ETV Bharat / bharat

ಪಂಜಾಬ್​​ ಚುನಾವಣೆ: ಎಲ್ಲ ಮಕ್ಕಳಿಗೂ ಉಚಿತ ಶಿಕ್ಷಣ, ಹುತಾತ್ಮ ಯೋಧರು, ಪೊಲೀಸರ ಕುಟುಂಬಕ್ಕೆ 1 ಕೋಟಿ ರೂ!

ಪಂಜಾಬ್​​ನಲ್ಲಿ ಆಮ್​ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲ ಮಕ್ಕಳಿಗೂ ಉಚಿತವಾಗಿ ಶಿಕ್ಷಣ ನೀಡಲಾಗುವುದು ಎಂದಿರುವ ಕೇಜ್ರಿವಾಲ್​, ಮೃತ ಯೋಧರು, ಪೊಲೀಸರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಲಾಗುವುದು ಎಂದರು.

author img

By

Published : Dec 2, 2021, 7:29 PM IST

Delhi CM Kejriwal in punjab
Delhi CM Kejriwal in punjab

ನವದೆಹಲಿ: ಪಂಜಾಬ್​​ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಆಸೆ ಕಾಣುತ್ತಿರುವ ಆಮ್​ ಆದ್ಮಿ ಪಕ್ಷ ಇಲ್ಲಿನ ಜನರಿಗೆ ಭರಪೂರ ಕೊಡುಗೆ ಘೋಷಣೆ ಮಾಡ್ತಿದೆ.

ಕಳೆದ ಕೆಲ ದಿನಗಳ ಹಿಂದೆ ಪಂಜಾಬ್​​ನಲ್ಲಿ ವಿದ್ಯುತ್​ ಬಿಲ್​ ಮನ್ನಾ ಮಾಡುವ ಘೋಷಣೆ ಮಾಡಿದ್ದ ಕೇಜ್ರಿವಾಲ್​​, ಇದರ ಬೆನ್ನಲ್ಲೇ 18+ ಎಲ್ಲ ಯುವತಿಯರಿಗೂ ಪ್ರತಿ ತಿಂಗಳು 1 ಸಾವಿರ ರೂ. ಸಹಾಯಧನ ನೀಡುವುದಾಗಿ ತಿಳಿಸಿದ್ದರು. ಇದೀಗ ಮತ್ತೊಮ್ಮೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್​​​ ಕೇಜ್ರಿವಾಲ್​ ಮತ್ತೆರೆಡು ಮಹತ್ವದ ಘೋಷಣೆ ಮಾಡಿದ್ದಾರೆ.

  • I have 2 promises for the people of Punjab, if AAP comes to power, a large number of government schools will be built. If any soldier from Delhi is martyred on the border, the family gets an amount of Rs.1 crore. We will provide the same to the soldiers in Punjab: Arvind Kejriwal pic.twitter.com/OFiGcGa8eg

    — ANI (@ANI) December 2, 2021 " class="align-text-top noRightClick twitterSection" data=" ">

ಇದನ್ನೂ ಓದಿರಿ: ಭಾರತೀಯ ಯುವತಿ ಕೈ ಹಿಡಿಯಲು ಅಮೆರಿಕದಿಂದ ಬಂದ ವಿಜ್ಞಾನಿ!

ಪಂಜಾಬ್​​ನಲ್ಲಿ ಎಎಪಿ ಪಕ್ಷ ಅಧಿಕಾರಕ್ಕೆ ಬಂದರೆ, ದೊಡ್ಡ ಮಟ್ಟದಲ್ಲಿ ಸರ್ಕಾರಿ ಶಾಲೆ ನಿರ್ಮಾಣ ಮಾಡುವುದಾಗಿ ಹೇಳಿರುವ ಅವರು, ಎಲ್ಲ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲಾಗುವುದು ಎಂದಿದ್ದಾರೆ. ಇದರ ಜೊತೆಗೆ ಗಡಿಯಲ್ಲಿ ಹುತಾತ್ಮರಾಗುವ ಪೊಲೀಸರು ಹಾಗೂ ಯೋಧರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಪಂಜಾಬ್​​ನಲ್ಲಿ ನಿರ್ಮಾಣಗೊಳ್ಳುವ ಸರ್ಕಾರಿ ಶಾಲೆ ನೋಡಲು ಅಮೆರಿಕ, ಕೆನಡಾ ಮತ್ತು ಲಂಡನ್​​ನಿಂದ ಜನರು ಬಂದು ಅವುಗಳ ವೀಕ್ಷಣೆ ಮಾಡಲಿದ್ದಾರೆ ಎಂದರು. ಗುರುದಾಸ್ಪುರ್​​ ಹಾಗೂ ಪಟಾಣ್​ಕೋಟ್​​ನಲ್ಲಿ ಅತಿ ಹೆಚ್ಚು ಯೋಧರು ಭಾರತೀಯ ಸೇನೆಯಲ್ಲಿದ್ದು, ಅನೇಕರು ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೆ. ಈ ಭೂಮಿಯಲ್ಲಿ ಹುಟ್ಟುವುದಕ್ಕೆ ಪುಣ್ಯ ಮಾಡಿರಬೇಕು ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.