ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮುಖ್ಯ ಕಾರ್ಯದರ್ಶಿ ಸಿ ಎಸ್ ನರೇಶ್ ಕುಮಾರ್ ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ವಾಗ್ವಾದಗಳು ಮುಂದುವರೆದಿವೆ. ಕುಮಾರ್ ತಮ್ಮ ಪುತ್ರನ ಕಂಪನಿಗೆ 315 ಕೋಟಿ ರೂ. ಲಾಭ ಮಾಡಿಕೊಟ್ಟಿರುವ ಆರೋಪದ ಮೇಲಿನ ವಿವಾದ ಮುಂದುವರಿದಿದೆ. ಈ ಸಂಬಂಧ, ಮಂಗಳವಾರ ವಿಜಿಲೆನ್ಸ್ ಸಚಿವ ಅತಿಶಿ ಅವರು 650 ಪುಟಗಳ ಪ್ರಾಥಮಿಕ ತನಿಖಾ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಿದರು. ಇದಕ್ಕೂ ಮುನ್ನ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ವಿಭಾಗೀಯ ಆಯುಕ್ತ ಅಶ್ವಿನಿಕುಮಾರ್ ಆರೋಪ ನಿರಾಧಾರ ಎಂದು ಹೇಳಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ತಪ್ಪಿತಸ್ಥರು ಎಂದು ಹೇಳಲಾಗುತ್ತಿದೆ. ವರದಿ ಪ್ರಕಾರ, ಮುಖ್ಯ ಕಾರ್ಯದರ್ಶಿ ತಮ್ಮ ಮಗನ ಕಂಪನಿಗೆ 850 ಕೋಟಿ ರೂಪಾಯಿಗಳನ್ನು ಕಾನೂನು ಬಾಹಿರವಾಗಿ ಲಾಭ ಮಾಡಿಕೊಟ್ಟಿದ್ದಾರೆ. ದ್ವಾರಕಾ ಎಕ್ಸ್‌ಪ್ರೆಸ್‌ವೇಗಾಗಿ ಭೂ ಸ್ವಾಧೀನದ ವರದಿ ಬಂದಾಗ ಈ ವಿಷಯ ಬೆಳಕಿಗೆ ಬಂದಿದೆ.
3 ದಿನದಲ್ಲಿ ವರದಿ ಸಲ್ಲಿಕೆ : ವಿಜಿಲೆನ್ಸ್ ಸಚಿವ ಅತಿಶಿ ನ.11ರಂದು ತನಿಖೆ ಆರಂಭಿಸಿದ್ದರು. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಈ ಸಂಬಂಧ ಅತಿಶಿ ಅವರಿಂದ ವರದಿ ಕೇಳಿದ್ದರು. ಸಚಿವ ಅತಿಶಿ ಅವರು ದೆಹಲಿಯ ವಿಜಿಲೆನ್ಸ್ ವಿಭಾಗದ ನಿರ್ದೇಶಕರು ಮತ್ತು ವಿಭಾಗೀಯ ಆಯುಕ್ತರಿಗೆ ಪತ್ರ ಬರೆದಿದ್ದು, ಈ ಸಂಬಂಧ ಎಲ್ಲಾ ಕಡತಗಳನ್ನು ಕೇಳಿದ್ದಾರೆ.
ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರು ದ್ವಾರಕಾ ಎಕ್ಸ್ ಪ್ರೆಸ್ವೇಗಾಗಿ ಭೂಸ್ವಾಧೀನದಲ್ಲಿ ದುರ್ಬಳಕೆ ಮಾಡಿಕೊಂಡು ಮಗನ ಕಂಪನಿಗೆ 315 ಕೋಟಿ ರೂ. ಲಾಭ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಕಳೆದ ಶುಕ್ರವಾರ ದೂರು ಬಂದ ಕೂಡಲೇ ಮುಖ್ಯಮಂತ್ರಿಗಳು ವಿಜಿಲೆನ್ಸ್ ಸಚಿವರಿಂದ ತನಿಖೆಗೆ ಆದೇಶಿಸಿದ್ದರು. ಆದರೆ, ಮುಖ್ಯ ಕಾರ್ಯದರ್ಶಿ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಎಲ್ಲ ಆರೋಪಗಳು ನಿರಾಧಾರ ಎಂದು ಹೇಳಿದ್ದಾರೆ. ಸೋಮವಾರ ಜಿಲ್ಲಾ ದೆಹಲಿಯ ವಿಭಾಗೀಯ ಆಯುಕ್ತ ಅಶ್ವನಿ ಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಿ, ಎಲ್ಲಾ ಆರೋಪಗಳನ್ನು ಆಧಾರರಹಿತ ಎಂದು ಬಣ್ಣಿಸಿದ್ದರು.
ನಡೆದಿರುವುದು ಏನು? : ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರ ಪುತ್ರ ಭೂಮಿಗೆ ಪರಿಹಾರವನ್ನು ಹೆಚ್ಚಿಸುವಂತೆ ಡಿಎಂಗೆ ಕೇಳಿದ್ದಾರೆ ಎಂಬ ಆರೋಪವಿದೆ. ಕಳೆದ ಮೂರು ಜಿಲ್ಲಾಧಿಕಾರಿಗಳು ಭೂ ಪರಿಹಾರ ಹೆಚ್ಚಿಸಲು ನಿರಾಕರಿಸಿದ್ದರು. ನರೇಶ್ ಕುಮಾರ್ ಮುಖ್ಯ ಕಾರ್ಯದರ್ಶಿಯಾದ 40 ದಿನಗಳ ನಂತರ ಹೇಮಂತ್ ಕುಮಾರ್ ಅವರು ನೈರುತ್ಯ ಜಿಲ್ಲಾ ಡಿಎಂ ಆಗಿದ್ದು, ಭೂ ಪರಿಹಾರ ಮೊತ್ತವನ್ನು 41.50 ಕೋಟಿ ರೂ.ಗಳಿಂದ 353 ಕೋಟಿ ರೂಗೆ ಹೆಚ್ಚಿಸಿ ಆದೇಶಿಸಿದ್ದರು.
ಆಪಾದಿತ ಪ್ರಕರಣದಲ್ಲಿ ಕಂಪನಿ 2015 ರಲ್ಲಿ ದ್ವಾರಕಾ ಎಕ್ಸ್‌ಪ್ರೆಸ್‌ವೇ ಬಳಿ ಕೇವಲ 75 ಲಕ್ಷ ರೂಪಾಯಿಗೆ ಭೂಮಿಯನ್ನು ಖರೀದಿಸಿತ್ತು. ಇದೀಗ ದುಬಾರಿ ದರದಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಇದರಿಂದ ಕಂಪನಿಯು 850 ಕೋಟಿ ರೂಪಾಯಿ ಅಕ್ರಮ ಲಾಭ ಗಳಿಸಿದೆ. ಮುಖ್ಯ ಕಾರ್ಯದರ್ಶಿಯವರು ತಮ್ಮ ಮಗನ ಇತರ ಅನೇಕ ಕಂಪನಿಗಳಿಗೆ ಸರ್ಕಾರಿ ಗುತ್ತಿಗೆಗಳನ್ನು ನೀಡಿದ್ದಾರೆ. ಈ ಕಂಪನಿಗಳ ತನಿಖೆಗೆ ಶಿಫಾರಸು ಮಾಡಲಾಗಿದೆ ಎಂದೂ ಹೇಳಲಾಗಿದೆ.
ಇದನ್ನೂ ಓದಿ : ಶೀಘ್ರವೇ ರಾಹುಲ್ ಗಾಂಧಿ ರಾಜಸ್ಥಾನದಲ್ಲಿ ಪ್ರಚಾರ ನಡೆಸಲಿದ್ದಾರೆ : ವದಂತಿಗೆ ತೆರೆ ಎಳೆದ ಕಾಂಗ್ರೆಸ್