ETV Bharat / bharat

ಪುತ್ರನ ವಿರುದ್ಧ ಅತ್ಯಾಚಾರ ಆರೋಪ : ರಾಜಸ್ಥಾನ ಸಚಿವ ಮಹೇಶ್‌ ಜೋಶಿ ಮನೆಗೆ ಸಮನ್ಸ್​ ಜಾರಿ - ದೆಹಲಿ ಪೊಲೀಸರಿಂದ ಸಮನ್ಸ್​​ ಜಾರಿ

ನನ್ನ ಪತ್ನಿಗೆ ಡಿವೋರ್ಸ್​ ಕೊಟ್ಟಿದ್ದು, ನಿನ್ನನ್ನು ಮದುವೆ ಆಗುತ್ತೇನೆ ಎಂದು ಹೇಳಿ ರೋಹಿತ್​ ಶರ್ಮಾ ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ, ನನ್ನ ಖಾಸಗಿ ಫೋಟೋಗಳು ಮತ್ತು ವಿಡಿಯೋ ಸಹ ಮಾಡಿಕೊಂಡಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.

summons Rajasthan minister Mahesh Joshi's son in rape case
ರಾಜಸ್ಥಾನದ ಸಚಿವ ಮಹೇಶ್​ ಜೋಷಿ ಅವರ ಮಗ ರೋಹಿತ್​ ಜೋಷಿ ವಿರುದ್ಧ ರೇಪ್​ ಆರೋಪ
author img

By

Published : May 15, 2022, 3:14 PM IST

ಜೈಪುರ (ರಾಜಸ್ಥಾನ): ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಜಸ್ಥಾನದ ಸಚಿವ ಮಹೇಶ್​ ಜೋಷಿ ಅವರ ಮಗ ರೋಹಿತ್​ ಜೋಷಿಗೆ ದೆಹಲಿ ಪೊಲೀಸರು ಭಾನುವಾರ ಸಮನ್ಸ್​​ ಜಾರಿ ಮಾಡಿದ್ದಾರೆ. ಮೇ 18ರೊಳಗೆ ವಿಚಾರಣೆಗೆ ಹಾಜರಾಗುವಂತೆ ಸಚಿವ ಜೋಷಿ ಮನೆಯ ಹೊರಗೆ ಸಮನ್ಸ್​​ ಪ್ರತಿಯನ್ನು ಪೊಲೀಸರು ಅಂಟಿಸಿದ್ದಾರೆ.

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಿ 24 ವರ್ಷದ ಮಹಿಳೆಯು ರೋಹಿತ್​ ಜೋಷಿ ವಿರುದ್ಧ ದೆಹಲಿಯ ಸದರ್​ ಬಜಾರ್​ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನನ್ವಯ ದೆಹಲಿ ಪೊಲೀಸರು ಎಫ್​​ಐಆರ್ ದಾಖಲಿಸಿಕೊಂಡಿದ್ದಾರೆ. ಅಲ್ಲದೆ 15 ಜನ ಸಿಬ್ಬಂದಿಯ ತಂಡ ಜೈಪುರಕ್ಕೆ ಬಂದು ಸಮನ್ಸ್​ ನೀಡಿದ್ದಾರೆ.

ಇತ್ತ, ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಮಹೇಶ್​ ಜೋಷಿ, ದೆಹಲಿ ಪೊಲೀಸರು ಇದುವರೆಗೆ ನನ್ನನ್ನು ಸಂಪರ್ಕಿಸಿಲ್ಲ. ಅಲ್ಲದೇ, ಕಾನೂನು ಪ್ರಕಾರ ಪೊಲೀಸ್​​ ತನಿಖೆಗೆ ಅಗತ್ಯ ಸಹಕಾರ ನೀಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿ ಅಗ್ನಿ ದುರಂತದಲ್ಲಿ 27 ಮಂದಿ ಬಲಿ : 50 ಜನರ ಪಾಲಿಗೆ ಆಪದ್ಬಾಂಧವನಾದ ಕ್ರೇನ್​ ಚಾಲಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.