ದೆಹಲಿ: ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣದ 3ನೇ ಹಂತದ ಲಸಿಕೆ ಅಭಿಯಾನವು ಪ್ರಾರಂಭವಾಗಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೂಡ ಇಲ್ಲಿನ ಆರ್ಆರ್ ಆಸ್ಪತ್ರೆಯಲ್ಲಿ ಚುಚ್ಚುಮದ್ದು ಹಾಕಿಸಿಕೊಳ್ಳುವ ಮೂಲಕ ಸಾಮಾನ್ಯ ಜನರಿಗೆ ಧೈರ್ಯ ತುಂಬಿದ್ದಾರೆ.
ಇದನ್ನೂ ಓದಿ: ಏಮ್ಸ್‌ನಲ್ಲಿ ಕೋವ್ಯಾಕ್ಸಿನ್ ಲಸಿಕೆ ಪಡೆದ ಪ್ರಧಾನಿ ನರೇಂದ್ರ ಮೋದಿ
ಇಂದು ಬೆಳಗ್ಗೆ ನೇರವಾಗಿ ಆಸ್ಪತ್ರೆಗೆ ತೆರಳಿದ ರಾಷ್ಟ್ರಪತಿಗಳು ಅಲ್ಲಿನ ಸಿಬ್ಬಂದಿಯಿಂದ ತಮ್ಮ ಎಡಗೈಗೆ ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆ ತೆಗೆದುಕೊಂಡು ಬಳಿಕ ಚುಚ್ಚುಮದ್ದನ್ನು ಪಡೆಯಲು ಅರ್ಹರಾದ ಎಲ್ಲರಿಗೂ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಸಹ ಮಾಡಿದ್ದಾರೆ.
-
Delhi: President Ram Nath Kovind receives first dose of COVID19 vaccine at RR Hospital pic.twitter.com/5dnJxBRQ9a
— ANI (@ANI) March 3, 2021 " class="align-text-top noRightClick twitterSection" data="
">Delhi: President Ram Nath Kovind receives first dose of COVID19 vaccine at RR Hospital pic.twitter.com/5dnJxBRQ9a
— ANI (@ANI) March 3, 2021Delhi: President Ram Nath Kovind receives first dose of COVID19 vaccine at RR Hospital pic.twitter.com/5dnJxBRQ9a
— ANI (@ANI) March 3, 2021
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರು ಈಗ ಕೋವಿಡ್-19 ಚುಚ್ಚುಮದ್ದು ಹಾಕಿಸಿಕೊಳ್ಳುತ್ತಿದ್ದು, ಈ ಸಾಲಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡ ಸೇರಿದ್ದಾರೆ.