ETV Bharat / bharat

'ನಾಯಿಗಳ ಜಗಳ'ಕ್ಕೆ ಕುಮ್ಮಕ್ಕು ಆರೋಪದಲ್ಲಿ 9 ಮಂದಿ ಪೊಲೀಸರ ಮೇಲೆ ಎಫ್​ಐಆರ್​: ಕೋರ್ಟ್ ನಿರ್ದೇಶನ - ದೆಹಲಿಯ 9 ಮಂದಿ ಪೊಲೀಸರ ವಿರುದ್ದ ಎಫ್​ಐಆರ್​

ದರೋಡೆ ಪ್ರಕರಣವೊಂದರ ಆರೋಪಿಯಾದ ಪ್ರಿನ್ಸ್ ಗಿಲ್ ಎಂಬುವವರ ಮನೆಗೆ ನುಗ್ಗಿದ್ದ ದೆಹಲಿ ಪೊಲೀಸರು, ಅಲ್ಲಿನ ಸಾಕು ನಾಯಿಯ ಸಾವಿಗೆ ಕಾರಣವಾದ ಆರೋಪದಲ್ಲಿ ಎಫ್​ಐಆರ್​ ದಾಖಲಿಸಬೇಕೆಂದು ರೋಹಿಣಿ ಕೋರ್ಟ್ ಸೂಚನೆ ನೀಡಿದೆ.

delhi Rohini Court Nine policemen will file an FIR in the case of cutting  accused off  dog
'ನಾಯಿಜಗಳ'ಕ್ಕೆ ಕುಮ್ಮಕ್ಕು ಆರೋಪದಲ್ಲಿ 9 ಮಂದಿ ಪೊಲೀಸರ ಮೇಲೆ ಎಫ್​ಐಆರ್​ಗೆ ದೆಹಲಿ ಕೋರ್ಟ್ ನಿರ್ದೇಶನ
author img

By

Published : Dec 24, 2021, 4:47 PM IST

ನವದೆಹಲಿ: ದರೋಡೆ ಪ್ರಕರಣದ ಆರೋಪಿಯ ಮನೆ ಮೇಲೆ ಪೊಲೀಸರ ದಾಳಿ ವೇಳೆ ವ್ಯಕ್ತಿಯ ಮೇಲೆ ಹಲ್ಲೆ ಮತ್ತು ವ್ಯಕ್ತಿಯ ಮನೆಯಲ್ಲಿದ್ದ ಸಾಕುನಾಯಿಯ ಸಾವಿಗೆ ಕಾರಣವಾದ ಆರೋಪದ ಮೇಲೆ ಸುಮಾರು 9 ಮಂದಿ ಪೊಲೀಸರ ವಿರುದ್ಧ ಎಫ್​ಐಆರ್ ದಾಖಲು ಮಾಡಿಕೊಳ್ಳಬೇಕು ಎಂದು ದೆಹಲಿಯ ರೋಹಿಣಿ ಕೋರ್ಟ್ ಜಿಲ್ಲೆಯ ಡಿಸಿಪಿಗೆ ನಿರ್ದೇಶನ ನೀಡಿದೆ.

ರೋಹಿಣಿ ಕೋರ್ಟ್​​ನ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಬಬ್ರು ಭಾನ್ ಈ ರೀತಿಯ ಆದೇಶ ನೀಡಿದ್ದು, ಜನವರಿ ಮೂರರಂದು ಈ ಪ್ರಕರಣದ ಕುರಿತು ಸಂಪೂರ್ಣ ವರದಿ ನೀಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಡಿಸೆಂಬರ್ 8ರಂದು ದೆಹಲಿಯ ಬೇಗಂಪುರ ಪೊಲೀಸರು, ದರೋಡೆ ಪ್ರಕರಣವೊಂದರ ಆರೋಪಿಯಾದ ಪ್ರಿನ್ಸ್ ಗಿಲ್ ಎಂಬುವವರ ಮನೆಗೆ ನುಗ್ಗಿದ್ದರು. ಈ ವೇಳೆ, ಹಲ್ಲೆ ನಡೆಸಿದ್ದು, ಮಾತ್ರವಲ್ಲದೇ ಪ್ರಿನ್ಸ್ ಗಿಲ್ ಮನೆಯ ಸಾಕು ನಾಯಿಯ ಮೇಲೆ ಪಿಟ್​ಬುಲ್ ನಾಯಿಯನ್ನು ಛೂ ಬಿಟ್ಟಿದ್ದರು ಎಂದು ಪ್ರಿನ್ಸ್ ಗಿಲ್ ಮನೆಯವರು ಆರೋಪಿಸಿದ್ದಾರೆ.

ಸಾಕುನಾಯಿ ಪಿಟ್​ಬುಲ್ ನಾಯಿಯೊಂದಿಗೆ ಹೋರಾಡುತ್ತಿತ್ತು. ಪೊಲೀಸರು ಅದನ್ನು ಹುರಿದುಂಬಿಸುತ್ತಿದ್ದರು ಎಂದು ಪ್ರಿನ್ಸ್ ಗಿಲ್ ಕುಟುಂಬಸ್ಥರು ಆರೋಪಿಸಿದ್ದಾರೆ. ಇದರೊಂದಿಗೆ ಮನೆಯವರು ಮೊಬೈಲ್​ನಲ್ಲಿ ದೃಶ್ಯವನ್ನು ರೆಕಾರ್ಡ್ ಮಾಡಿದ್ದು, ಕೋರ್ಟ್​ಗೆ ನೀಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಸಾಕುನಾಯಿ ನಂತರ ಸಾವನ್ನಪ್ಪಿದೆ.

ಈ ಪ್ರಕರಣದ ವಿಚಾರಣೆ ನಡೆಸಿದ ರೋಹಿಣಿ ಕೋರ್ಟ್ ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲಾ 9 ಮಂದಿ ಪೊಲೀಸರ ಮೇಲೆ ಎಫ್​ಐಆರ್ ದಾಖಲು ಮಾಡಿಕೊಳ್ಳುವಂತೆ ಸೂಚನೆ ನೀಡಿದೆ. ಅದರ ಜೊತೆಗೆ ಜನವರಿ ಮೂರರಂದು ವರದಿ ಸಲ್ಲಿಕೆಗೆ ನಿರ್ದೇಶನ ನೀಡಿದೆ.

ಇದನ್ನೂ ಓದಿ: ಬೆಂಗಳೂರಿನ ಮಸೀದಿ ಕಾಂಪ್ಲೆಕ್ಸ್​ನಲ್ಲಿ ಸಿಲಿಂಡರ್ ಸ್ಫೋಟ: ಇಬ್ಬರಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.