ಭುವನೇಶ್ವರ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ನ ರೀಫಿಲ್ ಬುಕಿಂಗ್ ಮತ್ತು ಹಲವಾರು ಇತರ ಗ್ರಾಹಕ - ಕೇಂದ್ರಿತ ಉಪಕ್ರಮಗಳಿಗಾಗಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಮಿಸ್ಡ್ - ಕಾಲ್ ಸೌಲಭ್ಯಕ್ಕೆ ಚಾಲನೆ ನೀಡಿದ್ದಾರೆ.
ರೀಫಿಲ್ ಬುಕ್ಕಿಂಗ್ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಒಂದೇ ಸಂಖ್ಯೆಯ (8454955555) ಮೂಲಕ ಹೊಸ ಎಲ್ಪಿಜಿ ಸಂಪರ್ಕ ನೋಂದಾಯಿಸಲು ಸಚಿವರು ಮಿಸ್ಡ್-ಕಾಲ್ ಸೌಲಭ್ಯ ಪ್ರಾರಂಭಿಸಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರದ "ಗ್ರಾಹಕ ಕೇಂದ್ರಿತ ಉಪಕ್ರಮಗಳ" ಬಗ್ಗೆ ಸರಣಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
-
LPG is only a missed-call away.
— Dharmendra Pradhan (@dpradhanbjp) January 1, 2021 " class="align-text-top noRightClick twitterSection" data="
Give a missed-call on 8454955555 to book an Indane LPG refill. @IndianOilcl #DigitalIndia#EaseOfBooking pic.twitter.com/IkY7FwwwI7
">LPG is only a missed-call away.
— Dharmendra Pradhan (@dpradhanbjp) January 1, 2021
Give a missed-call on 8454955555 to book an Indane LPG refill. @IndianOilcl #DigitalIndia#EaseOfBooking pic.twitter.com/IkY7FwwwI7LPG is only a missed-call away.
— Dharmendra Pradhan (@dpradhanbjp) January 1, 2021
Give a missed-call on 8454955555 to book an Indane LPG refill. @IndianOilcl #DigitalIndia#EaseOfBooking pic.twitter.com/IkY7FwwwI7
"ಡಿಜಿಟಲ್ ಇಂಡಿಯಾಕ್ಕಾಗಿ ಪಿಎಂ ನರೇಂದ್ರ ಮೋದಿಯವರ ದೃಷ್ಟಿಗೆ ಅನುಗುಣವಾಗಿ, ಈ ಗ್ರಾಹಕ - ಕೇಂದ್ರಿತ ಉಪಕ್ರಮಗಳು ಎಲ್ಪಿಜಿ ರೀಫಿಲ್ ಬುಕಿಂಗ್ ಮತ್ತು ಹೊಸ ಸಂಪರ್ಕ ನೋಂದಣಿಯನ್ನು ಹೆಚ್ಚು ಅನುಕೂಲಕರ ಮತ್ತು ಉಚಿತವಾಗಿ ಮಾಡುತ್ತದೆ. ಇದು ಗ್ರಾಹಕರಿಗೆ, ವಿಶೇಷವಾಗಿ ವೃದ್ಧರಿಗೆ ಮತ್ತು ಗ್ರಾಮೀಣ ಪ್ರದೇಶದವರಿಗೆ ಪ್ರಯೋಜನವನ್ನು ನೀಡುತ್ತದೆ" ಎಂದಿದ್ದಾರೆ.
ಭಾರತದ ಮೊದಲ ಸ್ಥಳೀಯವಾಗಿ ದಿಗ್ಬಾಯ್ ರಿಫೈನರಿಯಿಂದ 100 ಆಕ್ಟೇನ್ ಪೆಟ್ರೋಲ್ ಅನ್ನು ಅಭಿವೃದ್ಧಿಪಡಿಸಿಲಾಗಿದ್ದು, ಇದಕ್ಕೂ ಕೂಡ ಪೆಟ್ರೋಲಿಯಂ ಸಚಿವರು ಚಾಲನೆ ನೀಡಿದ್ದಾರೆ. "ದೇಶದ ಅತ್ಯಂತ ಹಳೆಯ ಕಾರ್ಯಾಚರಣಾ ಸಂಸ್ಕರಣಾಗಾರವು ಮಥುರಾ ಮತ್ತು ಬಾರೌನಿ ಸಂಸ್ಕರಣಾಗಾರಗಳ ಗುಂಪಿಗೆ ಸೇರಿಕೊಂಡಿದ್ದು, ಇದು ಪೆಟ್ರೋಲ್‌ನ ಸುಧಾರಿತ ಆವೃತ್ತಿಯನ್ನು ಉತ್ಪಾದಿಸುತ್ತದೆ" ಎಂದು ಹೇಳಿದ್ದಾರೆ.