ನವದೆಹಲಿ : ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಒದಗಿಸಿರುವ ಭದ್ರತೆಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ದೆಹಲಿ ಪೊಲೀಸ್ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಗುರುವಾರ ಮಾಹಿತಿ ನೀಡಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರಿಗೆ ಒದಗಿಸಿದ್ದ ಭದ್ರತಾ ಸಿಬ್ಬಂದಿಯಲ್ಲಿ ಯಾವುದೇ ಇಳಿಕೆ ಮಾಡಿಲ್ಲ. ಅವರಿಗೆ ಒದಗಿಸಿದ್ದ ಭದ್ರತೆಯನ್ನು ಕಡಿಮೆ ಮಾಡಿಲ್ಲ ಎಂದು ದೆಹಲಿ ಪೊಲೀಸ್ನ ಸಾರ್ವಜನಿಕ ಸಂಪರ್ಕಾಧಿಕಾರಿ ಹೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್ಗೆ ಝಡ್ ಪ್ಲಸ್ ಭದ್ರತೆ ಒದಗಿಸಲಾಗಿದೆ. ಇದರಲ್ಲಿ ಪೈಲೆಟ್ ವಾಹನ, ಎಸ್ಕಾರ್ಟ್, ರಕ್ಷಣಾ ಸಿಬ್ಬಂದಿ, ಮನೆ ಭದ್ರತಾ ಸಿಬ್ಬಂದಿ ಸೇರಿ 16 ಸಮವಸ್ತ್ರಧಾರಿಗಳನ್ನು ಭದ್ರತೆಗೆ ಒದಗಿಸಲಾಗಿದೆ.
ಇದನ್ನೂ ಓದಿ: ಮೆಟ್ರೋ ಮ್ಯಾನ್ ಇ.ಶ್ರೀಧರನ್ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ
ಇದಕ್ಕೂ ಮೊದಲು ಕೆಲ ಮಾಧ್ಯಮಗಳು ದೆಹಲಿ ಸಿಎಂ ಗುಜರಾತ್ಗೆ ಭೇಟಿ ನೀಡುತ್ತಿದ್ದು, ಅವರ ಭದ್ರತಾ ಸಿಬ್ಬಂದಿ ಕಡಿತಗೊಳಿಸಲಾಗಿದೆ ಎಂದು ಹೇಳಿದ್ದವು. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್ನ ಸಾರ್ವಜನಿಕ ಸಂಪರ್ಕಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಗುಜರಾತ್ನ ಸ್ಥಳೀಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಉನ್ನತ ಸಾಧನೆ ಮಾಡಿದೆ. ಗುಜರಾತ್ ಜನರಿಗೆ ಅದರಲ್ಲೂ ಸೂರತ್ ಜನರಿಗೆ ಧನ್ಯವಾದ. 125 ವರ್ಷಗಳ ಹಳೆಯ ಕಾಂಗ್ರೆಸ್ ಹೊಸ ಪಕ್ಷದಿಂದ ಪರಾಭವಗೊಂಡಿದೆ. ನಮ್ಮ ಪ್ರತಿ ಕಾರ್ಯಕರ್ತನೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾನೆ ಎಂದು ದೆಹಲಿ ಸಿಎಂ ಹೇಳಿದ್ದಾರೆ.