ETV Bharat / bharat

ಸಚಿವ ಸ್ಥಾನಕ್ಕಾಗಿ 100 ಕೋಟಿ ಬೇಡಿಕೆ.. ಮುಂಬೈ ಪೊಲೀಸರಿಂದ ನಾಲ್ವರು ವಂಚಕರ ಬಂಧನ - people arrested in Mumbai

ರಾಷ್ಟ್ರೀಯ ನಾಯಕರ ಹೆಸರಲ್ಲಿ ಮಹಾರಾಷ್ಟ್ರ ಶಾಸಕರಿಗೆ ಸಚಿವ ಸ್ಥಾನ ಕೊಡಿಸಲು 100 ಕೋಟಿ ರೂಪಾಯಿ ಬೇಡಿಕೆ ಇಟ್ಟ ಪ್ರಕರಣವನ್ನು ಮುಂಬೈ ಪೊಲೀಸರು ಬೇಧಿಸಿದ್ದಾರೆ.

ಸಚಿವ ಸ್ಥಾನಕ್ಕಾಗಿ 100 ಕೋಟಿ ಬೇಡಿಕೆ
ಸಚಿವ ಸ್ಥಾನಕ್ಕಾಗಿ 100 ಕೋಟಿ ಬೇಡಿಕೆ
author img

By

Published : Jul 20, 2022, 2:36 PM IST

ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ ಬಂಡಾಯ ನಾಯಕ ಏಕನಾಥ್​ ಶಿಂದೆ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿ ಕೆಲವೇ ದಿನಗಳಾಗಿವೆ. ಸಂಪುಟ ರಚನೆ ಕಸರತ್ತು ನಡೆಯುತ್ತಿರುವ ಮಧ್ಯೆಯೇ ಮಂತ್ರಿ ಸ್ಥಾನಕ್ಕಾಗಿ ಶಾಸಕರೊಬ್ಬರಿಗೆ 100 ಕೋಟಿ ರೂಪಾಯಿ ಲಂಚದ ಬೇಡಿಕೆ ಇಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.

ಸಿಎಂ ಏಕನಾಥ್​ ಶಿಂದೆ ಸರ್ಕಾರದ ಸಂಪುಟ ಸೇರಲು ಹಲವು ಶಾಸಕರು ರೇಸ್​​ನಲ್ಲಿದ್ದಾರೆ. ಈ ಅವಕಾಶ ಬಳಸಿಕೊಂಡು ಹಣ ಮಾಡಲು ಮುಂದಾದ ನಾಲ್ವರು ಆರೋಪಿಗಳು ರಾಷ್ಟ್ರೀಯ ಪಕ್ಷದ ಶಾಸಕರೊಬ್ಬರಿಗೆ ಕರೆ ಮಾಡಿ, ನಮಗೆ ರಾಷ್ಟ್ರೀಯ ನಾಯಕ ಪರಿಚಯವಿದೆ. ನಿಮಗೆ ಸಚಿವ ಸ್ಥಾನ ಕೊಡಿಸಲಾಗುವುದು. ಇದಕ್ಕಾಗಿ 100 ಕೋಟಿ ರೂಪಾಯಿ ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ಆ ಬಳಿಕ ಎರಡು ಮೂರು ಬಾರಿ ಶಾಸಕರೊಂದಿಗೆ ಮಾನಾಡಿದ್ದಲ್ಲದೇ ಜುಲೈ 17 ರಂದು ಆರೋಪಿಗಳು ಒಬೆರಾಯ್ ಹೋಟೆಲ್‌ನಲ್ಲಿ ಶಾಸಕರನ್ನು ಭೇಟಿ ಮಾಡಿದ್ದರು. ಸಚಿವ ಸಂಪುಟದಲ್ಲಿ ಸ್ಥಾನ ಕೊಡಿಸಲು 90 ಕೋಟಿ ರೂ. ಕೇಳುತ್ತಿದ್ದು, ಅದರಲ್ಲಿ ಶೇ.20ರಷ್ಟು ಅಂದರೆ 18 ಕೋಟಿ ರೂ.ಗಳನ್ನು ನಾಳೆ ಕೊಡಬೇಕು ಎಂದು ಶಾಸಕರಿಗೆ ಸೂಚಿಸಿದ್ದರು.

ಹಣ ತೆಗೆದುಕೊಂಡು ನಾರಿಮನ್ ಪಾಯಿಂಟ್ ಪ್ರದೇಶಕ್ಕೆ ಬರಲು ಶಾಸಕರಿಗೆ ಸೂಚಿಸಿದ್ದ ಆರೋಪಿಗಳು, ನಂತರ ಶಾಸಕರನ್ನು ಒಬೆರಾಯ್ ಹೋಟೆಲ್‌ಗೆ ಕರೆದೊಯ್ದಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ.

ಬಳಿಕ ಹೋಟೆಲ್​ ಮೇಲೆ ದಾಳಿ ಮಾಡಿ ಒಬ್ಬನನ್ನು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಇನ್ನೂ ಮೂವರ ಬಗ್ಗೆ ಆರೋಪಿ ಬಾಯ್ಬಿಟ್ಟಿದ್ದಾನೆ. ನಾಲ್ವರ ವಿರುದ್ಧ ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಬೇರೆ ಯಾರಿಗಾದರೂ ಈ ರೀತಿ ವಂಚಿಸಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಓದಿ: ತಾಯಿಗೆ ಅನಾರೋಗ್ಯವೆಂದು ನಾಲ್ವರು ಮಹಿಳಾ ಶಾಸಕರಿಗೆ ವಂಚಿಸಿದ ಪುಣೆ ಯುವಕ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.