ETV Bharat / bharat

ಠಾಣೆ ಮೆಟ್ಟಿಲು ಹತ್ತಿಲ್ಲ, ನ್ಯಾಯಾಲಯದ ಕದ ತಟ್ಟಿಲ್ಲ: ಇದು ವ್ಯಾಜ್ಯಮುಕ್ತ ಗ್ರಾಮ! - never gone to police station or court

ಇಲ್ಲಿನ ಘೋಸಿ ಬ್ಲಾಕ್ ಕೇಂದ್ರ ಕಚೇರಿಯಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿರುವ ಈ ಗ್ರಾಮವು ಇಂದಿನ ಯುಗಕ್ಕಿಂತ ಸಂಪೂರ್ಣವಾಗಿ ವಿಭಿನ್ನ ಮತ್ತು ವಿಶಿಷ್ಟವಾಗಿದೆ. ಏನೇ ತಕರಾರು ಬಂದರೂ ಅದನ್ನು ತಮ್ಮಲ್ಲೇ ಬಗೆಹರಿಸಿಕೊಳ್ಳುವ ರೀತಿಯಲ್ಲಿ ಗ್ರಾಮದಲ್ಲಿ ಒಗ್ಗಟ್ಟಿನ ಸೂತ್ರ ಪಾಲಿಸಲಾಗುತ್ತಿದೆ ಎನ್ನುತ್ತಾರೆ ಗ್ರಾಮದ ಹಿರಿಯರಾದ ನಂದಕಿಶೋರ್ ಪ್ರಸಾದ್.

ಠಾಣೆ ಮೆಟ್ಟಿಲು ಹತ್ತಿಲ್ಲ, ನ್ಯಾಯಾಲಯದ ಕದ ತಟ್ಟಿಲ್ಲ: ಬಿಹಾರ್​ನ ವ್ಯಾಜ್ಯಮುಕ್ತ ಗ್ರಾಮಗಳ ವೈಶಿಷ್ಟ್ಯ
never gone to police station or court Bihar litigation free villages
author img

By

Published : Nov 24, 2022, 11:09 AM IST

ಜಹಾನಾಬಾದ್/ಪಶ್ಚಿಮ ಚಂಪಾರಣ್: ಬಿಹಾರದ ಜಹಾನಾಬಾದ್ ಜಿಲ್ಲೆಯಲ್ಲೊಂದು ವಿಶಿಷ್ಟ ಗ್ರಾಮವಿದೆ. ಸದಾ ಶಾಂತಿಪ್ರಿಯರಾಗಿರುವ ಜನರಿಗಾಗಿ ಈ ಗ್ರಾಮ ಹೆಸರುವಾಸಿಯಾಗಿದೆ. ಜಹಾನಾಬಾದ್ ಜಿಲ್ಲೆಯ ಘೋಸಿ ಮಂಡಲದ ಧೌತಾಲ್ ಬೀಘಾ ಗ್ರಾಮವೇ ಈ ಶಾಂತಿಪ್ರಿಯ ಗ್ರಾಮವಾಗಿದೆ. ಸ್ವಾತಂತ್ರ್ಯ ಸಿಕ್ಕ ನಂತರ ತಮ್ಮೊಳಗಿನ ಯಾವುದೇ ವ್ಯಾಜ್ಯ ಪರಿಹಾರಕ್ಕಾಗಿ ಇಲ್ಲಿನವರು ಯಾವತ್ತೂ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿಲ್ಲ ಎಂಬುದು ಅಚ್ಚರಿಯಾದರೂ ಸತ್ಯ. ಗ್ರಾಮದ ಸತ್ ಸಂಪ್ರದಾಯಕ್ಕೆ ಜಿಲ್ಲೆಯ ಜಿಲ್ಲಾಧಿಕಾರಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 120 ಮನೆಗಳ 800 ಜನಸಂಖ್ಯೆ ಹೊಂದಿರುಹ ಈ ಹಳ್ಳಿ ಸುತ್ತಮುತ್ತಲಿನವರಿಗೆ ಆದರ್ಶಪ್ರಾಯವಾಗಿದೆ.

ನ್ಯಾಯಾಲಯಕ್ಕೆ ಹೋಗುವ ಪರಿಸ್ಥಿತಿ ಎದುರಾಗಿಲ್ಲ: ಘೋಸಿ ಬ್ಲಾಕ್ ಕೇಂದ್ರ ಕಚೇರಿಯಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿರುವ ಈ ಗ್ರಾಮವು ಇಂದಿನ ಯುಗಕ್ಕಿಂತ ಸಂಪೂರ್ಣವಾಗಿ ವಿಭಿನ್ನ ಮತ್ತು ವಿಶಿಷ್ಟವಾಗಿದೆ. ಏನೇ ತಕರಾರು ಬಂದರೂ ಅದನ್ನು ತಮ್ಮಲ್ಲೇ ಬಗೆಹರಿಸಿಕೊಳ್ಳುವ ರೀತಿಯಲ್ಲಿ ಗ್ರಾಮದಲ್ಲಿ ಒಗ್ಗಟ್ಟಿನ ಸೂತ್ರ ಪಾಲಿಸಲಾಗುತ್ತಿದೆ ಎನ್ನುತ್ತಾರೆ ಗ್ರಾಮದ ಹಿರಿಯರಾದ ನಂದಕಿಶೋರ್ ಪ್ರಸಾದ್. ಇಲ್ಲಿಯವರೆಗೂ ಗ್ರಾಮದಲ್ಲಿ ಪೊಲೀಸ್ ಠಾಣೆ ಅಥವಾ ನ್ಯಾಯಾಲಯದ ಮೆಟ್ಟಿಲು ಹತ್ತುವಷ್ಟು ದೊಡ್ಡ, ಜಟಿಲ, ಗಂಭೀರ ಸ್ವರೂಪದ ಯಾವುದೇ ತಕರಾರು ನಡೆದಿಲ್ಲ.

ವಿವಾದವಾದಾಗ ಹಿರಿಯರಿಂದ ತಕ್ಷಣ ಮಧ್ಯಸ್ಥಿಕೆ: ಗ್ರಾಮಸ್ಥ ಸಂಜಯ್‌ಕುಮಾರ್ ಮಾತನಾಡಿ, 'ಸಣ್ಣಪುಟ್ಟ ವ್ಯಾಜ್ಯಗಳನ್ನು ಗ್ರಾಮದ ಹಿರಿಯರ ಮುಂದಾಳತ್ವ ವಹಿಸಿ ಬಗೆಹರಿಸಿಕೊಳ್ಳುತ್ತೇವೆ. ಗ್ರಾಮದ ಕೆಲ ಹಿರಿಯರು ವಿವಾದವಾದರೆ ಕೂಡಲೇ ಮಧ್ಯ ಪ್ರವೇಶಿಸಿ ಎರಡೂ ಕಡೆಯವರ ಮನವೊಲಿಸಿ ಸಮಾಧಾನಪಡಿಸುತ್ತಾರೆ. ಈ ಗ್ರಾಮದ ಸಂಪ್ರದಾಯ ಮಾದರಿಯಾಗುವ ಮೂಲಕ ಜನತೆಗೆ ಶಾಂತಿ, ಶಾಂತಿಯ ಸಂದೇಶ ನೀಡುತ್ತಿದೆ ಎಂದು ಪ್ರಶಂಸೆ ವ್ಯಕ್ತವಾಗುತ್ತಿದೆ' ಎಂದರು.

'50 ವರ್ಷಗಳ ಹಿಂದೆ ಮೇಕೆ ಸಾಕಾಣಿಕೆ ಕಾರಣದಿಂದ ವಿವಾದಗಳಾಗುತ್ತಿದ್ದವು. ನೂರಾರು ಗ್ರಾಮಸ್ಥರು ಮೇಕೆಗಳನ್ನು ಸಾಕುತ್ತಿದ್ದರು. ಆದರೆ ನಂತರ ಮೇಕೆ ಸಾಕಾಣಿಕೆಯಲ್ಲಿನ ವಿವಾದವನ್ನು ಗ್ರಾಮಸ್ಥರು ಒಮ್ಮತದಿಂದ ತಡೆದರು' ಎನ್ನುತ್ತಾರೆ ನಂದ ಕಿಶೋರ್ ಯಾದವ್, ಗ್ರಾಮಸ್ಥ

'ಇದು ಯಾವುದೇ ಗ್ರಾಮಕ್ಕೆ ಉತ್ತಮ ಸಂಪ್ರದಾಯವಾಗಿದೆ. ಇತರ ಗ್ರಾಮಗಳ ಜನರು ಸಹ ಇದೇ ರೀತಿ ತಮ್ಮ ನಡುವಿನ ವಿವಾದವನ್ನು ಪರಿಹರಿಸಲು ಪ್ರಯತ್ನಿಸಬೇಕು. ನನ್ನ ಮಟ್ಟದಿಂದ ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ' ಎಂದು ಜೆಹಾನಾಬಾದ್ ರಿಚಿ ಪಾಂಡೆ ಹೇಳಿದರು.

ಗಾಂಧೀಜಿಯವರ ಅಹಿಂಸೆಯ ತತ್ವಗಳ ಪಾಲನೆ: ಬೆಟ್ಟಿಯಾ ಬಿಹಾರದ ಕಟರಾಂವ್ ಗ್ರಾಮವು ಬಿಹಾರದ ಪಶ್ಚಿಮ ಚಂಪಾರಣ್‌ನ ಗೌನಾಹಾ ಬ್ಲಾಕ್ ಪ್ರದೇಶದ ಒಂದು ಸಣ್ಣ ಗ್ರಾಮವಾಗಿದೆ. ಆದರೆ ಈ ಹಳ್ಳಿಯ ವಿಶೇಷತೆಯು ದೊಡ್ಡ ನಗರಗಳನ್ನೂ ಮೀರಿಸಿದೆ. ಕಡಿಮೆ ಜನಸಂಖ್ಯೆ ಹೊಂದಿರುವ ಬಿಹಾರದ ಈ ಗ್ರಾಮ ದೇಶಕ್ಕೇ ಮಾದರಿಯಾಗಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಈ ಗ್ರಾಮದಲ್ಲಿ ಯಾವುದೇ ಅಪರಾಧ ನಡೆಯದಿರುವುದು ಆಶ್ಚರ್ಯವಾದರೂ ಸತ್ಯ. ಅದಕ್ಕಿಂತ ಹೆಚ್ಚಾಗಿ ಈ ಗ್ರಾಮದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲೇ ಶಾಂತಿ ವ್ಯವಸ್ಥೆ ಮರುಸ್ಥಾಪಿಸಲಾಗಿತ್ತು.

ಕಟರಾಂವ್ ಗ್ರಾಮದಲ್ಲಿಲ್ಲ ಅಪರಾಧ ಚಟುವಟಿಕೆ: ಈ ಗ್ರಾಮದ ಜನಸಂಖ್ಯೆ ಸುಮಾರು ಎರಡು ಸಾವಿರ. ಕಟ್ರಾನ್ ಗ್ರಾಮವು ಪಾಟ್ನಾದಿಂದ 285 ಕಿಮೀ ದೂರದಲ್ಲಿದೆ. ಇದು ಥಾರು, ಮುಸ್ಲಿಂ, ಮುಶಾರ್ ಮತ್ತು ಧಂಗರ್‌ನಂತಹ ವಿವಿಧ ಸಮುದಾಯಗಳ ಜನರನ್ನು ಹೊಂದಿದೆ. ಈ ಗ್ರಾಮ ಸಹೋದರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುತ್ತದೆ. 1947ರಲ್ಲಿ ಭಾರತ ಸ್ವತಂತ್ರವಾದಾಗಿನಿಂದ ಇಲ್ಲಿಯ ಅಧಿಕಾರಿಗಳು ಒಂದೇ ಒಂದು ಪ್ರಕರಣವನ್ನು ದಾಖಲಿಸಿಲ್ಲ. ಇಲ್ಲಿಯವರೆಗೂ ಇಲ್ಲಿ ಯಾವುದೇ ರೀತಿಯ ಜಗಳ-ವಿವಾದ, ಕಳ್ಳತನ-ದರೋಡೆ ನಡೆದಿಲ್ಲ. ಸ್ವಾತಂತ್ರ್ಯ ಬಂದ ನಂತರ ಈ ಗ್ರಾಮದಲ್ಲಿ ಒಂದೇ ಒಂದು ಪ್ರಕರಣವೂ ದಾಖಲಾಗಿಲ್ಲ ಎಂಬುದು ದಾಖಲೆಯಾಗಿದೆ.

ಒಂದೇ ಒಂದು ಎಫ್‌ಐಆರ್ ದಾಖಲಾಗಿಲ್ಲ: ಇಂದಿನ ಯುಗದಲ್ಲಿ ಜನರು ತಮ್ಮ ಸ್ವಾರ್ಥ ಮತ್ತು ದುರಾಸೆಗಾಗಿ ಅಪರಾಧ ಮಾಡಲು ಹಿಂಜರಿಯುವುದಿಲ್ಲ. ಆದರೆ ಈ ಗ್ರಾಮದ ಸಂಪ್ರದಾಯವೇ ಭಿನ್ನ. ಇಲ್ಲಿನ ಜನರು ಇಡೀ ಸಮಾಜವನ್ನು ಜೊತೆಯಲ್ಲಿ ಕರೆದೊಯ್ಯುತ್ತಾರೆ. ಬ್ರಿಟಿಷ್ ಆಡಳಿತವನ್ನೂ ನೋಡಿದ ಹಳ್ಳಿಯ ಹಿರಿಯರೊಬ್ಬರು ಹೇಳುವ ಪ್ರಕಾರ- ಈ ಹಳ್ಳಿಗೆ ಪೊಲೀಸರ ಅವಶ್ಯಕತೆಯೇ ಇರಲಿಲ್ಲ. ಬುಡಕಟ್ಟು ಜನಾಂಗದ ಪ್ರಾಬಲ್ಯದ ಈ ಗ್ರಾಮವನ್ನು ತೀರಾ ಹಿಂದುಳಿದಿದೆ ಎಂದು ಪರಿಗಣಿಸಲಾಗಿದೆ. ಆದರೆ ಇಲ್ಲಿನವರ ಉನ್ನತ ಆಲೋಚನೆ ಎಲ್ಲರನ್ನೂ ಮೀರಿಸಿದೆ. ಆಧುನಿಕ ಹಾಗೂ ವಿದ್ಯಾವಂತ ಸಮಾಜ ಎಂದು ಕರೆಸಿಕೊಳ್ಳುವವರಿಗಿಂತ ತಾವು ಮುಂದಿದ್ದೇವೆ ಎಂಬುದನ್ನು ಕಟರಾಂವ್ ಗ್ರಾಮದ ಜನರು ಸಾಬೀತುಪಡಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪೊಲೀಸ್ ಆಡಳಿತವೂ ಈ ಗ್ರಾಮದ ಆದರ್ಶಕ್ಕೆ ನಮನ ಸಲ್ಲಿಸುತ್ತಿದೆ.

ಪ್ರಕರಣ ಇತ್ಯರ್ಥವಾಗುವುದು ಹೀಗೆ..: ಇಲ್ಲಿ ಗೋಮಸ್ತ ಬಾಯವಸ್ಥ ಪದ್ಧತಿಯಡಿ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುತ್ತದೆ. ಈ ವ್ಯವಸ್ಥೆಯು 1950 ರ ದಶಕದಲ್ಲಿ ಪ್ರಾರಂಭವಾಯಿತು. ಈ ವ್ಯವಸ್ಥೆಯು ಬಿಹಾರದ ಮೊದಲ ಮುಖ್ಯಮಂತ್ರಿ ಶ್ರೀ ಕೃಷ್ಣ ಸಿನ್ಹಾ ಅವರ ಚಿಂತನೆಯ ಫಲ. ಗೋಮಸ್ಥರು ಕಟರಾಂವ್​ನಲ್ಲಿ ಉದ್ಭವಿಸುವ ಸಣ್ಣ ವಿವಾದಗಳನ್ನು ಸೌಹಾರ್ದಯುತವಾಗಿ ಪರಿಹರಿಸುತ್ತಾರೆ. ಈ ವ್ಯವಸ್ಥೆಯನ್ನು ಇಂದಿಗೂ ಇಲ್ಲಿ ಗೌರವಿಸಲಾಗುತ್ತದೆ. ಈ ಕಾರಣದಿಂದಲೇ ಗೋಮಸ್ಥನು ತಪ್ಪಿತಸ್ಥನನ್ನು ಶಿಕ್ಷಿಸಬಹುದು. ಪಂಚಾಯತ್ ವ್ಯವಸ್ಥೆಯಲ್ಲಿ ಚುನಾಯಿತ ಪ್ರತಿನಿಧಿಗಳನ್ನು ಹೊಂದಿರುವ ಕಟರಾಂವ್ ತನ್ನ ಗೋಮಸ್ಥರ ಮೇಲೆ ಅಚಲವಾದ ನಂಬಿಕೆಯನ್ನು ಹೊಂದಿದೆ. ಗ್ರಾಮವು ಈವರೆಗೆ ಗೋಮಸ್ಥರು ನೀಡಿದ ನಿರ್ಣಯಗಳನ್ನು ಪಾಲಿಸಿದೆ. ಇದೇ ಕಾರಣದಿಂದ ಗ್ರಾಮದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ 75 ವರ್ಷಗಳಿಂದ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಬರಲಾಗಿದೆ.

ಇದನ್ನೂ ಓದಿ: 40 ವರ್ಷದಿಂದ ಪೊಲೀಸ್​ ಠಾಣೆ ನೋಡದ ಗ್ರಾಮಸ್ಥರು: ತೆಲಂಗಾಣದಲ್ಲೊಂದು 'ವ್ಯಾಜ್ಯ ಮುಕ್ತ ಗ್ರಾಮ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.