ETV Bharat / bharat

ನಟ ಪುನೀತ್​ ನಿಧನಕ್ಕೆ ದೆಹಲಿ ಸಿಎಂ ಕೇಜ್ರಿವಾಲ್ ಸಂತಾಪ, ಶ್ರದ್ಧಾಂಜಲಿ ಸಲ್ಲಿಸಿದ AAP​

author img

By

Published : Oct 30, 2021, 12:25 AM IST

ಸ್ಯಾಂಡಲ್​ವುಡ್ ನಟ ಪುನೀತ್ ರಾಜಕುಮಾರ್(46) ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನಕ್ಕೆ ಚಿತ್ರರಂಗ ಮಾತ್ರವಲ್ಲದೇ ಅನೇಕ ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.

Delhi cm arvind kejriwal tweet
Delhi cm arvind kejriwal tweet

ನವದೆಹಲಿ: ಕನ್ನಡ ಚಿತ್ರರಂಗದ 'ಮೇರು ನಟ' ಪುನೀತ್ ರಾಜ್​​ಕುಮಾರ್​ ಅವರ ಅಗಲಿಕೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪುನೀತ್ ರಾಜ್ ಕುಮಾರ್ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ ಹಾಗೂ ಅಪಾರ ಅಭಿಮಾನಿ ಬಳಗಕ್ಕೆ ಭಗವಂತ ನೀಡಲೆಂದು ಟ್ವೀಟ್ ಮಾಡಿದ್ದಾರೆ.

46 ವರ್ಷದ ಸ್ಯಾಂಡಲ್​ವುಡ್ ನಟನ ನಿಧನಕ್ಕೆ ಈಗಾಗಲೇ ಬಾಲಿವುಡ್​ ಸ್ಟಾರ್ಸ್​ ಸೇರಿದಂತೆ ಅನೇಕರು ಟ್ವೀಟ್ ಮಾಡಿ, ಸಂತಾಪ ಸೂಚಿಸಿದ್ದಾರೆ.

ಆಮ್​​​ ಆದ್ಮಿ ಪಾರ್ಟಿ ಶ್ರದ್ಧಾಂಜಲಿ

ವರನಟ ಡಾ. ರಾಜ್‌ಕುಮಾರ್​ ಅವರ ಪುತ್ರ ಹಾಗೂ ಖ್ಯಾತ ನಟ ಪುನೀತ್‌ ರಾಜ್‌ಕುಮಾರ್​ ಅಕಾಲಿಕ ನಿಧನಕ್ಕೆ ಆಮ್‌ ಆದ್ಮಿ ಪಾರ್ಟಿ ಶ್ರದ್ಧಾಂಜಲಿ ಕೋರಿದ್ದು, ಇದು ಚಿತ್ರರಂಗಕ್ಕೆ ಮಾತ್ರವಲ್ಲದೇ ಇಡೀ ನಾಡಿಗೆ ತುಂಬಲಾರದ ನಷ್ಟವೆಂದು ಅಭಿಪ್ರಾಯಪಟ್ಟಿದೆ.

ಪ್ರಕಟಣೆ ಹೊರಡಿಸಿರುವ ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ, ಕನ್ನಡದ ಖ್ಯಾತ ನಟನಾಗಿ ಅಸಂಖ್ಯಾಂತ ಅಭಿಮಾನಿಗಳನ್ನು ಹೊಂದಿದ್ದ ಪುನೀತ್‌ ರಾಜ್‌ಕುಮಾರ್‌ ಅವರ ಅಕಾಲಿಕ ನಿಧನವು ಆಘಾತ ಉಂಟುಮಾಡಿದೆ. ಡಾ. ರಾಜ್‌ಕುಮಾರ್‌ರವರ ಮಗನಾದ ಪುನೀತ್ ತಂದೆಯಂತೆಯೇ ಸರಳ, ಸಹೃದಯಿ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದರು. ಬಾಲ್ಯದಿಂದಲೂ ಅನೇಕ ಅತ್ಯುತ್ತಮ ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಹೃದಯಾಂತರಾಳದಲ್ಲಿ ಸ್ಥಾನ ಪಡೆದಿದ್ದಾರೆ. ದೇವರು ಇಷ್ಟು ಬೇಗ ಕರೆಸಿಕೊಳ್ಳಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿರಿ: ಪವರ್​ ಸ್ಟಾರ್​ ಪುನೀತ್ ರಾಜ್​ ಕುಮಾರ್ ವೃತ್ತಿ ಜೀವನದ​ 'ದಿ ಬೆಸ್ಟ್'​ ಸಿನಿಮಾಗಳಿವು

ನಟನೆಯ ಜೊತೆಗೆ ಹಾಡುಗಾರಿಕೆ ಕಲೆಯೂ ಪುನೀತ್‌ ರಾಜ್‌ಕುಮಾರ್‌ರವರಿಗೆ ಒಲಿದಿತ್ತು. ಸುಮಧುರ ಕಂಠದಿಂದ ಅನೇಕ ಹಾಡುಗಳು ಸಂಗೀತ ಪ್ರಿಯರ ಮನಗೆದ್ದಿವೆ. ಕಿರುತರೆಯ ರಿಯಾಲಿಟಿ ಶೋಗಳನ್ನೂ ಯಶಸ್ವಿಯಾಗಿ ನಡೆಸಿಕೊಟ್ಟ ಬಹುಮುಖ ಪ್ರತಿಭೆ. ಎಲ್ಲಕ್ಕಿಂತ ಮುಖ್ಯವಾಗಿ, ಅಷ್ಟು ದೊಡ್ಡ ಕುಟುಂಬದಲ್ಲಿ ಜನಿಸಿದ್ದರೂ, ಮುಗಿಲೆತ್ತರದ ಕೀರ್ತಿ ಗಳಿಸಿದ್ದರೂ, ಕಿಂಚಿತ್ತೂ ಅಹಂಕಾರವಿಲ್ಲದೇ ಎಂದೂ ಹೆಸರು ಕೆಡಿಸಿಕೊಳ್ಳದೇ ಸದಾ ನಗುಮೊಗದಿಂದ ಬದುಕಿದ್ದರು. ಈ ಸ್ವಭಾವವು ಸರ್ವರಿಗೂ ಮಾದರಿಯಾಗಬೇಕಿದೆ ಎಂದು ಪೃಥ್ವಿ ರೆಡ್ಡಿ ಅಭಿಪ್ರಾಯ ಪಟ್ಟಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ ಕುಟುಂಬ ಹಾಗೂ ಅಪಾರ ಅಭಿಮಾನಿಗಳ ದುಃಖದಲ್ಲಿ ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಘಟಕ ಭಾಗಿಯಾಗುತ್ತಿದೆ. ಅಪ್ಪು ಆತ್ಮಕ್ಕೆ ಭಗವಂತನು ಸದ್ಗತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಪೃಥ್ವಿ ರೆಡ್ಡಿಯವರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.