ಹೈದರಾಬಾದ್: ರಂಜಾನ್ ಹಬ್ಬದ ನಂತರ ಇಸ್ಲಾಂ ಧರ್ಮೀಯರ ಎರಡನೇ ಅತಿದೊಡ್ಡ ಹಬ್ಬವಂದರೆ ಅದು ಬಕ್ರೀದ್. ಇದನ್ನು ಈದ್-ಉಲ್-ಅಧಾ, ಬಕ್ರೀದ್, ಅಥವಾ ಅರೇಬಿಕ್ ಭಾಷೆಯಲ್ಲಿ ಈದ್ ಉಲ್ ಝುಹಾ ಎಂದೂ ಕರೆಯಲಾಗುತ್ತದೆ. ಇಸ್ಲಾಂ ಧರ್ಮದಲ್ಲಿ ಬಕ್ರೀದ್ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಇಸ್ಲಾಮಿಕ್ ಕ್ಯಾಲೆಂಡರ್‌ನ 12 ನೇ ತಿಂಗಳಾದ ಜುಲ್-ಹಿಜ್ಜಾದ 10 ನೇ ದಿನದಂದು ಬಕ್ರೀದ್ ಅನ್ನು ಆಚರಿಸಲಾಗುತ್ತದೆ.
-
#WATCH | Delhi: Former Union Minister and BJP leader Mukhtar Abbas Naqvi offers namaz at Panja Sharif Dargah, Kashmere Gate, on the occasion of #EidAlAdha pic.twitter.com/SR2Tlyb37B
— ANI (@ANI) June 29, 2023 " class="align-text-top noRightClick twitterSection" data="
">#WATCH | Delhi: Former Union Minister and BJP leader Mukhtar Abbas Naqvi offers namaz at Panja Sharif Dargah, Kashmere Gate, on the occasion of #EidAlAdha pic.twitter.com/SR2Tlyb37B
— ANI (@ANI) June 29, 2023#WATCH | Delhi: Former Union Minister and BJP leader Mukhtar Abbas Naqvi offers namaz at Panja Sharif Dargah, Kashmere Gate, on the occasion of #EidAlAdha pic.twitter.com/SR2Tlyb37B
— ANI (@ANI) June 29, 2023
ನವದೆಹಲಿಯ ಜಾಮಾ ಮಸೀದಿಯಲ್ಲಿ ಬಕ್ರೀದ್ ನಿಮಿತ್ತ ನಮಾಜ್ ಮಾಡಲಾಯಿತು. ಇನ್ನು ಕೇಂದ್ರದ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ ಕಾಶ್ಮೀರಿ ಗೇಟ್‌ನ ಪಂಜಾ ಶರೀಫ್ ದರ್ಗಾದಲ್ಲಿ ನಮಾಜ್ ಮಾಡಿದರು.
-
#WATCH | Bhopal, Madhya Pradesh: Devotees gather to offer prayers on the occasion of #EidAlAdha pic.twitter.com/oOQbi8LFo9
— ANI MP/CG/Rajasthan (@ANI_MP_CG_RJ) June 29, 2023 " class="align-text-top noRightClick twitterSection" data="
">#WATCH | Bhopal, Madhya Pradesh: Devotees gather to offer prayers on the occasion of #EidAlAdha pic.twitter.com/oOQbi8LFo9
— ANI MP/CG/Rajasthan (@ANI_MP_CG_RJ) June 29, 2023#WATCH | Bhopal, Madhya Pradesh: Devotees gather to offer prayers on the occasion of #EidAlAdha pic.twitter.com/oOQbi8LFo9
— ANI MP/CG/Rajasthan (@ANI_MP_CG_RJ) June 29, 2023
ಇನ್ನುಳಿದಂತೆ ಮುಂಬೈ, ದೆಹಲಿ, ಮಧ್ಯಪ್ರದೇಶ, ಸೇರಿ ದೇಶದ ಎಲ್ಲ ಕಡೆ ಮುಸ್ಲಿಮರು ಸಂಭ್ರಮದ ಬಕ್ರೀದ್ ಆಚರಣೆ ಮಾಡುತ್ತಿದ್ದಾರೆ. ಈದ್ ಉಲ್ ಝಹಾ ನಿಮಿತ್ತ ಮುಸ್ಲಿಮರು ಎಲ್ಲ ಕಡೆ ನಮಾಜ್ ಮೂಲಕ ಪ್ರಾರ್ಥನೆ ಸಲ್ಲಿಸಿದರು.
-
#WATCH | " Top most security and law & order arrangements have been made on the occasion of #EidAlAdha ...adequate deployment of security forces have been done, seniors officials are on the field...": Delhi Police Special CP Deepender Pathak pic.twitter.com/GgxxDA1Iti
— ANI (@ANI) June 29, 2023 " class="align-text-top noRightClick twitterSection" data="
">#WATCH | " Top most security and law & order arrangements have been made on the occasion of #EidAlAdha ...adequate deployment of security forces have been done, seniors officials are on the field...": Delhi Police Special CP Deepender Pathak pic.twitter.com/GgxxDA1Iti
— ANI (@ANI) June 29, 2023#WATCH | " Top most security and law & order arrangements have been made on the occasion of #EidAlAdha ...adequate deployment of security forces have been done, seniors officials are on the field...": Delhi Police Special CP Deepender Pathak pic.twitter.com/GgxxDA1Iti
— ANI (@ANI) June 29, 2023
ನವದೆಹಲಿ, ಉತ್ತರ ಪ್ರದೇಶ ಸೇರಿ ಹಲವೆಡೆ ಭದ್ರತೆ ಮತ್ತು ಕಾನೂನು ಮತ್ತು ಸುವ್ಯವಸ್ಥೆ ವ್ಯವಸ್ಥೆ ಕಾಪಾಡಲು ಎಲ್ಲ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾಡಲಾಗಿದೆ. ಭದ್ರತಾ ಪಡೆಗಳ ಸಾಕಷ್ಟು ನಿಯೋಜನೆ ಮಾಡಲಾಗಿದೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದಾರೆ ಎಂದು ದೆಹಲಿ ಪೊಲೀಸ್ ವಿಶೇಷ ಸಿಪಿ ದೀಪೇಂದರ್ ಪಾಠಕ್ ಹೇಳಿದ್ದಾರೆ.
-
#WATCH | Delhi: Devotees offer namaz at Jama Masjid on the occasion of #EidAlAdha pic.twitter.com/HFxzviQoHO
— ANI (@ANI) June 29, 2023 " class="align-text-top noRightClick twitterSection" data="
">#WATCH | Delhi: Devotees offer namaz at Jama Masjid on the occasion of #EidAlAdha pic.twitter.com/HFxzviQoHO
— ANI (@ANI) June 29, 2023#WATCH | Delhi: Devotees offer namaz at Jama Masjid on the occasion of #EidAlAdha pic.twitter.com/HFxzviQoHO
— ANI (@ANI) June 29, 2023
2023 ರಲ್ಲಿ, ಬಕ್ರೀದ್ ಜೂನ್ 29 (ಇಂದು) ಆಚರಿಸಲಾಗುತ್ತಿದೆ. ಪ್ರತಿವರ್ಷ ಬಕ್ರೀದ್ ಆಚರಣೆಗೂ 10 ದಿನಗಳ ಮುನ್ನಾ ಅರ್ಧ ಚಂದಿರನ ದರ್ಶನವಾದರೆ 10 ದಿನಗಳ ಬಳಿಕ ಹಬ್ಬ ಆಚರಣೆ ಮಾಡುವುದು ಸಂಪ್ರದಾಯ. ಈ ವರ್ಷ ಜೂನ್ 19 ರಂದು ದೇಶದ ಕೆಲವು ಭಾಗಗಳಲ್ಲಿ ಅರ್ಧ ಚಂದ್ರನ ದರ್ಶನವಾಗಿತ್ತು. ಹಾಗಾಗಿ ಚಂದ್ರ ದರ್ಶನವಾದ ಹತ್ತನೇ ದಿನ ಅಂದರೆ ಇಂದು ಬಕ್ರೀದ್ ಆಚರಿಸಲಾಗುತ್ತಿದೆ. ಬಕ್ರೀದ್ ಅನ್ನು ಅರೇಬಿಕ್ ಭಾಷೆಯಲ್ಲಿ ಈದ್-ಉಲ್-ಅಝಾ ಎಂದೂ ಕರೆಯುತ್ತಾರೆ. ಈದ್-ಉಲ್-ಅಝಾ ಎಂದರೆ ತ್ಯಾಗದ ಸಂಕೇತ ಎಂದರ್ಥ. ಹಾಗಾಗಿ ಇದನ್ನು "ತ್ಯಾಗದ ಹಬ್ಬ" ಎಂದೂ ಕರೆಯಲಾಗುತ್ತದೆ.
ಬಕ್ರೀದ್ ಇಸ್ಲಾಂ ಧರ್ಮೀಯರ ಎರಡನೇ ಅತಿದೊಡ್ಡ ಹಬ್ಬವಾಗಿದೆ. ಧಾರ್ಮಿಕ ತಜ್ಞರ ಪ್ರಕಾರ, ರಂಜಾನ್ ತಿಂಗಳು ಮುಗಿದ 70 ದಿನಗಳ ನಂತರ ಬಕ್ರೀದ್ ಆಚರಿಸಲಾಗುತ್ತದೆ. ಪ್ರವಾದಿ ಇಬ್ರಾಹಿಂ ಅವರು ಅಲ್ಲಾಹುನಲ್ಲಿನ ನಂಬಿಕೆಯಿಂದ ಮಾಡಿದ ತ್ಯಾಗವನ್ನು ಸ್ಮರಿಸುವ ಸಲುವಾಗಿ ಪ್ರಪಂಚದಾದ್ಯಂತ ಇಸ್ಲಾಂ ಧರ್ಮೀಯರು ಈದ್ ಉಲ್ ಅಧಾ ಅಥವಾ ಬಕ್ರೀದ್ ಹಬ್ಬವನ್ನು ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಮೇಕೆ ಬಲಿ ಕೊಡಲಾಗುತ್ತದೆ.
ಇದನ್ನೂ ಓದಿ: ಬಕ್ರೀದ್: ಬದರಿನಾಥ್ ಧಾಮದ ಬದಲಿಗೆ ಈ ಬಾರಿ ಜೋಶಿಮಠದಲ್ಲಿ ನಮಾಜ್