ETV Bharat / bharat

ಏಮ್ಸ್​ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ಪ್ರಕರಣ : ಶಾಸಕ ಸೋಮನಾಥ್ ಭಾರತಿಗೆ 2 ವರ್ಷ ಜೈಲು - ಏಮ್ಸ್​ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ಪ್ರಕರಣದಲ್ಲಿ ಶಾಸಕ ಸೋಮನಾಥ್ ಭಾರತಿಗೆ ಶಿಕ್ಷೆ

1984ರ ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯ್ದೆಯ ಸೆಕ್ಷನ್ 3 ಸೇರಿ ಹಲವು ಕಾಯ್ದೆಗಳಡಿಯಲ್ಲಿ ಸಹ ಸೋಮ ಭಾರತಿ ಅಪರಾಧಿ ಎಂದು ಸಾಬೀತಾಗಿದೆ. ಏಮ್ಸ್​ನ ಭದ್ರತಾ ಸಿಬ್ಬಂದಿ ಸಾರ್ವಜನಿಕ ಸೇವಕರ ನಿಯೋಜಿತ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದರು. ಸಾರ್ವಜನಿಕ ಸೇವಕನ ವ್ಯಾಖ್ಯಾನಕ್ಕೆ ಒಳಪಡುತ್ತಾರೆ. ಆದ್ದರಿಂದ, ಏಮ್ಸ್ ಭದ್ರತಾ ಸಿಬ್ಬಂದಿ ಸಾರ್ವಜನಿಕ ಸೇವಕರಲ್ಲ ಎಂಬ ವಾದ ಒಪ್ಪಲು ಸಾಧ್ಯವಿಲ್ಲ..

ಶಾಸಕ ಸೋಮನಾಥ್ ಭಾರತಿಗೆ 2 ವರ್ಷ ಜೈಲು ಶಿಕ್ಷೆ
ಶಾಸಕ ಸೋಮನಾಥ್ ಭಾರತಿಗೆ 2 ವರ್ಷ ಜೈಲು ಶಿಕ್ಷೆ
author img

By

Published : Jan 23, 2021, 5:03 PM IST

ನವದೆಹಲಿ: ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ 2016 ರಲ್ಲಿ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಸೋಮನಾಥ್ ಭಾರತಿಗೆ ದೆಹಲಿ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದೇ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇತರ ನಾಲ್ವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಪಾಂಡೆ, ಶುಕ್ರವಾರ ಈ ಪ್ರಕರಣದಲ್ಲಿ ತೀರ್ಪು ನೀಡಿದ್ದಾರೆ. "ಸೆಕ್ಷನ್ 323 ರ ಅಡಿ ಶಿಕ್ಷಾರ್ಹ ಅಪರಾಧದ ಆರೋಪದ ಬಗ್ಗೆ ಆರೋಪಿ ಸೋಮನಾಥ್ ಭಾರತಿ ವಿರುದ್ಧದ ಎಲ್ಲಾ ಸಮಂಜಸವಾದ ಅನುಮಾನಗಳನ್ನು ಮೀರಿ ಪ್ರಾಸಿಕ್ಯೂಷನ್ ತನ್ನ ಪ್ರಕರಣವನ್ನು ಸರಿಯಾಗಿ ಸಾಬೀತುಪಡಿಸಿದೆ ಎಂದು ನ್ಯಾಯಾಲಯವು ಪರಿಗಣಿಸಿದೆ.

ಶಿಕ್ಷಾರ್ಹ ಅಪರಾಧದ ಆರೋಪ ಮತ್ತು ಆತನನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗುತ್ತದೆ." ಎಂದು ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಪಾಂಡೆ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಆರೋಪಿ ಸೋಮನಾಥ್ ಭಾರತಿ ವಿರುದ್ಧ ಆರೋಪಕ್ಕೆ ಸಂಬಂಧಪಟ್ಟಂತೆ ಐಪಿಸಿ ಸೆಕ್ಷನ್ 149ರಡಿ ಅಪರಾಧಿ ಎಂದು ಸಾಬೀತಾಗಿದೆ.

1984ರ ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯ್ದೆಯ ಸೆಕ್ಷನ್ 3ರಡಿ ಸೇರಿದಂತೆ ಹಲವು ಕಾಯ್ದೆಗಳಡಿಯಲ್ಲಿ ಸಹ ಸೋಮ ಭಾರತಿ ಅಪರಾಧಿ ಎಂದು ಸಾಬೀತಾಗಿದೆ. ಏಮ್ಸ್​ನ ಭದ್ರತಾ ಸಿಬ್ಬಂದಿ ಸಾರ್ವಜನಿಕ ಸೇವಕರ ನಿಯೋಜಿತ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದರು. ಸಾರ್ವಜನಿಕ ಸೇವಕನ ವ್ಯಾಖ್ಯಾನಕ್ಕೆ ಒಳಪಡುತ್ತಾರೆ. ಆದ್ದರಿಂದ, ಏಮ್ಸ್ ಭದ್ರತಾ ಸಿಬ್ಬಂದಿ ಸಾರ್ವಜನಿಕ ಸೇವಕರಲ್ಲ ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ:ರೈತರ ಪ್ರತಿಭಟನೆಯಲ್ಲಿ ಹಿಂಸೆ ಸಂಚು: ಹೇಳಿಕೆ ಬದಲಾಯಿಸುತ್ತಿರುವ ಶಂಕಿತ ಆರೋಪಿ!

ಇದೇ ಪ್ರಕರಣದ ಇತರ ಆರೋಪಿಗಳಾದ ಜಗತ್ ಸೈನಿ, ದಲೀಪ್ ಜ್ಹಾ, ಸಂದೀಪ್ ಅಲಿಯಾಸ್ ಸೋನು ಮತ್ತು ರಾಕೇಶ್ ಪಾಂಡೆ ಅವರನ್ನು ಆರೋಪ ಮುಕ್ತಗೊಳಿಸಿದೆ. ಸೆಪ್ಟೆಂಬರ್ 9, 2016ರಲ್ಲಿ ಏಮ್ಸ್‌ನ ಮುಖ್ಯ ಭದ್ರತಾ ಅಧಿಕಾರಿ ಆರ್ ಎಸ್ ರಾವತ್ ದೆಹಲಿ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿ ಶಾಸಕ ಭಾರತಿ ಮತ್ತು ಅವರ 300 ಬೆಂಬಲಿಗರು ಏಮ್ಸ್ ಭದ್ರತಾ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದರು. ಅಂದು ಸರ್ಕಾರದ ಆಸ್ತಿಯನ್ನು ಹಾನಿ ಮಾಡಲು ಪ್ರಚೋದನೆ ನೀಡಿದ್ದರು ಎಂದು ದೂರು ನೀಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.