ETV Bharat / bharat

14 ವರ್ಷಗಳಲ್ಲೇ ಮೊದಲ ಬಾರಿಗೆ ಅತಿ ಕಡಿಮೆ ಉಷ್ಣಾಂಶ ದಾಖಲು: ನಡುಗಿದ ದೆಹಲಿಗರು - ದೆಹಲಿ ನಗರದಲ್ಲಿ ಕನಿಷ್ಠ ಉಷ್ಣಾಂಶ ದಾಖಲು

ಹವಾಮಾನ ಇಲಾಖೆಯ ಪ್ರಕಾರ, 14 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 7.4 ಡಿಗ್ರಿ ಸೆಲ್ಸಿಯಸ್​​​ನೊಂದಿಗೆ ದೆಹಲಿ ಅತೀ ಕಡಿಮೆ ಉಷ್ಣಾಂಶ ದಾಖಲಿಸಿದೆ. ಕಳೆದ ವರ್ಷ ಕನಿಷ್ಠ 11.5 ಡಿಗ್ರಿ ಸೆಲ್ಸಿಯಸ್, 2018 ರಲ್ಲಿ 10.5 ಡಿಗ್ರಿ ಸೆಲ್ಸಿಯಸ್ ಮತ್ತು 2017 ರ ನವೆಂಬರ್ ತಿಂಗಳಲ್ಲಿ 7.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.

Delhi records coldest November morning in at least 14 years
ಅತೀ ಕಡಿಮೆ ಉಷ್ಣಾಂಶ ದಾಖಲಿಸಿದ ಡೆಲ್ಲಿ
author img

By

Published : Nov 20, 2020, 12:44 PM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಶುಕ್ರವಾರ ಕನಿಷ್ಠ 7.5 ಡಿಗ್ರಿ ಉಷ್ಣಾಂಶ ದಾಖಲಿಸಿದೆ, ಇದು ಕಳೆದ 14 ವರ್ಷಗಳಲ್ಲಿ ಅತ್ಯಂತ ಕನಿಷ್ಠ ತಾಪಮಾನವಾಗಿದೆ ಎಂದು ಭಾರತದ ಹವಾಮಾನ ಇಲಾಖೆಯ ಅಂಕಿ ಅಂಶಗಳು ತಿಳಿಸಿವೆ.

ಹವಾಮಾನ ಮುನ್ಸೂಚನೆ ನೀಡುವ ಖಾಸಗಿ ಸಂಸ್ಥೆಯಾದ ಸ್ಕೈಮೇಟ್ ನ ತಜ್ಞ ಮಹೇಶ್ ಪಲಾವತ್ ಪ್ರಕಾರ, ಕನಿಷ್ಠ ತಾಪಮಾನವು 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರುವುದರಿಂದ ದೆಹಲಿಯಲ್ಲಿ ಮೈ ಕೊರೆಯುವ ಚಳಿ ಉಂಟಾಗುತ್ತಿದೆ. ಹಿಮದಿಂದ ತುಂಬಿದ ಪಶ್ಚಿಮ ಹಿಮಾಲಯದ ಕಡೆಯಿಂದ ತಂಪಾದ ಗಾಳಿ ಬೀಸುತ್ತಿರುವ ಕಾರಣ ತಾಪಮಾನ ಕಡಿಮೆಯಾಗಿ ಚಳಿ ಹೆಚ್ಚಾಗಿದೆ ಹಾಗೂ ಶನಿವಾರದವರೆಗೆ ಇದೇ ರೀತಿಯ ಪರಿಸ್ಥಿತಿ ಮುಂದುವರಿಯಲಿದೆ ಎಂದು ಪಲಾವತ್ ಹೇಳಿದ್ದಾರೆ. ನವೆಂಬರ್ 23 ರಂದು ವಾಯುವ್ಯದ ಕಡೆಯಿಂದ ಮತ್ತೊಂದು ತೊಂದರೆ ಎದುರಾಗಲಿದ್ದು, ಇದು ಮತ್ತಷ್ಟು ಕನಿಷ್ಠ ತಾಪಮಾನ ಹೆಚ್ಚಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದರು. ದೆಹಲಿಯಲ್ಲಿ ಕಳೆದ ವರ್ಷ ಕನಿಷ್ಠ 11.5 ಡಿಗ್ರಿ ಸೆಲ್ಸಿಯಸ್, 2018 ರಲ್ಲಿ 10.5 ಡಿಗ್ರಿ ಸೆಲ್ಸಿಯಸ್ ಮತ್ತು 2017 ರ ನವೆಂಬರ್ ತಿಂಗಳಲ್ಲಿ 7.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಗುರುವಾರ, ದೆಹಲಿ ನಗರದಲ್ಲಿ ಕನಿಷ್ಠ 9.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.