ETV Bharat / bharat

ನವದೆಹಲಿಯಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಕಳಪೆ: ಮತ್ತದೇ ಕಾರಣ, ಏಕಿಲ್ಲ ಕ್ರಮ? - ಭೂ ವಿಜ್ಞಾನ ಸಚಿವಾಲ

ಕಳೆದೆರಡು ದಿನಗಳಿಂದ ಕೃಷಿ ಕಸಕ್ಕೆ ಬೆಂಕಿ ಹಾಗೂ ಕೆಲವು ಸ್ಥಳೀಯ ಕಾರಣಗಳಿಂದಾಗಿ ನವದೆಹಲಿಯಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಕಳಪೆಯಾಗಿದೆ.

Delhi
Delhi
author img

By

Published : Oct 17, 2021, 12:41 PM IST

ನವದೆಹಲಿ: ನಿನ್ನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟವು ಅತ್ಯಂತ ಕಳಪೆಯಾಗಿತ್ತು ಎಂದು ಭೂ ವಿಜ್ಞಾನ ಸಚಿವಾಲಯದ ಮುನ್ಸೂಚನೆ ಸಂಸ್ಥೆ ಸಫರ್‌ (SAFAR) ತಿಳಿಸಿದೆ.

ಕಳೆದ ಎರಡು ದಿನಗಳಿಂದ ಕೃಷಿ ಕಸಕ್ಕೆ ಬೆಂಕಿ ಹಾಗೂ ಕೆಲವು ಸ್ಥಳೀಯ ಕಾರಣಗಳಿಂದಾಗಿ ಗಾಳಿಯ ಗುಣಮಟ್ಟ ಹದಗೆಟ್ಟಿದೆ. ಸ್ಟಬಲ್ ಬರ್ನಿಂಗ್ (ಅಕ್ಕಿ ಮತ್ತು ಗೋಧಿಯಂತಹ ಧಾನ್ಯಗಳನ್ನು ಕೊಯ್ಲು ಮಾಡಿದ ನಂತರ ಉಳಿಯುವ ಒಣಹುಲ್ಲಿನ ಬುಡಕ್ಕೆ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚುವುದು)ನಿಂದ ಶೇ 14 ಗಾಳಿ ಕಲುಷಿತಗೊಂಡಿದೆ ಎಂದು ಸಚಿವಾಲಯ ತಿಳಿಸಿದೆ.

ಶನಿವಾರ ದೆಹಲಿಯಲ್ಲಿ ಗಾಳಿಯ ಗುಣಮಟ್ಟ AQI (Air Quality Index) ಕುಸಿದಿದ್ದು, ಪಿಎಂ 2.5 ವಾಯು ಗುಣಮಟ್ಟ ದಾಖಲಾಗಿದೆ. ಕಳಪೆ ಗಾಳಿಯಿಂದಾಗಿ ಶ್ವಾಸಕೋಶ ಮತ್ತು ಹೃದಯದ ಮೇಲೆ ಗಂಭೀರ ಪರಿಣಾಮಗಳು ಉಂಟಾಗುತ್ತವೆ. ಕೆಮ್ಮು ಅಥವಾ ಉಸಿರಾಟದ ತೊಂದರೆ, ಅಸ್ತಮಾ ಮತ್ತು ತೀವ್ರವಾದ ಉಸಿರಾಟದ ಕಾಯಿಲೆಗಳಿಗೆ ಕಾರಣವಾಗಬಹುದು.

ಕಳೆದ ಎರಡು ದಿನಗಳಲ್ಲಿ ಪಂಜಾಬ್‌ನಲ್ಲಿ 1,089 ಕೃಷಿ ಭೂಮಿಗೆ ಬೆಂಕಿ ಹಚ್ಚಿದ ಪ್ರಕರಣಗಳು (stubble burning) ದಾಖಲಾಗಿದೆ. ಹರಿಯಾಣದಲ್ಲಿ 539, ಉತ್ತರ ಪ್ರದೇಶದಲ್ಲಿ 270, ರಾಜಸ್ಥಾನದಲ್ಲಿ 10 ಮತ್ತು ಮಧ್ಯಪ್ರದೇಶದಲ್ಲಿ 40 ಇಂತಹ ಘಟನೆಗಳು ದಾಖಲಾಗಿದೆ.

ಅಕ್ಕಿ, ಗೋಧಿ ಮತ್ತು ಆಲೂಗಡ್ಡೆ ಬೆಳೆಯುವ ಮೊದಲು ಬೆಳೆಗಳ ಉಳಿಕೆಗಳನ್ನು ತ್ವರಿತವಾಗಿ ತೆರವುಗೊಳಿಸಲು ರೈತರು ತಮ್ಮ ಹೊಲಗಳಿಗೆ ಬೆಂಕಿ ಹಚ್ಚುತ್ತಾರೆ. ಇದು ದೆಹಲಿ ವಾಯು ಮಾಲಿನ್ಯದ ಆತಂಕಕಾರಿ ಏರಿಕೆಗೆ ಒಂದು ಪ್ರಮುಖ ಕಾರಣವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.