ಮುಂಬೈ/ಕೋಲ್ಕತ್ತಾ: ದೇಶದಲ್ಲಿ ಕೊರೊನಾ ಮಹಾಮಾರಿಯ ಮೂರನೇ ಅಲೆ ದಿನದಿಂದ ದಿನಕ್ಕೆ ವೇಗ ಪಡೆದುಕೊಳ್ಳುತ್ತಿದ್ದು, ಕೆಲವೊಂದು ರಾಜ್ಯಗಳಲ್ಲಿ ಪ್ರತಿದಿನ ನೂರಾರು ಹೊಸ ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಪ್ರಮುಖವಾಗಿ ಮಹಾರಾಷ್ಟ್ರದಲ್ಲಿ ಇದರ ಅಬ್ಬರ ಜೋರಾಗಿದ್ದು, ಇದೀಗ ಅಲ್ಲಿನ ಶಿಕ್ಷಣ ಸಚಿವೆಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮಹಾರಾಷ್ಟ್ರದ ಶಿಕ್ಷಣ ಸಚಿವೆ ವರ್ಷಾ ಗಾಯಕ್ವಾಡ್ ಹಾಗೂ ಪಶ್ಚಿಮ ಬಂಗಾಳದ ಟಿಎಂಸಿ ಸಂಸದ ಡೆರೆಕ್ ಒ ಬ್ರಿಯನ್ ಅವರಿಗೆ ಸೋಂಕು ದೃಢವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
-
Have tested positive for #COVID
— Derek O'Brien | ডেরেক ও'ব্রায়েন (@derekobrienmp) December 28, 2021 " class="align-text-top noRightClick twitterSection" data="
Moderate symptoms. Isolating at home.
If you have come into contact with me in the last three days, and have symptoms, please seek medical advice.
(Was always ultra-careful. Yet.) #MaskUpIndia
">Have tested positive for #COVID
— Derek O'Brien | ডেরেক ও'ব্রায়েন (@derekobrienmp) December 28, 2021
Moderate symptoms. Isolating at home.
If you have come into contact with me in the last three days, and have symptoms, please seek medical advice.
(Was always ultra-careful. Yet.) #MaskUpIndiaHave tested positive for #COVID
— Derek O'Brien | ডেরেক ও'ব্রায়েন (@derekobrienmp) December 28, 2021
Moderate symptoms. Isolating at home.
If you have come into contact with me in the last three days, and have symptoms, please seek medical advice.
(Was always ultra-careful. Yet.) #MaskUpIndia
ಸೋಂಕು ತಗುಲಿರುವುದು ದೃಢಗೊಳ್ಳುತ್ತಿದ್ದಂತೆ ಇಬ್ಬರು ಹೋಂ ಐಸೋಲೇಷನ್ಗೊಳಗಾಗಿದ್ದು, ಕಳೆದ ಕೆಲ ದಿನಗಳಿಂದ ತಮ್ಮ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
-
I learned today that I tested positive for COVID-19 after first feeling symptoms yesterday evening. My symptoms are relatively mild. I'm fine and have isolated myself. Request those who met me the past few days to take precautions.
— Prof. Varsha Eknath Gaikwad (@VarshaEGaikwad) December 28, 2021 " class="align-text-top noRightClick twitterSection" data="
">I learned today that I tested positive for COVID-19 after first feeling symptoms yesterday evening. My symptoms are relatively mild. I'm fine and have isolated myself. Request those who met me the past few days to take precautions.
— Prof. Varsha Eknath Gaikwad (@VarshaEGaikwad) December 28, 2021I learned today that I tested positive for COVID-19 after first feeling symptoms yesterday evening. My symptoms are relatively mild. I'm fine and have isolated myself. Request those who met me the past few days to take precautions.
— Prof. Varsha Eknath Gaikwad (@VarshaEGaikwad) December 28, 2021
ಇದನ್ನೂ ಓದಿರಿ: ಮಾಜಿ ಕ್ರಿಕೆಟಿಗ ದಿನೇಶ್ ಮೊಂಗಿಯಾ ಬಿಜೆಪಿ ಸೇರ್ಪಡೆ
ಕಳೆದ ವರ್ಷ ಕೂಡ ಕೊರೊನಾ ಸೋಂಕಿಗೊಳಗಾಗಿದ್ದ ಸಚಿವೆ ಪ್ರೊ. ವರ್ಷಾ ಏಕನಾಥ್ ಗಾಯಕ್ವಾಡ್ ಅವರಿಗೆ ಇದೀಗ ಮತ್ತೊಮ್ಮೆ ಸೋಂಕು ತಗುಲಿದೆ. ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲೂ ಅವರು ಭಾಗಿಯಾಗಿದ್ದರು. ಇಂದು ಬೆಳಗ್ಗೆ ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೂ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಈಗಾಗಲೇ ಅವರು ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 6,538 ಮಂದಿಗೆ ಕೊರೊನಾ ಸೋಂಕು ತಗಲಿದ್ದು, 293 ಸೋಂಕಿತರು ಬಲಿಯಾಗಿದ್ದಾರೆ. ಇದೇ ಅವಧಿಯಲ್ಲಿ 6,450 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತೊಂದೆಡೆ, ರೂಪಾಂತರಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 653ಕ್ಕೆ ತಲುಪಿದೆ.