ನವದೆಹಲಿ: ಕೋವಿಡ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರ್ಕಾರಿ ಶಾಲಾ ಶಿಕ್ಷಕರಿಗೆ ವಿವಿಧ ಕೆಲಸಗಳಿಗೆ ನಿಯೋಜನೆ ಮಾಡಲಾಗಿದೆ. ಆದರೆ ಹಲವು ಶಿಕ್ಷಕರು ಕೆಲಸಕ್ಕೆ ಹಾಜರಾಗದೇ ಇರುವ ಕಾರಣದಿಂದಾಗಿ ಅಲ್ಲಿನ ಸರ್ಕಾರ ನೋಟಿಸ್ ಜಾರಿ ಮಾಡಿದೆ.
ಶಾಲೆಗಳು ಮುಚ್ಚಿರುವ ಕಾರಣದಿಂದಾಗಿ ದೆಹಲಿ ಸರ್ಕಾರವು ಶಾಲಾ ಶಿಕ್ಷಕರನ್ನು ತಾತ್ಕಾಲಿಕ ಆಸ್ಪತ್ರೆಗಳು, ಲಸಿಕೆಗಳು ಮತ್ತು ಆಮ್ಲಜನಕದ ಮಾಹಿತಿ ಸಂಗ್ರಹಣೆ, ಶವಸಂಸ್ಕಾರದ ಮೈದಾನಗಳು ಮುಂತಾದ ಸ್ಥಳಗಳಲ್ಲಿ ನಿಯೋಜಿಸಿದೆ. ಆದರೆ ಕೋವಿಡ್ ಭಯದಿಂದ ಶಿಕ್ಷಕರು ಸರ್ಕಾರ ನಿಯೋಜಿಸಿರುವ ಕರ್ತವ್ಯಕ್ಕೆ ಹಾಜರಾಗಿಲ್ಲ ಎನ್ನಲಾಗ್ತಿದೆ.
ಇದನ್ನೂ ಓದಿ : ಆಮ್ಲಜನಕ ಸಿಲಿಂಡರ್ ಎಂದು ನಂಬಿಸಿ ಅಗ್ನಿಶಾಮಕ ಸಿಲಿಂಡರ್ ಮಾರುತ್ತಿದ್ದವರ ಬಂಧನ
ಏಪ್ರಿಲ್ 20ರಂದು ಸುಮಾರು 90 ಶಿಕ್ಷಕರನ್ನು ಆಗ್ನೇಯ ವಿಭಾಗದ ಎಸ್ಡಿಎಂ ಬಿ.ಎಲ್.ಮೀನಾ ಅವರು ತಮ್ಮ ಕಚೇರಿಯಲ್ಲಿ ಕೆಲಸ ಮಾಡಲು ಸೂಚಿಸಿದ್ದರು. ಎಲ್ಲಾ ಶಿಕ್ಷಕರು ಏಪ್ರಿಲ್ 22ರಂದು ಕೆಲಸಕ್ಕೆ ರಿಪೋರ್ಟ್ ಮಾಡಿಕೊಳ್ಳಬೇಕು. ಕಚೇರಿ ತನ್ನ ಬೇಡಿಕೆಗೆ ಅನುಗುಣವಾಗಿ ಕೆಲಸಕ್ಕೆ ನಿಯೋಜನೆ ಮಾಡಿಕೊಳ್ಳುತ್ತದೆ ಎಂದು ಆದೇಶ ಹೊರಡಿಸಲಾಗಿತ್ತು.
ಬಹುಪಾಲು ಶಿಕ್ಷಕರು ಮಾತ್ರ ಕೆಲಸಕ್ಕೆ ಹಾಜರಾಗಿದ್ದು, ಕೋವಿಡ್ ಪರೀಕ್ಷೆ ನಡೆಸಿ ವಿವಿಧ ಸ್ಥಳಗಳಲ್ಲಿ ಕೆಲಸ ನೀಡಲಾಗಿದೆ. ಉಳಿದ ಕೆಲವು ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗದ ಕಾರಣದ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.