ನವದೆಹಲಿ: ರೂಪಾಂತರಿ ಕೊರೊನಾದ ಗಂಭೀರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತ ಮತ್ತು ಯುಕೆ ನಡುವಿನ ವಿಮಾನ ಹಾರಾಟ ನಿಷೇಧವನ್ನು ಜನವರಿ 31 ರವರೆಗೆ ವಿಸ್ತರಿಸಬೇಕೆಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಭಾರತದಿಂದ ಯುಕೆಗೆ ವಿಮಾನಗಳು ಜನವರಿ 6 ರಿಂದ ಪುನರಾರಂಭಗೊಳ್ಳಲಿವೆ. ಆ ದೇಶದಿಂದ ಇಲ್ಲಿಗೆ ಸೇವೆಗಳು ಜನವರಿ 8 ರಿಂದ ಪುನರಾರಂಭಗೊಳ್ಳಲಿವೆ. ನ. 23 ರ ವರೆಗೆ ಪ್ರತಿ ವಾರ 30 ವಿಮಾನಗಳು ಸೇವೆ ಸಲ್ಲಿಸಲಿವೆ. 23 ರ ನಂತರ ಮುಂದಿನ ಬದಲಾವಣೆ ಮಾಡಲಾಗುವುದು ಎಂದು ಈ ಮೊದಲು ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು.
ಕೊರೊನಾ ರೂಪಾಂತರಗೊಂಡ ನಂತರ ಭಾರತವು ಡಿಸೆಂಬರ್ 23 ರಿಂದ ಜನವರಿ 7 ರವರೆಗೆ ಉಭಯ ದೇಶಗಳನ್ನು ಸಂಪರ್ಕಿಸುವ ಎಲ್ಲಾ ಪ್ರಯಾಣಿಕ ವಿಮಾನಗಳನ್ನು ಸ್ಥಗಿತಗೊಳಿಸಿತ್ತು.