ನವದೆಹಲಿ: ಕೊರೊನಾ ಸೋಂಕು ಪ್ರಕರಣಗಳು ದೇಶಾದ್ಯಂತ ಹೆಚ್ಚುತ್ತಿರುವುದರಿಂದ, ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ರಾಷ್ಟ್ರ ರಾಜಧಾನಿಗೆ ಆಗಮಿಸುವ ಎಲ್ಲ ವ್ಯಕ್ತಿಗಳಿಗೆ ಸರ್ಕಾರಿ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ.
ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಕೊರೊನಾ ವೈರಸ್‌ನ ರೂಪಾಂತರದ ವರದಿಗಳಲ್ಲಿ ಹೆಚ್ಚಳ ಕಂಡುಬಂದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದು ಕಡಿಮೆ ಕಾಲಾವಧಿ ಮತ್ತು ಹೆಚ್ಚಿನ ಪ್ರಸರಣ ಪ್ರಮಾಣವನ್ನು ಹೊಂದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಲಸಿಕೆ ಖಾಲಿ, ಆಮ್ಲಜನಕ ಸಿಲಿಂಡರ್ ಒದಗಿಸಿ: ಸರ್ಕಾರಕ್ಕೆ ಫನಾ ಪತ್ರ
ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ವಿಮಾನಯಾನ ಸಂಸ್ಥೆಗಳು, ರೈಲ್ವೆ, ಬಸ್, ಕಾರು, ಟ್ರಕ್‌ಗಳು ಅಥವಾ ಇನ್ನಾವುದೇ ಸಾರಿಗೆ ವಿಧಾನದಿಂದ ಬರುವ ಎಲ್ಲಾ ಪ್ರಯಾಣಿಕರು ಸಂಬಂಧಪಟ್ಟ ಜಿಲ್ಲಾಧಿಕಾರಿಯಿಂದ ಗುರುತಿಸಲ್ಪಟ್ಟ ಸ್ಥಳದಲ್ಲಿ 14 ದಿನಗಳವರೆಗೆ ಕ್ವಾರಂಟೈನ್ಗೆ ಒಳಗಾಗಬೇಕಿದೆ.
ಲಸಿಕೆಯ ಎರಡೂ ಡೋಸ್ಗಳನ್ನು ಯಶಸ್ವಿಯಾಗಿ ಸ್ವೀಕರಿಸಿದ ಪ್ರಮಾಣ ಪತ್ರ ಅಥವಾ ಪ್ರಯಾಣ ಕೈಗೊಳ್ಳಲು 72 ಗಂಟೆಗಳ ಅವಧಿಯಲ್ಲಿ ಋಣಾತ್ಮಕ ಆರ್ಟಿ-ಪಿಸಿಆರ್ ವರದಿಯನ್ನು ಹೊಂದಿರುವ ಯಾವುದೇ ವ್ಯಕ್ತಿಗೆ 7 ದಿನಗಳವರೆಗೆ ಹೋಂ ಕ್ವಾರಂಟೈನ್‌ನಲ್ಲಿಡಲು ಅನುಮತಿಸಲಾಗಿದೆ.
ಒಂದು ವೇಳೆ ನಿಯಮ ಮೀರಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 51 ರಿಂದ 60 ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಲಾಗಿದೆ.
ಇದನ್ನೂ ಓದಿ: ರೆಮ್ಡಿಸಿವಿರ್ ಇಂಜೆಕ್ಷನ್ ತರುತ್ತಿದ್ದ ವಿಮಾನ ಪತನ... ಮೂವರಿಗೆ ಗಾಯ
ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಒತ್ತಡದಲ್ಲಿ ದೆಹಲಿಯ ಆರೋಗ್ಯ ಮೂಲಸೌಕರ್ಯಗಳು ಕುಸಿಯುತ್ತಿವೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ದೆಹಲಿಯಲ್ಲಿ ಪ್ರಸ್ತುತ 91,859 ಸಕ್ರಿಯ ಪ್ರಕರಣಗಳಿವೆ. ಈವರೆಗೆ 11,43,980 ಜನ ಗುಣಮುಖರಾಗಿದ್ದು ಮತ್ತು 18,063 ಸಾವುಗಳು ವರದಿಯಾಗಿವೆ.