ಅಹಮದಾಬಾದ್ : ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ಅಹಮದಾಬಾದ್ ವೈದ್ಯಕೀಯ ಸಂಘವು ಗುಜರಾತ್ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಗೆ ಪತ್ರ ಬರೆದಿದೆ.
ಗುಜರಾತ್ ಖನಿಜ ಅಭಿವೃದ್ಧಿ ನಿಗಮ (ಜಿಎಂಡಿಸಿ) ಸಭಾಂಗಣದಲ್ಲಿ ಆಮ್ಲಜನಕ ಮತ್ತು ಇತರ ಸೌಲಭ್ಯಗಳೊಂದಿಗೆ 900 ಹಾಸಿಗೆಗಳ ಆಸ್ಪತ್ರೆಯನ್ನು ಸರ್ಕಾರ ಸ್ಥಾಪಿಸಿದೆ. ರಾಜ್ಯದ ಎಲ್ಲಾ ದೊಡ್ಡ ಮದುವೆ ಸಭಾಂಗಣಗಳು, ಕಾನ್ಫರೆನ್ಸ್ ಹಾಲ್‌ಗಳು ಮತ್ತು ವಸ್ತು ಪ್ರದರ್ಶನ ಸಭಾಂಗಣಗಳನ್ನು ಕೋವಿಡ್ ಆರೈಕೆ ಕೇಂದ್ರಗಳಾಗಿ ಪರಿವರ್ತಿಸುವಂತೆ ಮನವಿ ಮಾಡಿದೆ.
ರಾಜ್ಯದಲ್ಲಿ ಕೈಗಾರಿಕೆಗಳನ್ನು ಎರಡು ವಾರಗಳ ಕಾಲ ಮುಚ್ಚುವಂತೆ, ಪ್ರಮುಖ ಕೈಗಾರಿಕಾ ಘಟಕಗಳನ್ನು ಶೇ. 50 ರಷ್ಟು ಸಿಬ್ಬಂದಿಯೊಂದಿಗೆ ನಡೆಸಲು ಮತ್ತು ಖಾಸಗಿ ವ್ಯಾಪಾರ ಮತ್ತು ಕೈಗಾರಿಕಾ ಉದ್ಯಮಗಳ ಎಲ್ಲಾ ಉದ್ಯೋಗಿಗಳಿಗೆ ಲಸಿಕೆ ಹಾಕಿಸುವಂತೆ ವೈದ್ಯಕೀಯ ಸಂಘವು ಪತ್ರದಲ್ಲಿ ಕೋರಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಜಿಸಿಸಿಐ ಎಲ್ಲಾ ಉದ್ಯೋಗಿಗಳಿಗೆ ಲಸಿಕೆ ಹಾಕಿಸುವುದಾಗಿ ಭರವಸೆ ನೀಡಿದೆ.
ಇದನ್ನೂ ಓದಿ: ದೆಹಲಿಯಲ್ಲಿ 7 ದಿನದೊಳಗೆ 1,200ಕ್ಕಿಂತಲೂ ಅಧಿಕ ಕೋವಿಡ್ ಸೋಂಕಿತರು ಸಾವು