ETV Bharat / bharat

ಸಂಕ್ರಾಂತಿ ಸಂಭ್ರಮ: ವಾರಣಾಸಿ, ಕೋಲ್ಕತ್ತಾದ ಗಂಗಾಸಾಗರ್​ ಮೇಳಕ್ಕೆ ಹರಿದು ಬಂದ ಭಕ್ತ ಸಾಗರ - lohri

ದೇಶದೆಲ್ಲೆಡೆ ಇಂದು ಮಕರ ಸಂಕ್ರಾಂತಿ ಸಂಭ್ರಮ - ಗಂಗಾಸಾಗರ್​ನಲ್ಲಿ ನಾಗಾಸಾಧು ಸೇರಿದಂತೆ ಭಕ್ತರಿಂದ ಪವಿತ್ರ ಸ್ನಾನ - ಪಶ್ಚಿಮ ಬಂಗಾಳದಲ್ಲಿ ಗಂಗಾಸಾಗರ್​ ಮೇಳಕ್ಕೆ ಸಕಲ ಸಿದ್ಧತೆ

ವಾರಾಣಾಸಿ, ಕೊಲ್ಕತ್ತಾದ ಗಂಗಾಸಾಗರ್​ ಮೇಳಕ್ಕೆ ಹರಿದು ಬಂದ ಭಕ್ತ ಸಾಗರ
devotees-flock-to-the-gangasagar-mela-in-varanasi-kolkata
author img

By

Published : Jan 14, 2023, 10:30 AM IST

ಕೋಲ್ಕತ್ತಾ: ಇಂದು ದೇಶಾದ್ಯಂತ ಜನರು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಈ ನಡುವೆ ಸಾವಿರಾರು ಭಕ್ತರು ವಾರಣಾಸಿ ಮತ್ತು ಕೋಲ್ಕತ್ತಾದ ಯಾತ್ರಾ ಸ್ಥಳಗಳಲ್ಲಿ ಕಂಡು ಬಂದಿದ್ದಾರೆ. ಉತ್ತರ ಪ್ರದೇಶದ ಪವಿತ್ರ ಕ್ಷೇತ್ರವಾದ ಬನಾರಸ್​ನಲ್ಲಿ ಪವಿತ್ರ ಗಂಗಾನದಿಯಲ್ಲಿ ಲಕ್ಷಾಂತರ ಭಕ್ತರು ಮಿಂದೆಳುತ್ತಿದ್ದಾರೆ. ಕೊಲ್ಕತ್ತಾದ ಬಹುಘಾಟ್​ನಲ್ಲಿ ನಾಗಾಸಾಧುಗಳು ಕೂಡ ಬೀಡುಬಿಟ್ಟಿದ್ದು, ಗಂಗಾಸಾಗರ್​ನಲ್ಲಿ ಪವಿತ್ರ ಸ್ನಾನ ಕೈಗೊಂಡಿದ್ದಾರೆ.

ವಾರಣಸಿಯಲ್ಲಿ ಭಕ್ತರ ಪವಿತ್ರ ಸ್ನಾನದ ವೇಳೆ ಸುರಕ್ಷತೆಗೆ ಅಗತ್ಯಕ್ರಮ ನಡೆಸಲಾಗಿದ್ದು, ಇದಕ್ಕಾಗಿ ಕುಂಡಗಳನ್ನು ನಿರ್ಮಿಸಲಾಗಿದೆ. ಭಕ್ತರ ಸಂಖ್ಯೆ ಹೆಚ್ಚಿರುವ ಹಿನ್ನೆಲೆ ಸ್ಥಳೀಯ ಜನರಿಗೆ ಆರ್ಥಿಕವಾಗಿ ಮಾರಾಟಕ್ಕೆ ಸಹಾಯ ಮಾಡಲು ಹ್ಯಾಡಿಕ್ರಾಫ್ಟ್​​ನಂತಹ ಹಲವು ಉತ್ಪನ್ನಗಳ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಏತನ್ಮಧ್ಯೆ, ಮಕರ ಸಂಕ್ರಾಂತಿಯಂದು ಗಂಗಾಸಾಗರ್​ನಲ್ಲಿ ನಡೆಯುವ ವಿಶೇಷ ಮೇಳದಲ್ಲಿ ಭಾಗಿಯಾಗಲು ನಾಗಾಸಾಧುಗಳು ಸಾವಿರಾರು ಕಿಮೀ ಪ್ರಯಾಣ ನಡೆಸಿದ್ದಾರೆ. ನಾಳೆ ಅವರೆಲ್ಲಾ ಗಂಗಾಸಾಗರ್​ಗೆ ತೆರಳಿ ಪವಿತ್ರ ಸ್ನಾನ ನಡೆಸಲಿದ್ದಾರೆ. ಈ ಕುರಿತು ಮಾತನಾಡಿರುವ ಮಧ್ಯಪ್ರದೇಶದ ನಾಗಾಸಾಧುವೊಬ್ಬರು, ನಾನು ಡಿಸೆಂಬರ್​ 15ರಿಂದ ಇಲ್ಲಿದ್ದು, ಪವಿತ್ರ ಸ್ನಾನ ನಡೆಸಿ ಉಜ್ಜೈನಿಗೆ ಮರಳುವುದಾಗಿ ತಿಳಿಸಿದ್ದಾರೆ. 24 ಪರ್ಗಾಣ ಜಿಲ್ಲೆಯಲ್ಲಿ ನಡೆಯುವ ಗಂಗಾಸಾಗರ್​ ಮೇಳದಲ್ಲಿ ಭಾಗಿಯಾಗಲು ಭಕ್ತರಿಗೆ ಬಾಬುಘಾಟ್​​ನಲ್ಲಿ ಭಕ್ತರಿಗೆ ಕೆಲಕಾಲ ಉಳಿದುಕೊಳ್ಳಲು ಅವಕಾಶ ನೀಡಲಾಗಿದೆ.

ನಾಗಾಸಾಧುಗಳು ದಂಡು: ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ಜಮ್ಮುಗಳಿಂದ ನಾಗಾಸಾಧುಗಳು ಬಂಗಾಳದಲ್ಲಿ ನಡೆಯುವ ಗಂಗಾಸಾಗರ್​ ಮೇಳಕ್ಕೆ ಬರಲಿದ್ದಾರೆ. ಈ ಕುರಿತು ಮಾತನಾಡಿರುವ ಜಮ್ಮುವಿನ ನಾಗಾಸಾಧು ಶಿವ ಕೈಲಸ್​ ಪುರಿ, ಕಳೆದ 10 ವರ್ಷಗಳಿಂದ ನಾನು ಇಲ್ಲಿಗೆ ಬರುತ್ತಿದ್ದೇನೆ. ನಾಳೆ ಗಂಗಾಸಾಗರ್​ನಲ್ಲಿ ಪವಿತ್ರ ಸ್ನಾನ ನಡೆಸುವುದಾಗಿ ತಿಳಿಸಿದ್ದಾರೆ.

ಗಂಗಾಸಾಗರ್​​ ಭಾರತದ ಸನಾತನ ಧರ್ಮದ ಅತಿದೊಡ್ಡ ಯಾತ್ರಾಸ್ಥಳವಾಗಿದೆ. ಎರಡನೇ ಅತಿದೊಡ್ಡ ಕುಂಭ ಮೇಳ ಇಲ್ಲಿ ನಡೆಯುತ್ತದೆ. ಕಳೆದೆರಡು ವರ್ಷಗಳಿಂದ ಕೋವಿಡ್​ ಹಿನ್ನೆಲೆ ಕಟ್ಟು ನಿಟ್ಟಿನ ನಿಯಮವನ್ನು ಮೇಳಕ್ಕೆ ಜಾರಿ ಮಾಡಲಾಗಿತ್ತು. ಈ ಬಾರಿ ಮೇಳಕ್ಕೆ ಅಂದಾಜು 30 ಲಕ್ಷ ಜನರು ಬರುವ ನಿರೀಕ್ಷೆ ಇದ್ದು, ಇದಕ್ಕೆ ಅಗತ್ಯವಾದ ಸಿದ್ಧತೆಯನ್ನು ಸರ್ಕಾರ ನಡೆಸಿದೆ. ಕಾರ್ಯಕ್ರಮದ ಸುರಕ್ಷತೆ ಮತ್ತು ಸುಲಭವಾಗಿ ನಿಭಾಯಿಸುವ ದೃಷ್ಟಿಯಿಂದ 1100 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಈಗಾಗಲೇ ಪಶ್ಚಿಮ ಬಂಗಾಳ ಸರ್ಕಾರ ಅಗತ್ಯ ಮಾರ್ಗದರ್ಶನವನ್ನು ಜಾರಿ ಮಾಡಿದೆ.

ಪಶ್ಚಿಮ ಬಂಗಾಳದಲ್ಲಿ ಸಕಲ ಸಿದ್ಧತೆ: ಮೇಳದ ಸಿದ್ಧತೆ ಕುರಿತು ಮಾಧ್ಯಮಕ್ಕೆ ಮಾತನಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮೇಳಕ್ಕಾಗಿ ಮೂರು ಹೆಲಿಪ್ಯಾಡ್​ಗಳನ್ನು ಮಾಡಲಾಗಿದೆ. ಗಂಗಾಸಾಗರ ಪ್ರಯಾಣವು ಕಠಿಣವಾಗಿರುವುದರಿಂದ ಮೌರಿಗ್ರಾಮ್ ಸೇತುವೆಗಾಗಿ ವಿವರವಾದ ವರದಿ ಯೋಜನೆ (ಡಿಆರ್‌ಪಿ) ಸಿದ್ಧಪಡಿಸಲಾಗುತ್ತಿದೆ. ಮೇಳದಲ್ಲಿ ಅಂದರೆ ಜನವರಿ 8 ರಿಂದ 17ರ ನಡುವೆ ಯಾವುದೇ ಅಹಿತಕರ ಘಟನೆ ನಡೆದರೆ 5 ಲಕ್ಷ ರೂಪಾಯಿ ವಿಮೆಯನ್ನು ನೀಡುವುದಾಗಿ ಅವರು ತಿಳಿಸಿದ್ದಾರೆ.

ಈ ಹಿಂದಿನ ವರದಿ ಅನುಸಾರ ಸೌತ್​ 24 ಜಿಲ್ಲೆಯಲ್ಲಿ ಗಂಗಾಸಾಗರ್​ ಮೇಳಕ್ಕೆ ಉತ್ತಮ ಸಿದ್ಧತೆ ನಡೆಸಲಾಗಿದ್ದು, ಪೊಲೀಸ್​, ವಿಪತ್ತು ನಿರ್ವಹಣಾ ತಂಡ ಮತ್ತು ನಾಗರಿಕಾ ಸೇನಾದಳ ಜನದಟ್ಟಣೆ ನಿರ್ವಹಣೆ ಮೇಲೆ ಕಣ್ಣಿಡಲಿದೆ. ಜೊತೆಗೆ ಬರುವ ಭಕ್ತರಿಗೆ ತೊಂದರೆಯಾಗದಂತೆ ಸಾರಿಗೆ​ ಸೇರಿದಂತೆ ಇತರೆ ವ್ಯವಸ್ಥೆಗಳನ್ನು ಮಾಡಲಾಗಿದೆ.

ಸೂರ್ಯ ಪಥ ಬದಲಾವಣೆ: ಮಕರ ಸಂಕ್ರಾಂತಿ ಸುಗ್ಗಿ ಆರಂಭದ ದಿನವಾಗಿದ್ದು, ಅನೇಕ ಧಾರ್ಮಿಕ ಭಕ್ತರು ಪ್ರತಿ ವರ್ಷ ಗಂಗಾಸಾಗರ್​ನಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಅದರಲ್ಲಿಯೂ ಗಂಗಾನದಿಯ ಸಾಗರ್​​ದ್ವೀಪ್​ನಲ್ಲಿ ನೀರನ್ನು ಪವಿತ್ರ ಎಂದು ಭಾವಿಸಲಾಗಿದೆ. ಈ ಮಕರ ಸಂಕ್ರಾಂತಿಯೂ ಸೂರ್ಯ ತನ್ನ ಪಥ ಬದಲಾಯಿಸುವುದರಿಂದ ಈ ದಿನ ಆತನಿಗೆ ವಿಶೇಷ ಆರ್ಘ್ಯ ನಡೆಸಲಾಗುವುದು. ಈ ದಿನದಂದು ಸೂರ್ಯ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥ ಬದಲಾಯಿಸುತ್ತಾನೆ. ಈ ಹಬ್ಬವನ್ನು ದೇಶಾದ್ಯಂತ ವಿವಿಧ ಹೆಸರುಗಳಿಂದ ಆಚರಿಸಲಾಗುವುದು.

ಇದನ್ನೂ ಓದಿ: ಶಬರಿಮಲೆಯಲ್ಲಿ ಇಂದು ಸಂಜೆ ಮಕರಜ್ಯೋತಿ ದರ್ಶನ... ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಭಕ್ತ ಸಾಗರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.