ETV Bharat / bharat

ಲಾಠಿ ಬದಲು ಪೊಲೀಸರ ಕೈಗೆ ಬಂದವು ಸ್ಟೀಲ್‌ ರಾಡ್‌ಗಳು.. ಇದು ಸಾಧ್ಯವೇ, ಸಾಧುವೇ!?

author img

By

Published : Feb 1, 2021, 9:29 PM IST

ರೈತರ ಟ್ರ್ಯಾಕ್ಟರ್ ರ‍್ಯಾಲಿ ಮತ್ತು ನಂತರದ ಅವಾಂತರಗಳ ಸಂದರ್ಭದಲ್ಲಿ ದೆಹಲಿ ಪೊಲೀಸರ ಮೇಲೆ ಕತ್ತಿಯಿಂದ ಹಲವು ಬಾರಿ ಹಲ್ಲೆ ಮಾಡಲಾಗಿದೆ. ಈ ದಾಳಿಯಲ್ಲಿ ಎಸ್‌ಹೆಚ್‌ಒ ಸೇರಿದಂತೆ ಹಲವಾರು ಪೊಲೀಸರು ಗಾಯಗೊಂಡಿದ್ದಾರೆ..

Delhi Police made steel shield
ದೆಹಲಿ ಪೊಲೀಸರಿಂದ ಸ್ಟೀಲ್ ಲಾಠಿ ತಯಾರಿ

ನವದೆಹಲಿ : ರೈತರ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರ ಮತ್ತು ಟ್ರ್ಯಾಕ್ಟರ್​ ರ‍್ಯಾಲಿ ವೇಳೆಯಲ್ಲಿ ಗಾಯಗೊಂಡ ಪೊಲೀಸರನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಪೊಲೀಸರು ಸ್ಟೀಲ್​ನ ಲಾಠಿ ಸಿದ್ಧಪಡಿಸಿದ್ದಾರೆ.

ದೆಹಲಿ ಪೊಲೀಸರಿಂದ ಸ್ಟೀಲ್​ನ ಲಾಠಿ ತಯಾರಿ

ಶಹದಾರ ಜಿಲ್ಲಾ ಪೊಲೀಸರು ತಯಾರಿಸಿರುವ ಈ ಲಾಠಿಗಳಿಂದ ಖಡ್‌ಗಳ ವಿರುದ್ಧ ಹೋರಾಡಬಹುದಾಗಿದೆ. ಆದರೆ, ಈ ಶಸ್ತ್ರಾಸ್ತ್ರವನ್ನು ಭದ್ರತೆಯಲ್ಲಿ ಸೇರಿಸಲಾಗಿಲ್ಲ. ಇವುಗಳನ್ನು ಕೇವಲ ಪರೀಕ್ಷೆ ಮಾಡಲು ಮಾತ್ರ ಬಳಸಲಾಗಿದೆ. ಬಳಿಕ ವಾಪಸ್​ ಪಡೆಯಲಾಗುವುದು ಎಂದು ಹೆಚ್ಚುವರಿ ಡಿಸಿಪಿ ಶಹದಾರ್ ಸಂಜಯ್ ಸೇನ್ ಹೇಳಿದ್ದಾರೆ.

ಓದಿ: ಪ್ರತಿಭಟನೆ ವೇಳೆ ಕಾಣೆಯಾದ ರೈತರು : ಶಾ ಭೇಟಿ ಮಾಡಿದ ಪಂಜಾಬ್ ಸಚಿವರು, ಸಂಸದರು

ರೈತರ ಟ್ರ್ಯಾಕ್ಟರ್ ರ‍್ಯಾಲಿ ಮತ್ತು ನಂತರದ ಅವಾಂತರಗಳ ಸಂದರ್ಭದಲ್ಲಿ ದೆಹಲಿ ಪೊಲೀಸರ ಮೇಲೆ ಕತ್ತಿಯಿಂದ ಹಲವು ಬಾರಿ ಹಲ್ಲೆ ಮಾಡಲಾಗಿದೆ. ಈ ದಾಳಿಯಲ್ಲಿ ಎಸ್‌ಹೆಚ್‌ಒ ಸೇರಿದಂತೆ ಹಲವಾರು ಪೊಲೀಸರು ಗಾಯಗೊಂಡಿದ್ದಾರೆ. ಈ ದಾಳಿಯ ಸಮಯದಲ್ಲಿ ದೆಹಲಿ ಪೊಲೀಸರಿಗೆ ಬದುಕುಳಿಯಲು ಯಾವುದೇ ಭದ್ರತಾ ಉಪಕರಣಗಳು ಇರಲಿಲ್ಲ. ಈ ಹಿನ್ನೆಲೆ ಸ್ಟೀಲ್​ನ ಲಾಠಿ ಸಿದ್ಧಪಡಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.