ETV Bharat / bharat

ವಿವಾದಾತ್ಮಕ ಹೇಳಿಕೆ: ಮಹಾರಾಷ್ಟ್ರ ರಾಜ್ಯಪಾಲ ಕೋಶ್ಯಾರಿ ಪದಚ್ಯುತಿಗೆ ಒತ್ತಾಯ - Governor Bhagat Singh Koshyari

ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಛತ್ರಪತಿ ಶಿವಾಜಿ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆ ರಾಜ್ಯದ ರಾಜಕೀಯ ವಾತಾವರಣದಲ್ಲಿ ಕೋಲಾಹಲ ಉಂಟುಮಾಡಿದೆ.

Governor Bhagat Singh Koshyari
ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ
author img

By

Published : Dec 3, 2022, 4:56 PM IST

ಮುಂಬೈ(ಮಹಾರಾಷ್ಟ್ರ): ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ, ಛತ್ರಪತಿ ಶಿವಾಜಿ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆ ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗುತ್ತಿದೆ. ಮುಂಖ್ಯಮಂತ್ರಿ ಶಿಂದೆ ಗುಂಪಿನ ನಾಯಕರು ಮತ್ತು ಪ್ರತಿಪಕ್ಷಗಳು ಬಿಜೆಪಿಯನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸುತ್ತಿವೆ.

ಛತ್ರಪತಿ ಶಿವಾಜಿ ಮಹಾರಾಜ ಅವರನ್ನು ಟೀಕಿಸಿದ ರಾಜ್ಯಪಾಲರನ್ನು ವಜಾಗೊಳಿಸಬೇಕು ಎಂದು ಶಿಂದೆ ಬಣದ ಶಾಸಕರು ಹಾಗೂ ನಾಯಕರು ಒತ್ತಾಯಿಸುತ್ತಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ್ ಬಗ್ಗೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ನೀಡಿದ ವಿವಾದಾತ್ಮಕ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯನ್ನು ಎಬ್ಬಿಸಿದೆ.

ರಾಜ್ಯಪಾಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ರಾಜ್ಯಪಾಲರನ್ನು ಪದಚ್ಯುತಗೊಳಿಸಲು ಪ್ರತಿಪಕ್ಷಗಳು ಆಕ್ರಮಣಕಾರಿ ನಿಲುವನ್ನು ತೆಗೆದುಕೊಳ್ಳುತ್ತಿವೆ. ರಾಜ್ಯಪಾಲರ ಈ ಹೇಳಿಕೆ ತಪ್ಪು ಎಂಬ ಅಭಿಪ್ರಾಯವನ್ನು ಬಿಜೆಪಿಯ ಕೆಲವು ನಾಯಕರೂ ಆಂತರಿಕವಾಗಿ ವ್ಯಕ್ತಪಡಿಸಿದ್ದಾರೆ.

ಇಂದು ಬಿಜೆಪಿ ಸಂಸದ ಉದಯನರಾಜೆ ಭೋಸ್ಲೆ ಅವರು ರಾಯಗಡದಲ್ಲಿ ನಡೆದ ನಿರ್ಧರ್ ಶಿವ ಸನ್ಮಾನಚಾ ಕಾರ್ಯಕ್ರಮದಲ್ಲಿ ಮಾತನಾಡುವಾಗ ರಾಜ್ಯಪಾಲರ ವಿರುದ್ದ ಕಟುವಾದ ಮಾತುಗಳಲ್ಲಿ ಟೀಕಿಸಿದ್ದಾರೆ. ಅಲ್ಲದೇ ಬಿಜೆಪಿ ಹೆಸರು ಹೇಳದೇ ಪಕ್ಷದ ಕೆಲ ನಾಯಕರನ್ನ ಗುರಿಯಾಗಿಸಿಕೊಂಡು ಅವರು ವಾಗ್ದಾಳಿ ನಡೆಸಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜರು ಹಳೆಯ ರೋಲ್ ಮಾಡೆಲ್: ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಪ್ರಸ್ತಾಪಿಸಿದ್ದರು. ಈ ಸಂದರ್ಭದಲ್ಲಿ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಡ್ಕರಿ ಮತ್ತು ಪವಾರ್ ಅವರನ್ನು ಹೊಗಳುತ್ತಲೇ ರಾಜ್ಯಪಾಲರು ಶಿವಾಜಿ ಮಹಾರಾಜರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜರು ಹಳೆಯ ರೋಲ್ ಮಾಡೆಲ್ ಆಗಿದ್ದಾರೆ. ನಿತಿನ್ ಗಡ್ಕರಿ ಮತ್ತು ಶರದ್ ಪವಾರ್ ಇಂದಿನ ರೋಲ್ ಮಾಡೆಲ್​​​ಗಳು ಎಂದಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ.

ಬಿಜೆಪಿ ಜನರಿಗೆ ಉತ್ತರಿಸಬೇಕು: ಇದೇ ವೇಳೆ ಉದಯನರಾಜೆ ಭೋಸ್ಲೆ ಅವರು ರಾಜ್ಯಪಾಲರನ್ನು ಗುರಿಯಾಗಿಸಿಕೊಂಡು ಅವರನ್ನು ಪದಚ್ಯುತಿಗೊಳಿಸುವಂತೆ ಒತ್ತಾಯಿಸಿದ್ದಾರೆ. ರಾಜ್ಯಪಾಲರನ್ನು ವಜಾಗೊಳಿಸಬೇಕು. ಒಂದು ವೇಳೆ ರಾಜ್ಯಪಾಲರನ್ನು ಉಚ್ಛಾಟಿಸದಿದ್ದರೆ, ಉಚ್ಚಾಟನೆಯನ್ನು ಏಕೆ ಮಾಡಲಿಲ್ಲ ಎಂದು ಬಿಜೆಪಿ ಜನರಿಗೆ ಉತ್ತರಿಸಬೇಕಾಗುತ್ತದೆ. ಅದಕ್ಕಾಗಿಯೇ ನಾವು ಆಜಾದ್ ಮೈದಾನಕ್ಕೆ ಹೋಗುತ್ತಿದ್ದೇವೆ ಎಂದು ಉದಯನರಾಜೆ ಭೋಸ್ಲೆ ಈ ಸಮಯದಲ್ಲಿ ಎಚ್ಚರಿಕೆ ಕೂಡಾ ಕೊಟ್ಟಿದ್ದಾರೆ.

ಇದನ್ನೂ ಓದಿ:ಹನುಮಾನ್ ಚಾಲೀಸಾ ಪಠಣಕ್ಕೆ ಅವಕಾಶ: ರಕ್ತದಲ್ಲಿ ಪತ್ರ ಬರೆದು ಸಿಎಂ ಯೋಗಿಗೆ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.