ETV Bharat / bharat

ಶ್ರದ್ಧಾ ವಾಲ್ಕರ್​ ಹತ್ಯೆ ಪ್ರಕರಣ: ದೆಹಲಿ ಪೊಲೀಸರಿಂದ ಇಂದು 3000 ಪುಟಗಳ ಚಾರ್ಜ್​ ಶೀಟ್​ ಸಲ್ಲಿಕೆ ಸಾಧ್ಯತೆ - ದೆಹಲಿ ಪೊಲೀಸರು ಇಂದು ಚಾರ್ಜ್​ ಶೀಟ್​ ಸಲ್ಲಿಸುವ ಸಾಧ್ಯತೆ

ದೇಶವನ್ನೇ ಬೆಚ್ಚಿ ಬೀಳಿಸಿದ ಈ ಪ್ರಕರಣದಲ್ಲಿ ಪೊಲೀಸರು, ಫೋರೆನ್ಸಿಕ್​ ಮತ್ತು ಎಲೆಕ್ಟ್ರಾನಿಕ್​ ಸಾಕ್ಷಿಗಳ ಆಧಾರದ ಮೇಲೆ ಆರೋಪ ಪಟ್ಟಿ ಸಿದ್ದಪಡಿಸಿದ್ದು, ಇಂದು ಅದನ್ನು ಕೋರ್ಟ್​​ಗೆ ಸಲ್ಲಿಸಲಿದ್ದಾರೆ.

ಶ್ರದ್ಧಾ ವಾಲ್ಕರ್​ ಹತ್ಯೆ ಪ್ರಕರಣ: ದೆಹಲಿ ಪೊಲೀಸರಿಂದ ಇಂದು 3000 ಪುಟಗಳ ಚಾರ್ಜ್​ ಶೀಟ್​ ಸಲ್ಲಿಕೆ ಸಾಧ್ಯತೆ
delhi-police-likely-to-submit-3000-page-charge-sheet-on-shraddha-walker-murder-case
author img

By

Published : Jan 24, 2023, 2:03 PM IST

ನವದೆಹಲಿ: ಶ್ರದ್ಧಾ ವಾಲ್ಕರ್​ ಹತ್ಯೆ ಪ್ರಕರಣ ಸಂಬಂಧ ಸಕೇತ್ ಜಿಲ್ಲಾ ನ್ಯಾಯಾಲಯದ ಮುಂದೆ ದೆಹಲಿ ಪೊಲೀಸರು ಇಂದು ಚಾರ್ಜ್​ ಶೀಟ್​ ಸಲ್ಲಿಸುವ ಸಾಧ್ಯತೆ ಇದೆ. ಸುಮಾರು 100 ಸಾಕ್ಷಗಳ, 3000 ಪುಟಗಳ ಆರೋಪ ಪಟ್ಟಿಯನ್ನು ಸಲ್ಲಿಸಲಿದೆ. ಇದರಲ್ಲಿ ಫೋರೆನ್ಸಿಕ್​ ಮತ್ತು ಎಲೆಕ್ಟ್ರಾನಿಕ್​ ಸಾಕ್ಷಿಗಳ ಆಧಾರದ ಮೇಲೆ ಈ ಆರೋಪ ಪಟ್ಟಿಯನ್ನು ಸಿದ್ದಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಾಲ್ಕರ್​ ಜೊತೆ ಸಹ ಜೀವನ ನಡೆಸುತ್ತಿದ್ದ ಅಫ್ತಾಬ್​ ಪುನಾವಾಲಾ, ಆಕೆಯನ್ನು ಕೊಂದು ತುಂಡು ತುಂಡಾಗಿ ಕತ್ತರಿಸಿ, ಅದನ್ನು ಮೆಹ್ರೋಲಿ​ ಅರಣ್ಯ ಪ್ರದೇಶದಲ್ಲಿ ಬಿಸಾಡಿದ್ದ. ಈ ಪ್ರಕರಣ ಸಂಬಂಧ ಬಂಧಿತನಾಗಿರುವ ಆರೋಪಿ ಅಫ್ತಬ್​ ಪುನಾವಾಲನ ಜನವರಿ 10 ರಿಂದ ಮತ್ತೆ ನ್ಯಾಯಾಂಗ ಬಂಧನ ಅವಧಿಯನ್ನು 14 ದಿನಗಳ ಕಾಲ ವಿಸ್ತರಣೆ ಮಾಡಿ ಮೆಟ್ರೋಪಾಲಿಟನ್​ ಮೆಜಿಸ್ಟ್ರೇಟ್​ ಅವಿರಾಲ್​ ಶುಕ್ಲಾ ಆದೇಶ ನೀಡಿದ್ದಾರೆ. ಇನ್ನು ನ್ಯಾಯಾಂಗ ಬಂಧನದಲ್ಲಿರುವ ಪುನಾವಾಲ ಅಧ್ಯಯನಕ್ಕೆ ಕಾನೂನು ಪುಸ್ತಕ ಸೇರಿದಂತೆ ಹಲವು ಬೇಡಿಕೆ ಇಟ್ಟಿದ್ದಾನೆ.

ಜನವರಿ 6ರಂದು, ಚಳಿ ಹೆಚ್ಚಿರುವ ಹಿನ್ನೆಲೆ ಕೆಲವು ಬೆಚ್ಚಗಿನ ಉಡುಪುಗೊಳ್ಳಲು ತಮ್ಮ ಡೆಬಿಟ್​ ಮತ್ತು ಕ್ರೆಡಿಟ್​ ಕಾರ್ಡ್​ ಮೂಲಕ ಹಣ ನೀಡುವಂತೆ ಕೋರಿ ಕೋರ್ಟ್​​ಗೆ ಪುನಾವಾಲ ಅರ್ಜಿ ಸಲ್ಲಿಸಿದ್ದ. ಈ ಬೇಡಿಕೆ ಆಲಿಸಿದ ನ್ಯಾಯಾಲಯ ಆತನಿಗೆ ಬೆಚ್ಚಗಿನ ಉಡುಪು ನೀಡಲು ಜೈಲು ಅಧಿಕಾರಿಗಳು ಸೂಚನೆ ನೀಡಿದೆ.

ಜಾಮೀನು ಅರ್ಜಿ ಹಿಂಪಡೆದ ಅಫ್ತಾಬ್​: ಜಾಮೀನು ಅರ್ಜಿ ಎಂಬುದು ಅರಿವು ಇರದೇ ಡಿಸೆಂಬರ್​ 17ರಂದು ವಕಾಲತ್ತಿಗೆ ನಾನು ಸಹಿ ಹಾಕಿದೆ. ಅದಕ್ಕೆ, ಈ ಅರ್ಜಿ ಏನೆಂಬುದು ತಿಳಿಯದೇ ಕಾರಣ ಸಹಿ ಹಾಕಿದ್ದೆ. ಆದರೆ, ಈಗ ನಾನು ಈ ಜಾಮೀನು ಅರ್ಜಿ ಹಿಂಪಡೆಯುತ್ತೇನೆ. ಜಾಮೀನು ಅರ್ಜಿಯನ್ನು ತಪ್ಪಾಗಿ ಸಲ್ಲಿಸಲಾಗಿದೆ ಎಂದು ಈ ಸಂಬಂಧ ನ್ಯಾಯಾಲಯಕ್ಕೂ ಇಮೇಲ್​ ಮೂಲಕ ತಿಳಿಸಿದ್ದ. ಈ ಸಂಬಂಧ ನ್ಯಾಯಾಲಯ ಪ್ರಶ್ನಿಸಿದಾಗ ಜಾಮೀನು ಅರ್ಜಿ ಹಿಂಪಡೆಯುವುದಾಗಿ ತಿಳಿಸಿ ಡಿ. 22ರಂದು ಅರ್ಜಿ ಹಿಂಪಡೆದಿದ್ದ.

ಶ್ರದ್ಧಾ ಮತ್ತು ಅಫ್ತಾಬ್ 2018 ರಲ್ಲಿ ಡೇಟಿಂಗ್ ಅಪ್ಲಿಕೇಶನ್ 'ಬಂಬಲ್' ಮೂಲಕ ಪರಿಚಯವಾಗಿದ್ದರು. ಇಬ್ಬರೂ ಮೇ 8 ರಂದು ದೆಹಲಿಗೆ ಬಂದಿದ್ದರು. 2022ರ ಮೇ 18 ರಂದು ಆಫ್ತಾಬ್ ಶ್ರದ್ಧಾಳನ್ನು ಕೊಂದು, ಅವರ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ 18 ದಿನಗಳ ಕಾಲ ಅವುಗಳನ್ನು ವಿವಿಧ ಸ್ಥಳಗಳಲ್ಲಿ ಎಸೆದಿದ್ದ. ಇನ್ನು ಈ ಘಟನೆ ಕುರಿತು ಮುಂಬೈನಲ್ಲಿ ಮೊದಲ ಬಾರಿಗೆ ಮಾತನಾಡಿದ್ದ ಶ್ರದ್ಧಾ ತಂದೆ, ಮಗಳನ್ನು ಕೊಂದ ಆರೋಪಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಮನವಿ ಮಾಡಿದ್ದರು. ಈ ಹಿಂದೆಯೇ ಮಗಳು ಅಫ್ತಾಭ್​​ ಕುರಿತು ವಾಸೈ, ನಲಸೋಪರ್​ ಮತ್ತು ತುಳಿಂಜ್​ ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿದ್ದಳು. ಆದರೆ, ಅವರು ಈ ಬಗ್ಗೆ ನಿರ್ಲಕ್ಷ್ಯವಹಿಸಿದ್ದರು ಎಂದು ಆರೋಪಿಸಿದ್ದರು

ಡಿಎನ್​ಎ ಪರೀಕ್ಷೆಯಲ್ಲಿ ದೃಢ: ಇನ್ನು ಕೊಲೆ ಮಾಡಿದ ಬಳಿಕ ಆರೋಪಿ ಶ್ರದ್ಧಾ ದೇಹ ಕತ್ತರಿಲು ಗರಗಸ ಬಳಕೆ ಮಾಡಿದ್ದ. ಮೆಹ್ರೋಲಿ ಅರಣ್ಯ ಪ್ರದೇಶದಲ್ಲಿ ಬಿಸಾಡಿದ್ದ ಮೂಳೆಗಳನ್ನು ಶ್ರದ್ಧಾ ತಂದೆಯ ಮಾದರಿಗಳೊಂದಿಗೆ ಡಿಎನ್​ಎ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ, ಇದು ಶ್ರದ್ಧಾ ದೇಹದ ಮೂಳೆಗಳು ಎಂಬುದು ದೃಢಪಟ್ಟಿತು.

ಇದನ್ನೂ ಓದಿ: ತ್ನಿ ತವರಿಗೆ ಹೋದಳೆಂದು 4 ವರ್ಷದ ಮಗಳನ್ನು ಕೊಂದು ನದಿಗೆ ಎಸೆದ ಪಾಪಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.