ETV Bharat / bharat

ಕೋವಿಡ್ ಮಾರ್ಗಸೂಚಿ ಉಲ್ಲಂಘನೆ: ದೆಹಲಿಯಲ್ಲಿ ಒಂದೇ ದಿನ ₹1 ಕೋಟಿ ದಂಡ ಸಂಗ್ರಹ

ಕೋವಿಡ್​ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಕ್ಕಾಗಿ ದೆಹಲಿಯಲ್ಲಿ ಒಂದೇ ದಿನ ದಾಖಲೆಯ 1 ಕೋಟಿ ರೂ. ದಂಡ ಸಂಗ್ರಹವಾಗಿದೆ.

COVID protocol in Delhi
COVID protocol in Delhi
author img

By

Published : Jan 3, 2022, 3:19 PM IST

ನವದೆಹಲಿ: ದೇಶಾದ್ಯಂತ ರೂಪಾಂತರಿ ಒಮಿಕ್ರಾನ್​ ಜೊತೆಗೆ ಕೊರೊನಾ ವೈರಸ್​ನ ಮೂರನೇ ಅಲೆ ಜೋರಾಗುತ್ತಿದೆ. ಅನೇಕ ರಾಜ್ಯಗಳು ಮುನ್ನೆಚ್ಚರಿಕೆ ಕ್ರಮವಾಗಿ ನೈಟ್​ ಕರ್ಫ್ಯೂ ಸೇರಿದಂತೆ ವಿವಿಧ ರೀತಿಯ ನಿರ್ಬಂಧಗಳನ್ನು ಜಾರಿಗೆ ತರುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಮಾರ್ಗಸೂಚಿ ಜಾರಿಯಲ್ಲಿದ್ದು, ಇವುಗಳನ್ನು ಉಲ್ಲಂಘಿಸುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗ್ತಿದೆ.

ಜನವರಿ 2ರಂದು ದೆಹಲಿಯಲ್ಲಿ ಕೋವಿಡ್​ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಕ್ಕಾಗಿ 5,066 ಪ್ರಕರಣಗಳಿಂದ 1,00,15,300 ರೂ. ದಂಡ ಸಂಗ್ರಹ ಮಾಡಲಾಗಿದೆ. ಜೊತೆಗೆ, 45 ಕೇಸ್​ಗಳಲ್ಲಿ ಎಫ್​ಐಆರ್​ ದಾಖಲಿಸಲಾಗಿದೆ ಎಂದು ದೆಹಲಿ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ಉದ್ಯಮಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಪುತ್ರಿ

ದೆಹಲಿಯಲ್ಲಿ ಕಳೆದ ಕೆಲವು ವಾರಗಳಿಂದ ಒಮಿಕ್ರಾನ್, ಕೋವಿಡ್​​ ಭೀತಿ ಹೆಚ್ಚಾಗಿದ್ದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗ್ತಿದೆ. ಈಗಾಗಲೇ ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ 350ರ ಗಡಿ ದಾಟಿದೆ. ನಿನ್ನೆ ಒಂದೇ ದಿನ 3 ಸಾವಿರಕ್ಕೂ ಅಧಿಕ ಕೋವಿಡ್​ ಕೇಸ್​ ದಾಖಲಾಗಿದ್ದು, 8 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.