ವಡಾನಗರ್(ಗುಜರಾತ್): ನರೇಂದ್ರ ಮೋದಿ ತಮ್ಮ ಬಾಲ್ಯದಲ್ಲಿ ಟೀ ಮಾರುತ್ತಿದ್ದ ವಡಾನಗರ್‌ದ ರೈಲ್ವೇ ಸ್ಟೇಷನ್‌ಗೆ ಭೇಟಿ ಕೊಟ್ಟಿರುವ ಕೇಂದ್ರ ಶಿಕ್ಷಣ ಹಾಗು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಧರ್ಮೇಂದ್ರ ಪ್ರಧಾನ್ ಹರ್ಷ ವ್ಯಕ್ತಪಡಿಸಿದ್ದಾರೆ. ನರೇಂದ್ರ ಮೋದಿ ಅವರು ತಮ್ಮ ಬದುಕಿನ ಸ್ಫೂರ್ತಿದಾಯಕ ಪಯಣ ಶುರು ಮಾಡಿರುವ ಈ ಜಾಗಕ್ಕೆ ಭೇಟಿ ನೀಡಿರುವುದು ನನಗೆ ದಕ್ಕಿದ ದೊಡ್ಡ ಗೌರವ ಎಂದು ಹೇಳಿದ್ದಾರೆ.
ಭೇಟಿಯ ನಂತರ ಈ ಕುರಿತು ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಸಚಿವ ಪ್ರಧಾನ್, ವಡಾನಗರ್‌ದಲ್ಲಿರುವ ಟೀ ಅಂಗಡಿಯಲ್ಲಿ ನರೇಂದ್ರ ಮೋದಿಯವರು ತಮ್ಮ ತಂದೆಗೆ ಸಹಾಯ ಮಾಡುತ್ತಿದ್ದರು. ಈ ಪ್ರದೇಶವು ಧೈರ್ಯ, ದೃಢ ಸಂಕಲ್ಪ ಹಾಗು ಕಠಿಣ ಪರಿಶ್ರಮದ ದ್ಯೋತಕ ಎಂದು ಬಣ್ಣಿಸಿದ್ದಾರೆ. ನರೇಂದ್ರ ಮೋದಿ ತನ್ನ ತಂದೆಗೆ ಸಹಾಯ ಮಾಡುತ್ತಿದ್ದ ವಡಾನಗರ್‌ದ ರಸ್ತೆಗಳು ಮತ್ತು ಐತಿಹಾಸಿಕ ಟಿ ಅಂಗಡಿಯು ಪ್ರತಿಯೊಬ್ಬರಿಗೂ ಸ್ಫೂರ್ತಿ, ಪ್ರೇರಣೆಯಾಗಬಲ್ಲದು. ಅಷ್ಟೇ ಅಲ್ಲ, ಇದು ಓರ್ವ ವ್ಯಕ್ತಿಗೆ ಏನೇ ಕಷ್ಟ-ಕಾರ್ಪಣ್ಯಗಳು ಬಂದೊದಗಿದರೂ ಆತ ಯಶಸ್ವಿಯಾಗಿ ಲಕ್ಷಾಂತರ ಮಂದಿಗೆ ಭರವಸೆಯ ಕಿರಣವಾಗಬಲ್ಲ ಎಂಬ ನಂಬಿಕೆಯನ್ನು ಬಲಗೊಳಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
-
By-lanes of Vadnagar and the historic tea stall where PM @narendramodi used to help his father in his formative years serves as an inspiration for everyone. It reinforces the fact that despite adversities one can still succeed and be a ray of hope to millions. pic.twitter.com/nkew2EYUjN
— Dharmendra Pradhan (@dpradhanbjp) September 10, 2022 " class="align-text-top noRightClick twitterSection" data="
">By-lanes of Vadnagar and the historic tea stall where PM @narendramodi used to help his father in his formative years serves as an inspiration for everyone. It reinforces the fact that despite adversities one can still succeed and be a ray of hope to millions. pic.twitter.com/nkew2EYUjN
— Dharmendra Pradhan (@dpradhanbjp) September 10, 2022By-lanes of Vadnagar and the historic tea stall where PM @narendramodi used to help his father in his formative years serves as an inspiration for everyone. It reinforces the fact that despite adversities one can still succeed and be a ray of hope to millions. pic.twitter.com/nkew2EYUjN
— Dharmendra Pradhan (@dpradhanbjp) September 10, 2022
ಇದನ್ನೂ ಓದಿ: ರಸ್ತೆ ಬದಿಯಲ್ಲಿ ಟೀ ಸೇವಿಸಿ, ಪಾನ್ ಸವಿದ ಪ್ರಧಾನಿ ಮೋದಿ.. ವಿಶ್ವನಾಥನಿಗೆ ಢಮರುಗ ಸೇವೆ ಸಲ್ಲಿಸಿ ಮತಯಾಚನೆ!
ಪ್ರಧಾನಿ ಓಡಾಡಿದ ರಸ್ತೆಗಳು ಹಾಗು ರೈಲ್ವೇ ಸ್ಟೇಷನ್‌ಗೆ ತೆರಳವುದಕ್ಕೂ ಮುನ್ನ ಸಚಿವರು, ವಡಾನಗರ್‌ದ ಪ್ರಸಿದ್ಧ ಹಟ್ಕೇಶ್ವರ ಮಹದೇವ್ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಮಾತನಾಡಿದ ಅವರು, ಸರ್ವರ ಒಳಿತಿಗೆ ಪ್ರಾರ್ಥಿಸಿರುವುದಾಗಿ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ದೊಡ್ಡಬಳ್ಳಾಪುರ ಬಿಜೆಪಿ ಜನಸ್ಪಂದನ: ಪಕ್ಷಕ್ಕೆ ನೆಲೆ ಇಲ್ಲದೆಡೆ ಬಲ ಪ್ರದರ್ಶಿಸಿ ಸೈ ಎನಿಸಿಕೊಂಡ ವಲಸಿಗ ಸಚಿವರು