ETV Bharat / bharat

ಮದರಸಾ ಶಿಕ್ಷಣ ಕುರಿತು ಸುಳ್ಳು ವರದಿ ಖಂಡಿಸಿದ ರಾಷ್ಟ್ರೀಯ ಮುಕ್ತ ಶಿಕ್ಷಣ ಸಂಸ್ಥೆ - ಮದರಸಾ ಶಿಕ್ಷಣ

ಮಾರ್ಚ್ 3 ರಂದು ಮಾಧ್ಯಮವೊಂದು ಪ್ರಕಟಿಸಿದ ಸುದ್ದಿ ವರದಿಯ ಪ್ರಕಾರ, ಮದರಸಾಗಳಲ್ಲಿ ಭಗವದ್ಗೀತೆ ಮತ್ತು ರಾಮಾಯಣ ತರಗತಿಗಳನ್ನು ಪರಿಚಯಿಸಲು ರಾಷ್ಟ್ರೀಯ ಮುಕ್ತ ಶಿಕ್ಷಣ ಸಂಸ್ಥೆ ಮುಂದಾಗಿದೆ ಎಂಬ ವರದಿಯನ್ನು ಎನ್ಐಒಎಸ್ ಅಧಿಕಾರಿಗಳು ನಿರಾಕರಿಸಿದ್ದಾರೆ.

Madrassa education
ಮದರಸಾ
author img

By

Published : Mar 4, 2021, 4:47 PM IST

ನವದೆಹಲಿ: ಎನ್ಐಒಎಸ್​ ಸಂಸ್ಥೆಯು ಮದರಸಾಗಳಲ್ಲಿ ಭಗವದ್ಗೀತೆ ಮತ್ತು ರಾಮಾಯಣ ಬೋಧನೆಯನ್ನು ಆರಂಭಿಸಲಿದೆ ಎಂಬ ಮಾಧ್ಯಮವೊಂದರ ವರದಿಯನ್ನು ರಾಷ್ಟ್ರೀಯ ಮುಕ್ತ ಶಿಕ್ಷಣ ಸಂಸ್ಥೆ ಖಂಡಿಸಿದೆ.

ಔಪಚಾರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಭಿನ್ನವಾಗಿ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ವಿಷಯಗಳನ್ನು ಆಯ್ಕೆ ಮಾಡಲು ಮುಕ್ತರಾಗಿದ್ದಾರೆ ಎಂಬ ನಿಬಂಧನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳನ್ನು ನೀಡಲಾಗುತ್ತದೆ ಎಂದು ಎನ್ಐಒಎಸ್ ಸ್ಪಷ್ಟಪಡಿಸಿದೆ.

ಮದರಸಾ

ಮಾರ್ಚ್ 3 ರಂದು ಮಾಧ್ಯಮವೊಂದು ಪ್ರಕಟಿಸಿದ ಸುದ್ದಿಯ ಪ್ರಕಾರ, ಮದರಸಾಗಳಲ್ಲಿ ಭಗವದ್ಗೀತೆ ಮತ್ತು ರಾಮಾಯಣ ತರಗತಿಗಳನ್ನು ಪರಿಚಯಿಸಲು ರಾಷ್ಟ್ರೀಯ ಮುಕ್ತ ಶಿಕ್ಷಣ ಸಂಸ್ಥೆ ಮುಂದಾಗಿದೆ ಎನ್ನಲಾಗಿತ್ತು. ಈ ವರದಿಯನ್ನು ಎನ್ಐಒಎಸ್ ಅಧಿಕಾರಿಗಳು ನಿರಾಕರಿಸಿದ್ದು, ವಿದ್ಯಾರ್ಥಿಗಳು ತಮ್ಮ ಇಚ್ಛೆಯ ವಿಷಯಗಳನ್ನು ಆಯ್ಕೆ ಮಾಡಲು ಮುಕ್ತರಾಗಿದ್ದಾರೆ ಎಂದು ಹೇಳಿದ್ದಾರೆ.

ಔಪಚಾರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಭಿನ್ನವಾಗಿ ಸ್ಥಿರ ವಿಷಯಗಳ ಸಂಯೋಜನೆಯ ಯಾವುದೇ ಗಡಿರೇಖೆಗಳಿಲ್ಲದೆ ಈ ನಿಬಂಧನೆಯಡಿಯಲ್ಲಿ ವಿವಿಧ ವಿಷಯಗಳನ್ನು ಕಲಿಯುವವರಿಗೆ ನೀಡಲಾಗುತ್ತದೆ. ಎನ್ಐಒಎಸ್​ ಒದಗಿಸಿದ ವಿಷಯಗಳಲ್ಲಿ ತಮಗೆ ಬೇಕಾದ ವಿಷಯವನ್ನು ಆರಿಸಿಕೊಳ್ಳುವುದು ಕಲಿಯುವವರ ವಿವೇಚನೆಯಾಗಿದೆ ಎಂದು ಎನ್ಐಒಎಸ್ ತಿಳಿಸಿದೆ.

ಸುಮಾರು 100 ಮದರಸಾಗಳು ಎನ್ಐಒಎಸ್​ದೊಂದಿಗೆ ಮಾನ್ಯತೆ ಪಡೆದಿವೆ ಮತ್ತು 50,000 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇದಲ್ಲದೆ, ಇನ್ನೂ 500 ಮದರಸಾಗಳನ್ನು ಎನ್ಐಒಎಸ್​ದೊಂದಿಗೆ ಮಾನ್ಯತೆ ನೀಡಲು ಯೋಜಿಸಲಾಗಿದೆ, ಇದು ಕೇವಲ ಮದರಸಾಗಳ ಬೇಡಿಕೆಯನ್ನು ಆಧರಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.