ETV Bharat / bharat

3 ತಿಂಗಳು ಝೂನಲ್ಲಿ ಸಿಂಹಗಳನ್ನು ನೋಡಿ ಅಶೋಕ ಸ್ತಂಭ ರಚನೆ: ಕಲಾವಿದರ ಕುಟುಂಬದ ಸ್ಪಷ್ಟನೆ - ರಾಷ್ಟ್ರೀಯ ಲಾಂಛನದ ಬಗ್ಗೆ ಕಲಾವಿದರ ಕುಟುಂಬ ಸ್ಪಷ್ಟನೆ

ಹೊಸ ರಾಷ್ಟ್ರೀಯ ಲಾಂಛನದ ಬಗ್ಗೆ ವಿವಾದ- ಕಲಾವಿದರ ಕುಟುಂಬದಿಂದ ಲಾಂಛನಕ್ಕೆ ಬೆಂಬಲ- ಮೂಲ ರೂಪದಂತೆಯೇ ಹೊಸ ಲಾಂಛನವಿದೆ ಎಂದು ಸ್ಷಷ್ಟನೆ.

3 ತಿಂಗಳು ಝೂನಲ್ಲಿ ಸಿಂಹಗಳನ್ನು ನೋಡಿ ಅಶೋಕ ಸ್ತಂಭ ರಚನೆ

author img

By

Published : Jul 14, 2022, 7:34 PM IST

ಇಂದೋರ್: ಹೊಸ ಸಂಸತ್​ ಮೇಲೆ ಪ್ರತಿಷ್ಠಾಪಿಸಲಾಗುವ ಹೊಸ ರಾಷ್ಟ್ರೀಯ ಲಾಂಛನ ಅಶೋಕ ಸ್ತಂಭವು ಈಗ ವಿವಾದಕ್ಕೀಡಾಗಿದೆ. ಮೂಲ ರಾಷ್ಟ್ರೀಯ ಲಾಂಛನದಂತೆ ಇಲ್ಲ ಎಂಬುದು ವಿಪಕ್ಷಗಳ ಆಕ್ಷೇಪವಾಗಿದೆ. ಆದರೆ, ಇದನ್ನು ಸರ್ಕಾರ ಮತ್ತು ವಾಸ್ತುಶಿಲ್ಪಿ ಅಲ್ಲಗಳೆದಿದ್ದರು. ಇದೀಗ ಲಾಂಛನ ರೂಪಿಸುವ ತಂಡದಲ್ಲಿದ್ದ ಸಹ ಕಲಾವಿದ ದೀನಾನಾಥ್​ ಭಾರ್ಗವ್​ ಅವರ ಕುಟುಂಬಸ್ಥರು ಕೂಡ ಲಾಂಛನದ ಸ್ವರೂಪವನ್ನು ತಿದ್ದಲಾಗಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಭಾರ್ಗವ್ ಅವರ ಪತ್ನಿ, ರಾಷ್ಟ್ರೀಯ ಲಾಂಛನವನ್ನು ರೂಪಿಸುವ ಹೊಣೆಗಾರಿಕೆ ನೀಡಿದ ಬಳಿಕ ದೀನಾನಾಥ್​ ಭಾರ್ಗವ್ ಅವರು ಮೂರು ತಿಂಗಳು ಕೋಲ್ಕತ್ತಾದ ಮೃಗಾಲಯಕ್ಕೆ ತೆರಳಿ ಸಿಂಹಗಳ ಗಾಂಭೀರ್ಯವನ್ನು ಕಣ್ಣಾರೆ ಕಂಡು ಚಿತ್ರಿಸಲಾಗಿದೆ. ಸಾರನಾಥದ ಮೂಲ ಅಶೋಕ ಸ್ತಂಭದಂತೆಯೇ ಹೊಸ ಲಾಂಛನವನ್ನು ರೂಪಿಸಲಾಗಿದೆ ಎಂದು ತಿಳಿಸಿದರು.

ಈ ಹಿಂದೆಯೂ ದೀನಾನಾಥ್​ ಭಾರ್ಗವ್​ ಅವರು ಅಶೋಕ ಸ್ತಂಭದ ಪ್ರತಿಕೃತಿಯನ್ನು ಮಾಡಿದ್ದರು. ಅದನ್ನು 1985 ರಲ್ಲಿಯೇ ರೂಪಿಸಿದ್ದರು. ಅದು ಇನ್ನೂ ತಮ್ಮ ಬಳಿಯೇ ಇದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

ಓದಿ: ಗ್ರಾಮಕ್ಕೆ ನುಗ್ಗಿದ ಪ್ರವಾಹ ನೀರು.. 'ಬಾಹುಬಲಿ' ಸಿನಿಮಾದಂತೆ ಮಗು ರಕ್ಷಿಸಿದ ದೊಡ್ಡಪ್ಪ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.