ETV Bharat / bharat

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್​ಗೆ 30 ದಿನಗಳ ಪೆರೋಲ್..

ಅತ್ಯಾಚಾರ ಮತ್ತು ಕೊಲೆಯಂತಹ ಘೋರ ಅಪರಾಧ ಪ್ರಕರಣಗಳ ಅಪರಾಧಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್​ಗೆ 30 ದಿನಗಳ ಪೆರೋಲ್ ಕೊಡಲಾಗಿದೆ.

Sirsa Dera Sacha Sauda chief Ram Rahim
ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್
author img

By

Published : Jul 20, 2023, 3:32 PM IST

ಚಂಡೀಗಢ: ಅತ್ಯಾಚಾರ ಮತ್ತು ಕೊಲೆಯಂತಹ ಘೋರ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುನಾರಿಯಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಸಿರ್ಸಾ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ರಾಮ್ ರಹೀಮ್‌ಗೆ 30 ದಿನಗಳ ಪೆರೋಲ್ ನೀಡಲಾಗಿದೆ.

ಮೂಲಗಳ ಪ್ರಕಾರ, ರಾಮ್ ರಹೀಮ್ ರೋಹ್ಟಕ್‌ನ ಸುನಾರಿಯಾ ಜೈಲಿನಿಂದ ಸ್ವಲ್ಪ ಸಮಯದಲ್ಲೇ ಹೊರಬರಲಿದ್ದಾನೆ. ಈ ಬಾರಿಯೂ ರಾಮ್ ರಹೀಮ್ ಯುಪಿಯ ಬಾಗ್‌ಪತ್‌ನಲ್ಲಿರುವ ಬರ್ನವಾ ಆಶ್ರಮದಲ್ಲಿ ತಂಗಲಿದ್ದಾನೆ. ರಾಮ್ ರಹೀಮ್ ಅವರನ್ನು ಸಿರ್ಸಾ ಶಿಬಿರಕ್ಕೆ ಹೋಗಲು ಬಿಡುತ್ತಿಲ್ಲ. ಈ ವರ್ಷದ ಜನವರಿಯಲ್ಲಿ ರಾಮ್ ರಹೀಮ್ 40 ದಿನಗಳ ಪೆರೋಲ್ ಪಡೆದಿದ್ದ. 30 ತಿಂಗಳ ಜೈಲುವಾಸದ ನಂತರ ರಾಮ್ ರಹೀಮ್​ಗೆ ಇದು 7ನೇ ಪೆರೋಲ್ ಆಗಿದೆ.

ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಅಪರಾಧಿಗೆ 7 ಬಾರಿ ಪೆರೋಲ್:

  • ಅಕ್ಟೋಬರ್ 24, 2020 ರಂದು, ಮೊದಲ ಬಾರಿಗೆ, ಸರ್ಕಾರವು ತನ್ನ ಅನಾರೋಗ್ಯದ ತಾಯಿಯನ್ನು ಭೇಟಿ ಮಾಡಲು ರಾಮ್ ರಹೀಮ್‌ಗೆ ಒಂದು ದಿನದ ಪೆರೋಲ್ ನೀಡಿತ್ತು.
  • 21 ಮೇ 2021 ರಂದು, ಎರಡನೇ ಬಾರಿಗೆ ಮತ್ತೊಮ್ಮೆ ತಾಯಿಯನ್ನು ಭೇಟಿ ಮಾಡಲು ಒಂದು ದಿನದ ಪೆರೋಲ್ ಅನ್ನು ನೀಡಲಾಗಿತ್ತು.
  • ಫೆಬ್ರವರಿ 7, 2022 ರಂದು, ಹರಿಯಾಣ ಸರ್ಕಾರವು ರಾಮ್ ರಹೀಮ್‌ಗೆ 21 ದಿನಗಳ ಪೆರೋಲ್ ಅನ್ನು ಕೊಟ್ಟಿತ್ತು.
  • ಜೂನ್ 2022 ರಂದು, ರಾಮ್ ರಹೀಮ್‌ಗೆ ಮತ್ತೆ ಒಂದು ತಿಂಗಳ ಪೆರೋಲ್ ಕೊಡಲಾಗಿತ್ತು.
  • ಅಕ್ಟೋಬರ್ 2022 ರಂದು, ರಾಮ್ ರಹೀಮ್ ಮತ್ತೊಮ್ಮೆ 40 ದಿನಗಳ ಪೆರೋಲ್ ಮೇಲೆ ಬಿಡುಗಡೆಯಾಗಿದ್ದರು.
  • 21 ಜನವರಿ 2023 ರಂದು ಡೇರಾ ಮುಖ್ಯಸ್ಥ ಶಾ ಸತ್ನಾಂ ಅವರ ಜನ್ಮ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು 40 ದಿನಗಳ ಪೆರೋಲ್ ನೀಡಲಾಗಿತ್ತು.

ರಾಮ್ ರಹೀಮ್ ಅಪರಾಧ ಪ್ರಕರಣಗಳು: ಸಾಧ್ವಿ ಲೈಂಗಿಕ ಶೋಷಣೆ ಪ್ರಕರಣ, 2017ರಲ್ಲಿ 2 ಪ್ರಕರಣಗಳಲ್ಲಿ ತಲಾ 10 ವರ್ಷ ಜೈಲು ಶಿಕ್ಷೆ ಮತ್ತು ದಂಡ. ಪತ್ರಕರ್ತ ರಾಮಚಂದ್ರ ಛತ್ರಪತಿ ಹತ್ಯೆ ಪ್ರಕರಣದಲ್ಲಿ 2019ರ ಜನವರಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ. ರಂಜಿತ್ ಸಿಂಗ್ ಹತ್ಯೆ ಪ್ರಕರಣದಲ್ಲಿ ಕಠಿಣ ಜೈಲು ಶಿಕ್ಷೆ ಮತ್ತು 31 ಲಕ್ಷ ರೂ. ಅಂತೆಯೇ, ಹರಿಯಾಣದ ಫತೇಹಾಬಾದ್‌ನ ತೋಹಾನಾ ನಿವಾಸಿ ಹಂಸರಾಜ್ ಚೌಹಾನ್ (ಡೇರಾ ಸಿರ್ಸಾದ ಹಳೆಯ ಭಕ್ತ), ಜುಲೈ 2012 ರಲ್ಲಿ ಡೇರಾ ಮುಖ್ಯಸ್ಥ ಡೇರಾದ 400 ಭಕ್ತರನ್ನು ದುರ್ಬಲಗೊಳಿಸಿದ್ದಾನೆ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಸದ್ಯ ರಾಮ್ ರಹೀಮ್ ಶಿಕ್ಷೆ ಅನುಭವಿಸುತ್ತಿದ್ದಾನೆ.

ಇದನ್ನೂ ಓದಿ: ವಸ್ತುಗಳನ್ನು ಆನ್ಲೈನ್​ನಲ್ಲಿ ಖರೀದಿ ಮಾಡಿ ಮಾರಾಟ ಮಾಡಿದರೆ ಕಮಿಷನ್ ನೀಡುವ ಆಮಿಷ.. ಮಹಿಳೆಗೆ 18.66 ಲಕ್ಷ ವಂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.