ನವದೆಹಲಿ: ದೇಶದಲ್ಲಿ ಮತ್ತೊಂದು ಮಂಕಿಪಾಕ್ಸ್ ವೈರಸ್ ಪ್ರಕರಣ ಪತ್ತೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನೈಜೀರಿಯಾದ 31 ವರ್ಷದ ಮಹಿಳೆಗೆ ಮಂಕಿಪಾಕ್ಸ್ ಪಾಸಿಟಿವ್ ದೃಢಪಟ್ಟಿದೆ.
ಇದು ದೆಹಲಿಯಲ್ಲಿ ಪತ್ತೆಯಾದ ನಾಲ್ಕನೇ ಮಂಕಿಪಾಕ್ಸ್ ಪಾಸಿಟಿವ್ ಪ್ರಕರಣವಾಗಿದ್ದು, ಈ ಮೂಲಕ ದೇಶದಲ್ಲಿ ಒಟ್ಟಾರೆ ಪ್ರಕರಣ ಸಂಖ್ಯೆ 9ಕ್ಕೆ ಏರಿದಂತಾಗಿದೆ. ಈ ಎಲ್ಲ ಒಂಭತ್ತೂ ಪಾಸಿಟಿವ್ ಕೇಸ್ಗಳು ದೆಹಲಿ ಹಾಗೂ ಕೇರಳದಲ್ಲೇ ಕಾಣಿಸಿಕೊಂಡಿವೆ. ಕೇರಳದಲ್ಲಿ ಕೆಲ ದಿನಗಳ ಹಿಂದೆ ಪಾಸಿಟಿವ್ ಬಂದಿದ್ದ ಯುವಕನೋರ್ವ ಸಾವನ್ನಪ್ಪಿದ್ದ.
ನಿನ್ನೆಯಷ್ಟೇ ದೆಹಲಿಯಲ್ಲಿ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದೇ ಇರುವ 35 ವರ್ಷದ ವಿದೇಶಿ ವ್ಯಕ್ತಿಗೆ ಪಾಸಿಟಿವ್ ಕಂಡು ಬಂದಿತ್ತು. ಈತನನ್ನು ಸರ್ಕಾರಿ ಎಲ್ಎನ್ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣ ಪತ್ತೆಯಾದ ನಂತರ ದೆಹಲಿ ಸರ್ಕಾರ ಮೂರು ಖಾಸಗಿ ಆಸ್ಪತ್ರೆಗಳಿಗೆ ಶಂಕಿತರ ದಾಖಲಿಸಲು ಐಸೋಲೇಷನ್ ವಾರ್ಡ್ಗಳನ್ನು ಸಿದ್ಧಪಡಿಸುವಂತೆ ಸೂಚಿಸಿದೆ.
ಇದನ್ನೂ ಓದಿ: ಫ್ಯಾಕ್ಟರಿಯಲ್ಲಿ ಅನಿಲ ಸೋರಿಕೆಯಿಂದ ನಾಲ್ವರು ಕಾರ್ಮಿಕರು ಸಾವು.. ಇಬ್ಬರ ಸ್ಥಿತಿ ಗಂಭೀರ