ETV Bharat / bharat

ಶಾಯರಿ ಲೋಕದ ತಾರೆ ಮಿರ್ಜಾ ಗಾಲಿಬ್ ಸಮಾಧಿ ಶಿಥಿಲ

author img

By

Published : Feb 16, 2022, 7:41 AM IST

ಮಿರ್ಜಾ ಗಾಲಿಬ್ ಅವರ 153ನೇ ಪುಣ್ಯಸ್ಮರಣೆ ವೇಳೆಯಲ್ಲಿ ದೆಹಲಿಯ ನಿಜಾಮುದ್ದೀನ್​ನಲ್ಲಿರುವ ಗಾಲಿಬ್​ರ ಸಮಾಧಿಯ ದುಸ್ಥಿತಿ ಬೆಳಕಿಗೆ ಬಂದಿದೆ.

Delhi : Mirza Ghalib's mausoleum is dilapidated
ಶಾಯರಿ ಲೋಕದ ತಾರೆ ಮಿರ್ಜಾ ಗಾಲಿಬ್ ಸಮಾಧಿ ಶಿಥಿಲ

'ವಜೀರ್, ನಿನ್ನ ಪ್ರಾರ್ಥನೆಗೆ ತಾಕತ್ತಿದ್ದರೆ ಮಸೀದಿಯನ್ನು ಅಲ್ಲಾಡಿಸಿ ತೋರಿಸು, ಇಲ್ಲದಿದ್ದರೆ ಬಾ ಎರಡು ಗುಟುಕು ಕುಡಿದು ಮಸೀದಿ ಅಲ್ಲಾಡುವುದನ್ನು ನೋಡು..' ಈ ವಾಕ್ಯವನ್ನು ಎಲ್ಲಾದರೂ ಕೇಳಿದ್ದೀರಾ? ಈಗಲೂ ಕೂಡಾ ಈ ವಾಕ್ಯವನ್ನು ಬರೆದವರ ಶಾಯರಿಗಳು ಜನಮಾನಸದಲ್ಲಿ ಹರಿದಾಡುತ್ತಿವೆ. ಜೀವನ ಪಾಠ, ಸ್ನೇಹ, ಪ್ರೀತಿ, ತತ್ವ ಎಲ್ಲದರ ಬಗ್ಗೆಯೂ ಸರಳವಾಗಿ ತನ್ನ ಶಾಯರಿಗಳಲ್ಲಿ ಅಥವಾ ಗಜಲ್​ಗಳಲ್ಲಿ ತಿಳಿಸಿಕೊಡುತ್ತಿದ್ದವರು ಮಿರ್ಜಾ ಗಾಲಿಬ್.

ಗಾಲಿಬ್​ರನ್ನು ಅವರ ಶಾಯರಿಗಳಿಗಾಗಿ ಈಗಲೂ ನೆನಪಿಸಿಕೊಳ್ಳುವ, ಆರಾಧಿಸುವ ಅಭಿಮಾನಿಗಳಿದ್ದಾರೆ. ಸ್ನೇಹ, ಪ್ರೀತಿಯನ್ನು ಹಂಚುವ ಸಾಧನಗಳಾಗಿ ಗಾಲಿಬ್​​ರ ಶಾಯರಿಗಳು ಬಳಕೆಯಾಗುತ್ತಿವೆ. ಆದರೆ ಇಂಥ ಮಹಾನ್ ವ್ಯಕ್ತಿಯ ಭವ್ಯವಾದ ಸಮಾಧಿ ಶಿಥಿಲಾವಸ್ಥೆಯಲ್ಲಿದೆ.

ಈಟಿವಿ ಭಾರತ ನವದೆಹಲಿ ಪ್ರತಿನಿಧಿಯಿಂದ ಪ್ರತ್ಯಕ್ಷ ವರದಿ

ದೆಹಲಿಯ ನಿಜಾಮುದ್ದೀನ್‌ನಲ್ಲಿರುವ ಮಿರ್ಜಾ ಗಾಲಿಬ್ ಅವರ ಸಮಾಧಿಯನ್ನು ಈಟಿವಿ ಭಾರತ್ ಪ್ರತಿನಿಧಿ ಪರಿಶೀಲಿಸಿದ್ದು, ಅದು ಶಿಥಿಲಾವಸ್ಥೆಯಲ್ಲಿದೆ ಎಂದು ತಿಳಿದುಬಂದಿದೆ. ಪುರಾತತ್ವ ಇಲಾಖೆಯವರು ಸಮಾಧಿಯನ್ನು ದುರಸ್ತಿ ಮಾಡಲು ಸಾಧ್ಯವಾಗಿಲ್ಲ.

ಗಾಲಿಬ್ ಅಕಾಡೆಮಿಯ ಕಾರ್ಯದರ್ಶಿ ಡಾ.ಅಕೀಲ್ ಅಹಮದ್ ಪ್ರತಿಕ್ರಿಯಿಸಿ, 'ಮಿರ್ಜಾ ಗಾಲಿಬ್ ಅವರ ಸಮಾಧಿ ಪುರಾತತ್ತ್ವ ಇಲಾಖೆ ನಿರ್ವಹಣೆಯಲ್ಲಿದೆ. ಅಲ್ಲಿನ ಶಿಥಿಲಗೊಂಡ ಸಮಾಧಿ ಸ್ಥಳವನ್ನು ಸರಿಪಡಿಸಲು ಯಾವುದೇ ಕಾಮಗಾರಿ ನಡೆದಿಲ್ಲ. ಮುಂದಿನ ವರ್ಷ ಇಲಾಖೆ ದುರಸ್ತಿ ಮಾಡಬಹುದು' ಎಂದರು.

ಮೊಘಲರ ಕಾಲದ ಉರ್ದು ಕವಿಗಳಲ್ಲಿ ಅತ್ಯಂತ ಶ್ರೇಷ್ಠರಾಗಿದ್ದ ಮಿರ್ಜಾ ಗಾಲಿಬ್ ಅವರ 153ನೇ ಪುಣ್ಯಸ್ಮರಣೆ ಮಂಗಳವಾರ (ಫೆಬ್ರವರಿ 15) ಆಚರಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಗಾಲಿಬ್​ರ ಸಮಾಧಿಯ ದುಸ್ಥಿತಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬಂಗಾಳಿ ಗಾನ ಮಾಂತ್ರಿಕ ಸಂಧ್ಯಾ ಮುಖೋಪಾಧ್ಯಾಯ ಇನ್ನಿಲ್ಲ... ಸಿಎಂ ಸಂತಾಪ

ಈಟಿವಿ ಭಾರತ ಕಳಕಳಿ: 'ಮುಖದ ಮೇಲೆ ಧೂಳು ಕುಳಿತಿತ್ತು, ಜೀವನ ಪೂರ್ತಿ ಕನ್ನಡಿಯನ್ನು ಸ್ವಚ್ಛಗೊಳಿಸುತ್ತಲೇ ಇದ್ದೆ' ಎಂಬ ಮಾತಿನ ಮೂಲಕ ಜೀವನದ ಸತ್ಯಾಂಶಗಳನ್ನು ಮಾರ್ಮಿಕವಾಗಿ ಬಿಚ್ಚಿಡುವ ಪ್ರಯತ್ನ ಮಾಡಿದ ಗಾಲಿಬ್​ರ ಸಮಾಧಿಯನ್ನೂ 'ಸ್ವಚ್ಛ'ಗೊಳಿಸಬೇಕಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.