ನವದೆಹಲಿ : ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಎರಡು ಫೋಟೋಗಳು ವೈರಲ್ ಆಗಿದ್ದವು. ಆ ಫೋಟೋಗಳು ಕೇಂದ್ರ ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿವೆ. ಅಲ್ಲದೇ, ದೆಹಲಿ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. ಈ ಫೋಟೋಗಳನ್ನು ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ಥಾನಾ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ ಈ ಪ್ರಕರಣ ಪ್ರಧಾನಿ ಕಚೇರಿಯಲ್ಲಿ ಕೆಲಸ ಮಾಡುವ ವ್ಯಕ್ತಿಯೋರ್ವನಿಗೆ ಸಂಬಂಧಿಸಿದ್ದು ಎನ್ನಲಾಗಿದೆ.
ಕೆಲವು ದಿನಗಳ ಹಿಂದೆ ಕುನಾಲ್ ಮರ್ಚೆಂಟ್ ಎಂಬಾತನಿಗೆ ಎರಡು ಇಮೇಲ್ಗಳು ಬಂದಿದ್ದವು. ಅದು ಪ್ರಧಾನಿ ಕಚೇರಿಯಿಂದ ಬಂದಿದ್ದು, 'ಪ್ರಧಾನಿ ಮೋದಿಯವರು ನಿಮ್ಮನ್ನು ಗುರುತಿಸಿದ್ದು, ಪ್ರಧಾನಿಗಳಿಗಾಗಿಯೇ ವಿಶೇಷವಾಗಿ ಟೇಬಲ್ ಅನ್ನು ನಿರ್ಮಾಣ ಮಾಡಬೇಕಾಗಿದೆ. ಅದನ್ನು ಪ್ರಧಾನಿ ಕಚೇರಿಯಲ್ಲಿ ನರೇಂದ್ರ ಮೋದಿಯವರು ಬಳಸಲಿದ್ದಾರೆ' ಎಂದು ಇಮೇಲ್ನಲ್ಲಿ ಬರೆಯಲಾಗಿತ್ತು. ಇದರ ಜೊತೆಗೆ ಪ್ರಧಾನಿಯವರ ಖಾಸಗಿ ಕಾರ್ಯದರ್ಶಿ ವಿವೇಕ್ ಕುಮಾರ್ ಎಂದು ಉಲ್ಲೇಖಿಸಲಾಗಿತ್ತು.
-
We have received a complaint regarding forgery, impersonation and identity fraud of an office bearer at the Prime Minister’s Office. Matter is under investigation.@PMOIndia @HMOIndia pic.twitter.com/1r1mhPCvoX
— CP Delhi #DilKiPolice (@CPDelhi) April 15, 2022 " class="align-text-top noRightClick twitterSection" data="
">We have received a complaint regarding forgery, impersonation and identity fraud of an office bearer at the Prime Minister’s Office. Matter is under investigation.@PMOIndia @HMOIndia pic.twitter.com/1r1mhPCvoX
— CP Delhi #DilKiPolice (@CPDelhi) April 15, 2022We have received a complaint regarding forgery, impersonation and identity fraud of an office bearer at the Prime Minister’s Office. Matter is under investigation.@PMOIndia @HMOIndia pic.twitter.com/1r1mhPCvoX
— CP Delhi #DilKiPolice (@CPDelhi) April 15, 2022
ಈ 'ಆಫರ್' ಅನ್ನು ನಯವಾಗಿ ತಿರಸ್ಕರಿಸಿದ ಕುನಾಲ್ ಮರ್ಚೆಂಟ್, ರಾಜಕೀಯ ಮತ್ತು ಇತರ ಭಿನ್ನತೆಗಳ ಕಾರಣದಿಂದ ನಾನು ಈ ಆಫರ್ ಅನ್ನು ತಿರಸ್ಕರಿಸುತ್ತಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದ್ದರು. ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದು, ಮಾತ್ರವಲ್ಲದೇ, ಆ ಸ್ಕ್ರೀನ್ ಶಾಟ್ಗಳನ್ನು ತಮ್ಮ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದರು. ಈ ಸ್ಕ್ರೀನ್ಗಳು ವೈರಲ್ಲಾಗಿವೆ.
ಈಗ ಈ ಕುರಿತು ಪ್ರತಿಕ್ರಿಯೆ ನೀಡಿರುವ ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಆಸ್ಥಾನಾ, ಪ್ರಧಾನಮಂತ್ರಿ ಕಚೇರಿಯಲ್ಲಿನ ಪದಾಧಿಕಾರಿಯೊಬ್ಬರಿಂದ ವಂಚನೆ ಆರೋಪದಲ್ಲಿ ನಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದು, ಟ್ವಿಟರ್ನಲ್ಲಿ ಸ್ಕ್ರೀನ್ ಶಾಟ್ಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: 108 ಅಡಿಯ ಹನುಮಾನ್ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ