ಶಿರಡಿ: ಯುಗಾದಿ ಹೊಸ ವರ್ಷದ ಸಂದರ್ಭದಲ್ಲಿ ಮುಂಬೈನ ರಾಜ್‌ದೀಪ್ ಗುಪ್ತಾ ಎಂಬ ಸಾಯಿಭಕ್ತ ಕುಟುಂಬವು ಶಿರಡಿ ಸಾಯಿಬಾಬಾಗೆ 800 ಗ್ರಾಂ ತೂಕದ ಚಿನ್ನದ ಕಿರೀಟ ಅರ್ಪಿಸಿದೆ. ಇದರ ಬೆಲೆ ಸುಮಾರು 30 ಲಕ್ಷ ರೂಪಾಯಿ ಎನ್ನಲಾಗಿದೆ. ಕೊರೊನಾ ನಿಯಮಗಳನ್ನು ಸಡಿಲಿಸಿದ ನಂತರ ದೇವಾಲಯಕ್ಕೆ ನೀಡಲಾದ ಅತಿದೊಡ್ಡ ದೇಣಿಗೆ ಇದಾಗಿದೆ ಎಂದು ಹೇಳಲಾಗುತ್ತಿದೆ.
ಮುಂಬೈನಿಂದ ರಾಜ್‌ದೀಪ್ ಗುಪ್ತಾ ಅವರು ಸಾಯಿಬಾಬಾರ ದರ್ಶನಕ್ಕೆ ಕುಟುಂಬಸಮೇತ ಶಿರಡಿಗೆ ಬಂದಿದ್ದರು. ಇವರೊಂದಿಗೆ ಶಿರಸಿ ನಗರ ಪಂಚಾಯತ್ ಮಾಜಿ ಉಪಮೇಯರ್ ನೀಲೇಶ್ ಕೋಟೆ, ಸಾಯಿ ಸಂಸ್ಥಾನದ ವಿಶ್ವತ್ ಉಪಸ್ಥಿತರಿದ್ದರು. ಮುಂಬೈನಲ್ಲಿ ನೆಲೆಸಿರುವ ಗುಪ್ತಾ ಕುಟುಂಬ ಶಿರಡಿ ಸಾಯಿಬಾಬಾ ಭಕ್ತರಾಗಿದ್ದು, ಈಗಾಗಲೇ ದೇವಾಲಯಕ್ಕೆ ಹಲವು ಬಾರಿ ದೇಣಿಗೆ ನೀಡಿದ್ದಾರೆ ಎಂದು ದೇವಾಲಯದ ಮಂಡಳಿಯವರು ತಿಳಿಸಿದ್ದಾರೆ.
ಇದನ್ನೂ ಓದಿ: ಕಮಲಾ ನೆಹರು ಉದ್ಯಾನವನದಲ್ಲಿ 4 ಮರಿಗಳಿಗೆ ಜನ್ಮ ನೀಡಿದ ಹುಲಿ
ಯುಗಾದಿ ಹೊಸ ವರ್ಷದ ಸಂದರ್ಭದಲ್ಲಿ ಸಾಯಿಬಾಬಾಗೆ ಈ ಚಿನ್ನದ ಕಿರೀಟವನ್ನು ನೀಡಲು ಬಯಸಿದ್ದರಂತೆ. ಕೊರೊನಾದಿಂದಾಗಿ ದೇಣಿಗೆಯ ಜೊತೆಗೆ ಭಕ್ತರ ಸಂಖ್ಯೆಯಲ್ಲೂ ಭಾರಿ ಕುಸಿತವಾಗಿತ್ತಂತೆ. ಇದೀಗ ನಿಯಮ ಸಡಿಲಿಸಿದ್ದು, ಶಿರಡಿಯಲ್ಲಿ ಧಾರ್ಮಿಕ ಕಾರ್ಯಗಳು ಆರಂಭವಾಗಿವೆ.