ತಮ್ಮ ಕೌಶಲ್ಯದಿಂದ ಅಸಾಧ್ಯವಾದ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರು 1998 ಮಾದರಿಯ ಡೀಸೆಲ್ ಎಂಜಿನ್ ಬುಲೆಟ್​​ನನ್ನು ಹೊಂದಿದ್ದು, ಇದು 1 ಲೀಟರ್‌ನಲ್ಲಿ 80 ಕಿ.ಮೀ ಮೈಲೇಜ್ ನೀಡುತ್ತದೆ.

ಮೋಹನ್ ಅವರು ಕಳೆದ 50 ವರ್ಷಗಳಿಂದ ಬುಲೆಟ್ ಮೆಕ್ಯಾನಿಕ್ ಆಗಿದ್ದಾರೆ. 15ನೇ ವಯಸ್ಸಿನಿಂದಲೇ ಅವರು ಬುಲೆಟ್ ಸರಿಪಡಿಸುವ ಕೆಲಸ ಮಾಡತೊಡಗಿದರು. ತನ್ನ ಹಳೆಯ ಬುಲೆಟ್​ನನ್ನು ಮಾರ್ಪಡಿಸುವ ಮೂಲಕ, ಅವರು ಹೊಸ ಬಿಎಸ್ 5 ಬುಲೆಟ್‌ಗೆ 350 ಸಿಸಿ ನೋಟವನ್ನು ನೀಡಿದ್ದಾರೆ.

1 ಲೀಟರ್ ಡೀಸೆಲ್‌ನಲ್ಲಿ 80 ಕಿ.ಮೀ ಮೈಲೇಜ್ : ಎಲ್ಲಾ ಜನರು ಬುಲೆಟ್‌ಗೆ ಪೆಟ್ರೋಲ್ ಹಾಕುತ್ತಾರೆ. ಆದ್ರೆ, ಇವರ ಬುಲೆಟ್‌ನಲ್ಲಿ ಇರುವುದು ಮಾತ್ರ ಡೀಸೆಲ್. ಸಾಮಾನ್ಯವಾಗಿ ಬುಲೆಟ್ 30 ಮೈಲೇಜ್ ನೀಡುತ್ತದೆ. ಆದರೆ, ಡೀಸೆಲ್ ಎಂಜಿನ್ ಆಗಿರುವುದರಿಂದ ಈ ಬುಲೆಟ್ 1 ಲೀಟರ್​​​ನಲ್ಲಿ 80 ಕಿ.ಮೀ ಮೈಲೇಜ್ ನೀಡುತ್ತದೆ. ಬುಲೆಟ್‌ನ ಟ್ಯಾಂಕ್ ಸಾಮರ್ಥ್ಯ 14 ಲೀಟರ್ ಆಗಿದ್ದು, ಒಮ್ಮೆ ಟ್ಯಾಂಕ್ ತುಂಬಿದರೆ 3 ತಿಂಗಳವರೆಗೆ ಪೆಟ್ರೋಲ್ ಬಂಕ್​​ಗೆ ಹೋಗುವ ಅಗತ್ಯವಿಲ್ಲ. ಡೀಸೆಲ್ ಎಂಜಿನ್ ಹೊಂದಿದ್ದರೂ ಈ ಬುಲೆಟ್​ಗೆ ಹೊಸ ಲುಕ್ ನೀಡಿರುವುದು ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಇದನ್ನೂ ಓದಿ: ಶಾಕಿಂಗ್​: ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಿ ಗರ್ಭಪಾತ ಮಾಡಿಕೊಂಡ ಬಾಲಕಿ

ಕೈಯಲ್ಲಿ ಬುಲೆಟ್ ಟ್ಯಾಟೂ : ಮೋಹನ್ ಕಳೆದ 50 ವರ್ಷಗಳಿಂದ ಬುಲೆಟ್ ರಿಪೇರಿ ಮಾಡುತ್ತಿದ್ದಾರೆ. 1998ರ ಮಾಡೆಲ್ ಬುಲೆಟ್ ಕೂಡ ಓಡಿಸುತ್ತಿದ್ದಾರೆ. ಅವರ ಮಗ ಮಹತಾಬ್​​ ಕೈಮೇಲೆ ಬುಲೆಟ್ ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.