ETV Bharat / bharat

Delhi unlock: ರಾಷ್ಟ್ರ ರಾಜಧಾನಿಯಲ್ಲಿ ಷರತ್ತುಗಳೊಂದಿಗೆ ನಿರ್ಬಂಧ ಸಡಿಲಿಕೆ

ಭೀಕರ ಕೊರೊನಾ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿರುವ ದೆಹಲಿ ಸರ್ಕಾರ ಹಂತ ಹಂತವಾಗಿ ಅನ್ಲಾಕ್​ ಪ್ರಕ್ರಿಯೆ ಆರಂಭಿಸಿದ್ದು, ಜನರು ತಮ್ಮ ಕೆಲಸ-ಕಾರ್ಯಗಳಿಗೆ ಮರಳುತ್ತಿದ್ದಾರೆ.

Delhi unlock
ರಾಷ್ಟ್ರ ರಾಜಧಾನಿಯಲ್ಲಿ ಷರತ್ತುಗಳೊಂದಿಗೆ ಲಾಕ್​ಡೌನ್​ ನಿರ್ಬಂಧ ಸಡಿಲಿಕೆ
author img

By

Published : Jun 7, 2021, 12:49 PM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್​ -19 ಪ್ರಕರಣಗಳು ಗಮನಾರ್ಹವಾಗಿ ಕಡಿಮೆಯಾದ ನಂತರ ಅನ್ಲಾಕ್ ಪ್ರಕ್ರಿಯೆ ಆರಂಭವಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದಂತೆ ಇಂದಿನಿಂದ ಷರತ್ತುಗಳೊಂದಿಗೆ ಕೆಲ ಸೇವೆಗಳು ಪುನಾರಂಭಗೊಂಡಿವೆ.

ಕಠಿಣ ಲಾಕ್​ಡೌನ್​ ವಿಧಿಸಿ ಭೀಕರ ಕೊರೊನಾ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ದೆಹಲಿ ಸರ್ಕಾರ ಯಶಸ್ವಿಯಾಗಿದೆ. ಲಾಕ್​ಡೌನ್​ ವೇಳೆಯಲ್ಲಿ ಆಸ್ಪತ್ರೆಗಳಿಗೆ ಆಕ್ಸಿಜನ್​, ಬೆಡ್​ಗಳು, ವೆಂಟಿಲೇಟರ್​ಗಳು ಸೇರಿದಂತೆ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಪೂರೈಸಲಾಗಿತ್ತು. ಇದರ ಪರಿಣಾಮ ಕೋವಿಡ್​ ಸಾವು-ನೋವಿನ ಪ್ರಮಾಣದಲ್ಲಿ ಭಾರಿ ಇಳಿಕೆ ಕಂಡಿತ್ತು. ಇದೀಗ ಕಳೆದ 24 ಗಂಟೆಗಳಲ್ಲಿ ಕೇವಲ 400 ಸೋಂಕಿತರು ಪತ್ತೆಯಾಗಿದ್ದು, ಪಾಸಿಟಿವಿಟಿ ರೇಟ್​ ಶೇ. 0.5ಕ್ಕೆ ಇಳಿಕೆಯಾಗಿದೆ.

ದೆಹಲಿಯಲ್ಲಿ ಷರತ್ತುಗಳೊಂದಿಗೆ ಪುನಾರಂಭವಾದ ಕೆಲಸ-ಕಾರ್ಯಗಳು

ಇದನ್ನೂ ಓದಿ: ಕೋವಿಡ್​ನಿಂದ ಗುಣಮುಖರಾದ ಮೇಲೆ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ದೆಹಲಿ ಜನತೆ!

ಶನಿವಾರ ಸುದ್ದಿಗೋಷ್ಠಿ ನಡೆಸಿದ್ದ ಸಿಎಂ ಕೇಜ್ರಿವಾಲ್, ಸೋಮವಾರದಿಂದ ಲಾಕ್​ಡೌನ್​ ನಿರ್ಬಂಧಗಳನ್ನು ಸಡಿಲಗೊಳಿಸಿ ಅನ್ಲಾಕ್ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ತಿಳಿಸಿದ್ದರು. ಇದಕ್ಕೂ ಮುನ್ನ ಆ್ಯಪ್ ಅಥವಾ ವೆಬ್‌ಸೈಟ್ ಮೂಲಕ ಬುಕ್ ಮಾಡಿದವರ ಮನೆ ಮನೆಗೆ ಮದ್ಯ ಸರಬರಾಜು ಮಾಡಲು ಪರವಾನಗಿ ಹೊಂದಿರುವ ಬಾರ್​-ವೈನ್​ ಶಾಪ್​ಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ದಿನಗೂಲಿ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣ ಚಟುವಟಿಕೆಗಳು ಮತ್ತು ಕಾರ್ಖಾನೆಗಳನ್ನು ತೆರೆಯಲು ಅನುಮತಿಸಿತ್ತು. ಹೀಗಾಗಿ ವಲಸೆ ಕಾರ್ಮಿಕರು ತಮ್ಮ ಕೆಲಸ ಆರಂಭಿಸಿದ್ದಾರೆ.

ಯಾವ್ಯಾವುದು ಅನ್ಲಾಕ್?

  • ಎಲ್ಲಾ ಅಗತ್ಯ ವಸ್ತುಗಳ ಅಂಗಡಿ-ಮುಂಗಟ್ಟು, ಮಾಲ್‌ಗಳಲ್ಲಿನ ಶಾಪ್​ಗಳು, ಮಾರುಕಟ್ಟೆಗಳು, ಮಾರ್ಕೆಟ್​ ಕಾಂಪ್ಲೆಕ್ಸ್​ಗಳು ಸಮಯದ ನಿರ್ಬಂಧಗಳೊಂದಿಗೆ ತೆರೆಯಲ್ಪಡುತ್ತವೆ.
  • ಮೇ 10 ರಿಂದ ಸ್ಥಗಿತಗೊಂಡಿದ್ದ ದೆಹಲಿ ಮೆಟ್ರೋ ಸೇವೆ ಶೇ,.50 ರಷ್ಟು ಸಾಮರ್ಥ್ಯದೊಂದಿಗೆ ಪುನರಾರಂಭಿಸಲಿದೆ.
  • ಶೇ. 50 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಖಾಸಗಿ ಕಚೇರಿಗಳಿಗೆ ಅವಕಾಶ
  • ಸರ್ಕಾರಿ ಕಚೇರಿಗಳಲ್ಲಿ ಶೇ.100ರಷ್ಟು ಗ್ರೂಪ್ -A ಸಿಬ್ಬಂದಿ ಹಾಗೂ ಶೇ.50ರಷ್ಟು ಗ್ರೂಪ್ -B ಸಿಬ್ಬಂದಿ ಕೆಲಸ ಮಾಡಬಹುದು
  • ಆನ್​ಲೈನ್​​ ಮದ್ಯ ಸರಬರಾಜು
  • ಕಾರ್ಖಾನೆಗಳಲ್ಲಿ ಕೆಲಸ, ನಿರ್ಮಾಣ ಕಾಮಗಾರಿ ಪುನಾರಂಭ

ಯಾವುದಕ್ಕೆಲ್ಲಾ ಲಾಕ್​?

ಇನ್ನು ಚಿತ್ರಮಂದಿರಗಳು, ಬಾರ್‌ ಮತ್ತು ರೆಸ್ಟೋರೆಂಟ್‌ಗಳು, ಕ್ಷೌರದಂಗಡಿಗಳು, ಬ್ಯೂಟಿ ಪಾರ್ಲರ್‌ಗಳು ತೆರೆಯುವಂತಿಲ್ಲ ಹಾಗೂ ಮನೋರಂಜನೆಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳು ನಡೆಸುವಂತಿಲ್ಲ ಎಂದು ದೆಹಲಿ ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.