ಶಿರಡಿ (ಮಹಾರಾಷ್ಟ್ರ) : ಮಹಾರಾಷ್ಟ್ರದ ಪ್ರಸಿದ್ಧ ಶಿರಡಿ ಸಾಯಿಬಾಬಾಗೆ ವಜ್ರ ಖಚಿತ ಚಿನ್ನದ ಕಿರೀಟವನ್ನು ಇಂಗ್ಲೆಂಡ್ ಮೂಲದ ಭಕ್ತರೊಬ್ಬರು ಒಪ್ಪಿಸಿದ್ದಾರೆ. ಈ ಕಿರೀಟವು 368 ಗ್ರಾಂ ತೂಕವಿದೆ ಎಂದು ತಿಳಿದು ಬಂದಿದೆ.
ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಸಾಯಿ ಭಕ್ತರಾದ ಕನಾರಿ ಸುಬಾರಿ ಪಟೇಲ್ ಎಂಬುವವರು ಬೆಲೆ ಬಾಳುವ ಕಿರೀಟವನ್ನು ಸಮರ್ಪಿಸಿದ್ದಾರೆ. ಅಂದವಾದ ಕೆತ್ತನೆಗಳನ್ನು ಹೊಂದಿರುವ ಕಿರೀಟವು ನೋಡಲು ಆಕರ್ಷಕವಾಗಿದ್ದು, ಸಾಯಿಬಾಬಾ ಟ್ರಸ್ಟ್‌ಗೆ ಪಟೇಲ್ ಹಸ್ತಾಂತರಿಸಿದ್ದಾರೆ.
ಪ್ರತಿ ಆರತಿಯ ಸಮಯದಲ್ಲಿ ಸಾಯಿಬಾಬಾಗೆ ಕಿರೀಟವನ್ನು ಅರ್ಪಿಸುವುದು ವಾಡಿಕೆ. ಆರಂಭದ ದಿನಗಳಲ್ಲಿ ಬಾಬಾಗೆ ಬೆಳ್ಳಿಯ ಕಿರೀಟಗಳನ್ನು ಅರ್ಪಿಸಲಾಗುತ್ತಿತ್ತು. ನಂತರದಲ್ಲಿ ಚಿನ್ನದ ಕಿರೀಟಗಳನ್ನು ಭಕ್ತರು ದಾನ ಮಾಡಲು ಆರಂಭಿಸಿದ್ದರು. ಈ ಬಾರಿ ಬಾಬಾ ಅವರಿಗೆ ವಜ್ರಗಳಿಂದ ಕೂಡಿದ ಕಿರೀಟ ಅರ್ಪಿಸಲಾಗಿದೆ. ಇದರ ಬೆಲೆ 28 ಲಕ್ಷ ರೂಪಾಯಿ ಎಂದು ಟ್ರಸ್ಟ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಶಬರಿಮಲೆಯಲ್ಲಿ ಮಂಡಲ ಪೂಜೆ ಸಂಪನ್ನ: 39 ದಿನಗಳಲ್ಲಿ 222 ಕೋಟಿ ರೂ ಕಾಣಿಕೆ ಸಂಗ್ರಹ