ನವದೆಹಲಿ: ಗಂಭೀರ ಸಂದೇಶಕ್ಕೆ ಹಾಸ್ಯದ ಸಿಂಚನವನ್ನು ನೀಡುವ ಮೂಲಕ ದೆಹಲಿ ಪೊಲೀಸರು ವಿನೂತನ ಪ್ರಯೋಗವೊಂದನ್ನು ಮಾಡಿದ್ದಾರೆ. ಪೊಲೀಸರು ಕಭಿ ಖುಷಿ ಕಭಿ ಗಮ್ ಚಿತ್ರದ ಬಾಲಿವುಡ್ನ ಕರೀನಾ ಕಪೂರ್ ಖಾನ್ ಅವರ ಚಿತ್ರದ ತುಣಕಿನ ಮೂಲಕ ತಮ್ಮದೇ ಕೌಶಲ್ಯ ಪ್ರದರ್ಶಿಸಿದ್ದಾರೆ.
ದೆಹಲಿ ಪೊಲೀಸರು ಅಧಿಕೃತ ಟ್ವಿಟರ್ ಖಾತೆಯ ಮೂಲಕ ಈ ವಿಡಿಯೋ ಹಂಚಿಕೊಂಡಿದ್ದಾರೆ. ವೇಗವಾಗಿ ವಾಹನ ಚಲಾಯಿಸುವ ಮತ್ತು ಕೆಂಪು ದ್ವೀಪ ಇದ್ದರೂ ವಾಹನ ನಿಲ್ಲಿಸದೆ ಸಂಚಾರ ಮಾಡುವವರಿಗೆ ಜಾಗೃತಿ ಮೂಡಿಸಲು ಈ ವಿಡಿಯೋ ಬಳಕೆ ಮಾಡಿಕೊಳ್ಳಲಾಗಿದೆ.
ವಿಡಿಯೋದಲ್ಲಿ ಕೆಂಪು ಬಣ್ಣದ ಟ್ರಾಫಿಕ್ ಲೈಟ್ ಇದ್ದರೂ ಕಾರ್ ವೇಗವಾಗಿ ಸಂಚರಿಸಿದೆ. ಕೆಂಪು ದೀಪವನ್ನು ದಾಟಿದ ತಕ್ಷಣ, ಕರೀನಾ ಪಾತ್ರದ ತುಣುಕೊಂದು ಕೆಂಪು ದೀಪದ ಮೇಲೆ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಯಾರಿವನು? ನನ್ನನ್ನು ನೋಡದೆ ಹೀಗ್ ಹೋಗ್ತಾ ಇರೋನು ಎಂದು ಹೇಳುವ ವಿಡಿಯೋ ಹಾಕಲಾಗಿದೆ.
-
Who's that traffic violator?
— Delhi Police (@DelhiPolice) July 16, 2022 " class="align-text-top noRightClick twitterSection" data="
Poo likes attention, so do the traffic lights !#RoadSafety#SaturdayVibes pic.twitter.com/ZeCJfJigcb
">Who's that traffic violator?
— Delhi Police (@DelhiPolice) July 16, 2022
Poo likes attention, so do the traffic lights !#RoadSafety#SaturdayVibes pic.twitter.com/ZeCJfJigcbWho's that traffic violator?
— Delhi Police (@DelhiPolice) July 16, 2022
Poo likes attention, so do the traffic lights !#RoadSafety#SaturdayVibes pic.twitter.com/ZeCJfJigcb
ದೆಹಲಿ ಪೊಲೀಸರ ಈ ಕ್ರಮದಿಂದ ಆಶ್ಚರ್ಯಚಕಿತರಾದ ಕರೀನಾ ಕೂಡ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಇದನ್ನು ಹಂಚಿಕೊಂಡಿದ್ದಾರೆ. ಕಭಿ ಖುಷಿ ಕಭಿ ಗಮ್ 2001 ರಲ್ಲಿ ಬಿಡುಗಡೆಯಾಗಿತ್ತು ಮತ್ತು ಇದನ್ನು ಕರಣ್ ಜೋಹರ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಶಾರುಖ್ ಖಾನ್, ಕಾಜೋಲ್ ಮತ್ತು ಹೃತಿಕ್ ರೋಷನ್ ಸಹ ನಟಿಸಿದ್ದಾರೆ.
ಇದನ್ನೂ ಓದಿ: ಚಲಿಸುತ್ತಿದ್ದ ವಾಹನದ ಮೇಲೆ ಪುಷ್ಅಪ್.. ಎದ್ದು ನಿಂತು ದುಸ್ಸಾಹಸ, ಕೆಳಗೆ ಬಿದ್ದವನ ಸ್ಥಿತಿ ಹೀಗಾಯ್ತು ನೋಡಿ