ETV Bharat / bharat

ದೆಹಲಿಯಲ್ಲಿ ಲಾಕ್​ಡೌನ್​ ಸುಳಿವು ನೀಡಿದ ಕೇಜ್ರಿವಾಲ್‌: ಭಾರತದಲ್ಲಿ ಹೀಗಿದೆ ಕೋವಿಡ್ ಸ್ಥಿತಿಗತಿ..

author img

By

Published : Apr 11, 2021, 1:24 PM IST

ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ಸಿಎಂ ಕೇಜ್ರಿವಾಲ್‌ ಪರೋಕ್ಷವಾಗಿ ಲಾಕ್​ಡೌನ್​ ಜಾರಿಯ ಸುಳಿವು ನೀಡಿದ್ದಾರೆ.

Delhi CM Kejriwal press meet
ಭಾರತದಲ್ಲಿ ಹೀಗಿದೆ ಕೋವಿಡ್ ಸ್ಥಿತಿಗತಿ

ನವದೆಹಲಿ: ನಾನು ಲಾಕ್‌ಡೌನ್ ಪರವಾಗಿಲ್ಲ. ಆದರೆ ಹಾಸಿಗೆಗಳ ಕೊರತೆ ಮತ್ತು ಆಸ್ಪತ್ರೆ ನಿರ್ವಹಣೆಯಲ್ಲಿ ವೈಫಲ್ಯವಾದರೆ, ಆಗ ನಮಗೆ ಬೇರೆ ಆಯ್ಕೆಗಳಿರುವುದಿಲ್ಲ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

'ಲಸಿಕೆಗೆ ವಯಸ್ಸಿನ ನಿರ್ಬಂಧ ತೆಗೆದುಹಾಕಿ'

ಕೋವಿಡ್​-19 ಲಸಿಕೆ ತೆಗೆದುಕೊಳ್ಳುವ ವಯಸ್ಸಿನ ನಿರ್ಬಂಧಗಳನ್ನು ತೆಗೆದುಹಾಕುವ ಬಗ್ಗೆ ಕೇಂದ್ರವನ್ನು ಹಲವು ಬಾರಿ ವಿನಂತಿಸಿದ್ದೇನೆ. ಜನರಿಗೆ ಲಸಿಕೆ ನೀಡಲು ದೆಹಲಿ ಸರ್ಕಾರ ಮನೆ ಮನೆಗೆ ತೆರಳಿ ಅಭಿಯಾನ ನಡೆಸಲು ಸಿದ್ಧವಾಗಿದೆ. ದೆಹಲಿಯಲ್ಲಿ 65% ರೋಗಿಗಳು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ಅವರು ತಿಳಿಸಿದ್ದಾರೆ.

ವ್ಯಾಕ್ಸಿನೇಷನ್ ಡ್ರೈವ್ ಹೊರತಾಗಿಯೂ ಕೋವಿಡ್ ಸೋಂಕು ವೇಗವಾಗಿ ಹರಡುತ್ತಿದೆ. ನಾವು ವೈರಸ್ ಹರಡುವುದಕ್ಕಿಂತ ವೇಗವಾಗಿ ಲಸಿಕೆ ಹಾಕಬೇಕು. ಆಸ್ಪತ್ರೆಗಳಿಗೆ ಹೋಗುವ ಮೊದಲು ಸರ್ಕಾರದ ಆ್ಯಪ್‌ನಲ್ಲಿ ಹಾಸಿಗೆಗಳ ಲಭ್ಯತೆಯನ್ನು ಪರಿಶೀಲಿಸಬೇಕು. ತುರ್ತು ಪರಿಸ್ಥಿತಿ ಇದ್ದಲ್ಲಿ ಮಾತ್ರ ಹಾಸಿಗೆಗಳನ್ನು ಪಡೆಯಿರಿ ಎಂದು ನಾಗರಿಕರಿಗೆ ಅವರು ಮನವಿ ಮಾಡಿದರು.

ಇದನ್ನೂ ಓದಿ: ಕೋವಿಡ್​ ಟೆಸ್ಟ್​, ಟ್ರ್ಯಾಕ್​, ವ್ಯಾಕ್ಸಿನೇಷನ್​ಗೆ ಆದ್ಯತೆ ನೀಡಿ: ಕಾಂಗ್ರೆಸ್​ ಆಡಳಿತದ ರಾಜ್ಯಗಳಿಗೆ ಸೋನಿಯಾ ಸೂಚನೆ

ದೆಹಲಿಯಲ್ಲಿ ಹೊಸ ಮಾರ್ಗಸೂಚಿ:

ದೆಹಲಿ ಸರ್ಕಾರವು ಮದುವೆ, ರೆಸ್ಟೋರೆಂಟ್ ಮತ್ತು ಚಿತ್ರಮಂದಿರಗಳಿಗೆ ಹೊಸ ಮಾರ್ಗಸೂಚಿಗಳನ್ನು ಘೋಷಿಸಿದೆ. ಮಹಾರಾಷ್ಟ್ರದಿಂದ ಬರುವ ಜನರಿಗೆ ನಿರ್ಬಂಧ ವಿಧಿಸಿದೆ. ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಮಹಾರಾಷ್ಟ್ರದಿಂದ ದೆಹಲಿಗೆ ವಿಮಾನದಲ್ಲಿ ಪ್ರಯಾಣಿಸುವ ಜನರು ಆಗಮನಕ್ಕೆ 72 ಗಂಟೆಗಳ ಮೊದಲು ಮಾಡಿದ ನೆಗೆಟಿವ್ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ನಡೆಸುವುದು ಕಡ್ಡಾಯವಾಗಿದೆ.

ಪ್ರಸ್ತುತ ಸಾಂಕ್ರಾಮಿಕದ ಸಮಯದಲ್ಲಿ ಮಾನವಶಕ್ತಿಯ ಹೆಚ್ಚಿದ ಬೇಡಿಕೆಯನ್ನು ಪೂರೈಸುವ ಸಲುವಾಗಿ, ಎಲ್ಲಾ ದೆಹಲಿ ಸರ್ಕಾರಿ ಆಸ್ಪತ್ರೆಗಳಿಗೆ ನಾಲ್ಕನೇ ಮತ್ತು ಐದನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು, ಇಂಟರ್ನಿಗಳು ಮತ್ತು ಬಿಡಿಎಸ್ ವೈದ್ಯರನ್ನು ತೊಡಗಿಸಿಕೊಳ್ಳಲು ನಿರ್ದೇಶಿಸಲಾಗಿದೆ. ನಗರದಲ್ಲಿ ಪ್ರಸ್ತುತ 28,773 ಸಕ್ರಿಯ ಕೋವಿಡ್-19 ಪ್ರಕರಣಗಳಿವೆ.

ಇದನ್ನೂ ಓದಿ: ಕಠಿಣ ಲಾಕ್​ಡೌನ್​ ಬಿಟ್ಟು ಬೇರೆ ಆಯ್ಕೆ ಉಳಿದಿಲ್ಲ: ಸರ್ವಪಕ್ಷ ಸಭೆಯಲ್ಲಿ ಸಿಎಂ ಉದ್ಧವ್​ ಠಾಕ್ರೆ ಅಭಿಮತ

ದೇಶಾದ್ಯಂತ ಕೋವಿಡ್‌ ಚಿತ್ರಣ:

'ಮಹಾರಾಷ್ಟ್ರದಲ್ಲಿ ಲಾಕ್​ಡೌನ್​ ಬಿಟ್ಟು ಬೇರೆ ಆಯ್ಕೆ ಉಳಿದಿಲ್ಲ'

ಕಳೆದ ಕೆಲ ವಾರಗಳಿಂದ ಮಹಾರಾಷ್ಟ್ರದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿದ್ದು, ಪ್ರತಿದಿನ 50 ಸಾವಿರಕ್ಕೂ ಅಧಿಕ ಕೋವಿಡ್​ ಸೋಂಕಿತ ಪ್ರಕರಣ ದಾಖಲಾಗುತ್ತಿವೆ. ಹೀಗಾಗಿ ಇಂದು ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಸರ್ವಪಕ್ಷ ಸಭೆ ಕರೆದಿದ್ದರು. ಸಭೆಯಲ್ಲಿ ಮಾತನಾಡಿರುವ ಉದ್ಧವ್​ ಠಾಕ್ರೆ ಮಹಾಮಾರಿ ನಿಯಂತ್ರಣಕ್ಕೆ ಕಠಿಣ ಲಾಕ್​ಡೌನ್​ ಒಂದೇ ಪರಿಹಾರ ಎಂದು ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಹಾರಾಷ್ಟ್ರದಲ್ಲಿ ಮಿತಿ ಮೀರುತ್ತಿದೆ ಪರಿಸ್ಥಿತಿ

ಮಹಾರಾಷ್ಟ್ರದಲ್ಲಿ ಇಂದು ಕೂಡ ದಾಖಲೆಯ 55,411 ಕೋವಿಡ್ ಪ್ರಕರಣ ದಾಖಲಾಗಿದ್ದು, 309 ಜನರು ಸಾವನ್ನಪ್ಪಿದ್ದಾರೆ. ಸದ್ಯ 5,36,682 ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ: ದೇಶದಲ್ಲಿ ದಾಖಲೆಯ 1.52 ಲಕ್ಷ ಹೊಸ ಕೋವಿಡ್​ ಕೇಸ್​ ಪತ್ತೆ.. ಮಹಾಮಾರಿಗೆ 839 ಮಂದಿ ಬಲಿ!

ಎಲ್ಲೆಡೆ ಎರಡನೇ ಅಲೆಯದ್ದೇ ಭೀತಿ

ಛತ್ತೀಸ್​ಗಢದಲ್ಲಿ ಕೋವಿಡ್-19 ಪರಿಸ್ಥಿತಿ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಆತಂಕ ವ್ಯಕ್ತಪಡಿಸಿದೆ. ದೇಶದಲ್ಲಿ ಕಳೆದ ಬಾರಿಗಿಂತಲೂ ವೇಗವಾಗಿ ಕೊರೊನಾ ಸೋಂಕು ಹರಡುತ್ತಿರುವುದನ್ನು ಮಂಗಳವಾರ ಖಚಿತಪಡಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಮಹಾರಾಷ್ಟ್ರ, ಪಂಜಾಬ್, ಛತ್ತೀಸ್ ಗಢ ಜಿಲ್ಲೆಯಲ್ಲಿ ಕೋವಿಡ್-19 ದೈನಂದಿನ ಪ್ರಕರಣಗಳು ಹಾಗೂ ಸಾವಿನ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಆತಂಕ ಮೂಡಿಸಿದೆ. ಆದ್ದರಿಂದ ಜನರು ಹೆಚ್ಚು ಕಾಲಜಿ ವಹಿಸಬೇಕೆಂದು ಆರೋಗ್ಉ ಸಚಿವಾಲಯ ತಿಳಿಸಿದೆ.

ಕೊರೊನಾ ಪಾಸಿಟಿವ್​ ಪ್ರಕರಣಗಳು ದೇಶದ ಪುಣೆ, ಮುಂಬೈ, ಥಾಣೆ, ನಾಗ್ಪುರ, ನಾಸಿಕ್, ಬೆಂಗಳೂರು ನಗರ, ಔರಂಗಬಾದ್, ಅಹ್ಮದ್ ನಗರ, ದೆಹಲಿ ಮತ್ತು ದುರ್ಗಾ ಸೇರಿದಂತೆ 10 ಜಿಲ್ಲೆಗಳಲ್ಲಿ ಹೆಚ್ಚಾಗುತ್ತಿವೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಇದನ್ನೂ ಓದಿ: ಈವರೆಗೂ 10 ಕೋಟಿಗೂ ಹೆಚ್ಚು ಲಸಿಕೆ ಪ್ರಮಾಣ ನೀಡಲಾಗಿದೆ : ಆರೋಗ್ಯ ಸಚಿವಾಲಯ

ದೇಶದಲ್ಲಿ ಲಸಿಕಾ ಉತ್ಸವಕ್ಕೆ ಚಾಲನೆ:

ದೇಶಾದ್ಯಂತ ಮತ್ತೆ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ಸೋಂಕು ಮಟ್ಟಹಾಕಲು ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಗಳ ಸಿಎಂಗಳ ಜತೆ ಸಭೆ ನಡೆಸಿದರು. ಈ ವೇಳೆ ಕೊರೊನಾ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದು, ಲಾಕ್​ಡೌನ್​ ಘೋಷಿಸುವ ಮಾತನ್ನು ತಳ್ಳಿ ಹಾಕಿದ್ದರು. ಇದೇ ವೇಳೆ ಮೈಕ್ರೋ ಕಂಟೈನ್​ಮೆಂಟ್​ ಏರಿಯಾ ಮತ್ತು ಕಠಿಣ ಕ್ರಮಗಳತ್ತ ನಿಗಾವಹಿಸಿ ಎಂದು ಸೂಚನೆ ನೀಡದ್ದರು. ಅಲ್ಲದೇ ಏಪ್ರಿಲ್​ 11 ರಿಂದ 14 ರ ವರೆಗೆ ‘ಕೊರೊನಾ ಲಸಿಕಾ ಉತ್ಸವ’ ಎಭಿಯಾನ ನಡೆಸಲು ಕರೆ ನೀಡಿದ್ದರು. ಅಂತೆಯೇ ಸಾರ್ವತ್ರಿಕ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಅರ್ಹ ಫಲಾನುಭವಿಗಳಿಗೆ ಕೊರೊನಾ ವೈರಸ್ ಲಸಿಕೆ ನೀಡುವ ಉದ್ದೇಶವನ್ನು ಹೊಂದಲಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕೋವಿಡ್​ ಉಲ್ಬಣ.. ಕೊರೊನಾ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಕರ್ನಾಟಕ ಪ್ರವೇಶ

ಈವರೆಗೆ 10 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ:

ದೇಶದಲ್ಲಿ ಶುಕ್ರವಾರದವರೆಗೆ ನೀಡಲಾದ ಕೋವಿಡ್ -19 ಲಸಿಕೆ ಪ್ರಮಾಣವು ಒಟ್ಟು 9.80 ಕೋಟಿ ಮೀರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಒಟ್ಟು 9,80,75,160 ಲಸಿಕೆ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ ಸುಮಾರು 34 ಲಕ್ಷದಷ್ಟು ವ್ಯಾಕ್ಸಿನೇಷನ್ ನೀಡಲಾಯಿತು. ದೇಶದಲ್ಲಿ ಈವರೆಗೆ ನೀಡಲಾದ ಒಟ್ಟು ವ್ಯಾಕ್ಸಿನ್ ಪ್ರಮಾಣಗಳಲ್ಲಿ ಶೇ. 60.62ರಷ್ಟು ಎಂಟು ರಾಜ್ಯಗಳದ್ದಾಗಿದೆ.

ಜಾಗತಿಕವಾಗಿ ನೀಡಲಾಗುತ್ತಿರುವ ವ್ಯಾಕ್ಸಿನ್ ಸಂಖ್ಯೆಗೆ ಅನುಗುಣವಾಗಿ, ಭಾರತವು ದಿನಕ್ಕೆ ಸರಾಸರಿ 38,93,288 ಪ್ರಮಾಣಗಳನ್ನು ನೀಡುವುದರೊಂದಿಗೆ ಅಗ್ರಸ್ಥಾನದಲ್ಲಿದೆ.

ಇದನ್ನೂ ಓದಿ: ಏಪ್ರಿಲ್​ 11ರಿಂದ 14ರವರೆಗೆ ದೇಶದಲ್ಲಿ 'ಲಸಿಕೆ ಉತ್ಸವ': ಕರೆ ನೀಡಿದ ನಮೋ!

ದೇಶದಲ್ಲಿ ಕೊರೊನಾ ಎರಡನೇ ನಿಯಂತ್ರಣಕ್ಕೆ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರ ಸಹ ಹರಸಾಹಸ ಪಡುತ್ತಿದ್ದು, ಲಾಕ್​ಡೌನ್​ ಹೊರತಾಗಿಯೂ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಯೋಚಿಸುತ್ತಿವೆ. ಈಗಾಗಲೇ ಅನೇಕ ರಾಜ್ಯಗಳು ನೈಟ್​ ಕರ್ಫ್ಯೂ ಸಹ ಜಾರಿ ಮಾಡಿದ್ದು, ಕಟ್ಟುನಿಟ್ಟಾದ ಕೋವಿಡ್​ ನಿಯಮಾವಳಿಗಳನ್ನು ಜಾರಿಗೊಳಿಸಿದೆ. ಕೊರೊನಾ ಮಾರ್ಗಸೂಚಿ ಪಾಲಿಸದವರ ವಿರುದ್ಧ ಕಠಿಣ ಕ್ರಮದ ಅಸ್ತ್ರವನ್ನು ಸಹ ಸರ್ಕಾರಗಳ ಪ್ರಯೋಗಿಸುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.