ಕೈಮೂರ್ (ಬಿಹಾರ): ತಲೆಯಿಂದ ತೆಂಗಿನಕಾಯಿ ಒಡೆಯುವ ಮೂಲಕ ಇಂದು ವ್ಯಕ್ತಿಯೊಬ್ಬರು ವಿಶ್ವದಾಖಲೆ ಮಾಡಿದ್ದಾರೆ. ಹೆಡ್ ಮ್ಯಾನ್ ಎಂದು ಪ್ರಸಿದ್ಧರಾಗಿರುವ ಲಾಲ್ ಧರ್ಮೇಂದ್ರ ಸಿಂಗ್ ತಮ್ಮ ಅದ್ಭುತ ಸಾಹಸಗಳಿಂದ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಜೊತೆಗೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮತ್ತು ಇಂಡಿಯಾ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಸೇರ್ಪಡೆಗೊಂಡಿದ್ದು, ಅವರನ್ನು ಹೆಡ್‌ಮ್ಯಾನ್ ಎಂಬ ಹೆಸರಿನಿಂದ ಜಗತ್ತು ಗುರುತಿಸುತ್ತಿದೆ.
ಧರ್ಮೇಂದ್ರ ಅವರು ಕೈಮೂರ್ ಜಿಲ್ಲೆಯ ರಾಮಗಢ ಗ್ರಾಮದ ನಿವಾಸಿ. ಇವರು ಪ್ರಸ್ತುತ ತ್ರಿಪುರಾ ಸ್ಟೇಟ್ ರೈಫಲ್ಸ್‌ನಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ತಂದೆ ಅಪ್ಲೇಶ್ವರ್ ಸಿಂಗ್ ಒಬ್ಬ ಸಾಮಾನ್ಯ ರೈತ. ತಾಯಿ ಕುಂತಿದೇವಿ ಸರಪಂಚ್ ಆಗಿ ಸೇವೆ ಸಲ್ಲಿಸಿದ್ದರು. ತನ್ನ 12 ನೇ ವಯಸ್ಸಿನಲ್ಲಿ ಧರ್ಮೇಂದ್ರ ಅವರಿಗೆ ಮೊದಲ ಬಾರಿಗೆ ತೆಂಗಿನಕಾಯಿ ಒಡೆಯುವ ಆಲೋಚನೆ ಬಂದಿತು. ಅಂದಿನಿಂದ ಇಂದಿನವರೆಗೆ, ಕಠಿಣ ಪರಿಶ್ರಮದಿಂದ ಧರ್ಮೇಂದ್ರ ಅನೇಕ ವಿಶ್ವ ದಾಖಲೆಗಳನ್ನು ಬರೆದಿದ್ದಾರೆ.
ಸಾಧನೆಯ ಸರದಾರ ಧರ್ಮೇಂದ್ರ: ಧರ್ಮೇಂದ್ರ ಅವರು ಅನೇಕ ಟಿವಿ ಶೋಗಳು ಮತ್ತು ಸ್ಟೇಜ್ ಶೋಗಳನ್ನು ಮಾಡಿದ್ದಾರೆ. 2017 ರಲ್ಲಿ, ಅವರು 2 ನಿಮಿಷ 50 ಸೆಕೆಂಡುಗಳಲ್ಲಿ ತಮ್ಮ ತಲೆಯಿಂದ 51 ರಾ ಬೆಲ್ ಸೇಬುಗಳನ್ನು ಒಡೆಯುವ ಮೂಲಕ ಚೀನಾ ವಿರುದ್ಧ ವಿಶ್ವದಾಖಲೆ ಬರೆದರು. ಇದರೊಂದಿಗೆ 2017ರಲ್ಲಿ ಚೀನಾ ವಿರುದ್ಧ 1 ನಿಮಿಷದಲ್ಲಿ 57 ತೆಂಗಿನಕಾಯಿ ಒಡೆಯುವ ಮೂಲಕ ಮತ್ತೊಂದು ವಿಶ್ವದಾಖಲೆ ಮಾಡಿದ್ದರು. ಇದಲ್ಲದೇ 2021ರಲ್ಲಿ 12 ಎಂಎಂನ 15 ಕಂಬಿಗಳನ್ನು 1 ನಿಮಿಷದೊಳಗೆ ಬಗ್ಗಿಸುವ ಮೂಲಕ. ಅಮೆರಿಕದ ಲೆಸ್ ಡೇವಿಸ್ ಅವರ ದಾಖಲೆಯನ್ನು ಮುರಿದಿದ್ದರು. ಅವರು 2014 ರಲ್ಲಿ, 1 ನಿಮಿಷದಲ್ಲಿ 10 ಕಂಬಿಗಳನ್ನು ಬಗ್ಗಿಸಿದ್ದರು.
ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ : ಧರ್ಮೇಂದ್ರ ಅವರು 12 ಎಂಎಂನ 24 ಕಂಬಿಗಳನ್ನು 1 ನಿಮಿಷದಲ್ಲಿ ತಮ್ಮ ತಲೆಯಿಂದ ಬಗ್ಗಿಸುವ ಮೂಲಕ ದಾಖಲೆಯನ್ನು ಮಾಡಿದ್ದಾರೆ. ಈ ಮೊದಲು ಈ ದಾಖಲೆ ಅರ್ಮೇನಿಯಾದ ಅರ್ಮೆನ್ ಅಡಾಂಟ್ಸ್ ಹೆಸರಿನಲ್ಲಿತ್ತು. ಅವರು ಒಂದು ನಿಮಿಷದಲ್ಲಿ 18 ಬಾರ್‌ಗಳನ್ನು ಬಗ್ಗಿಸಿ ದಾಖಲೆ ನಿರ್ಮಿಸಿದ್ದರು.
ಅಲ್ಲದೇ ಧರ್ಮೇಂದ್ರ ಅವರು 2020ರಲ್ಲಿ ದೇಹದ ಹಿಂಭಾಗದಿಂದ 1 ನಿಮಿಷದಲ್ಲಿ 12 ಎಂಎಂ 17 ಕಂಬಿಗಳನ್ನು ಬಗ್ಗಿಸುವ ಮೂಲಕ ದಾಖಲೆ ಮಾಡಿದರು. ಈ ಸ್ಪರ್ಧೆಯಲ್ಲಿ 31 ದೇಶಗಳ ಆಟಗಾರರು ಭಾಗವಹಿಸಿದ್ದರು. ಆದರೆ ಭಾರತದ ಧರ್ಮೇಂದ್ರ ಪಂದ್ಯವನ್ನು ಗೆದ್ದಿದ್ದು, ಈ ಸ್ಪರ್ಧೆಯನ್ನು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಆಯೋಜಿಸಿತ್ತು.
ಸ್ಕಿಪ್ಪಿಂಗ್‌ನಲ್ಲೂ ವಿಶ್ವ ದಾಖಲೆ : 2020 ರಲ್ಲಿ, ಅವರು 10 ಮೀಟರ್ ಹಗ್ಗದೊಂದಿಗೆ 30 ಸೆಕೆಂಡುಗಳಲ್ಲಿ 30 ಬಾರಿ ಸ್ಕಿಪ್ಪಿಂಗ್ ಮಾಡಿ ವಿಶ್ವದಾಖಲೆ ಮಾಡಿದರು. ಈ ಹಿಂದೆ ಈ ದಾಖಲೆ ಜಪಾನ್ ಆಟಗಾರನ ಹೆಸರಾಗಿತ್ತು. ಜಪಾನ್ ಆಟಗಾರ 10 ಮೀಟರ್ ಹಗ್ಗದಲ್ಲಿ 30 ಸೆಕೆಂಡುಗಳಲ್ಲಿ 26 ಬಾರಿ ಸ್ಕಿಪ್ಪಿಂಗ್ ಮಾಡಿದ್ದರು. ವಿಶ್ವದಾಖಲೆಯ ಸರದಾರನಾಗಿ ಧರ್ಮೇಂದ್ರ ಹೊರಹೊಮ್ಮಿದ್ದಾರೆ.
ಇದನ್ನೂ ಓದಿ :ರಾಯಲ್ ರೈಡ್ ಮೂಲಕ ಶಾಲೆಗೆ ಹೋಗ್ತಾನೆ ವಿದ್ಯಾರ್ಥಿ.. ಕುದುರೆಯೇ ಲಲಿತ ಕುಮಾರನ ವಾಹನ!