ETV Bharat / bharat

ಆಟೋರಿಕ್ಷಾ, ಟ್ಯಾಕ್ಸಿ ಚಾಲಕರಿಗೆ 5,000 ರೂ., ಪಡಿತರ ಚೀಟಿದಾರರಿಗೆ ಉಚಿತ ರೇಷನ್: ದೆಹಲಿ ಸಿಎಂ - coronavirus in india

ದೆಹಲಿಯಲ್ಲಿ ಕೊರೊನಾ ತಡೆಗೆ ಲಾಕ್​ಡೌನ್​ ವಿಧಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಜನರು ಸಂಕಷ್ಟಕ್ಕೆ ಸಿಲುಕಬಾರದೆಂಬ ಉದ್ದೇಶದಿಂದ ದೆಹಲಿ ಸರ್ಕಾರವು ಅಧಿಕೃತ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ 5000 ರೂ.ಗಳನ್ನು ನೀಡಲಿದೆ. ಜೊತೆಗೆ ಎಲ್ಲಾ ಪಡಿತರ ಚೀಟಿದಾರರಿಗೆ ಎರಡು ತಿಂಗಳವರೆಗೆ ಉಚಿತ ರೇಷನ್​ ಘೋಷಿಸಿದೆ.

Delhi CM Arvind Kejriwal announces free ration for card holders
ಪಡಿತರ ಚೀಟಿದಾರರಿಗೆ ಉಚಿತ ರೇಷನ್
author img

By

Published : May 4, 2021, 1:05 PM IST

ನವದೆಹಲಿ: ದೆಹಲಿಯ ಎಲ್ಲ ಅಧಿಕೃತ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ದೆಹಲಿ ಸರ್ಕಾರವು ತಲಾ 5000 ರೂ.ಗಳನ್ನು ನೀಡಲಿದೆ. ಈ ಮೂಲಕ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಅವರಿಗೆ ಆರ್ಥಿಕವಾಗಿ ಸಹಾಯವಾಗಲಿದೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಇದೇ ವೇಳೆ ದೆಹಲಿಯಲ್ಲಿರುವ ಎಲ್ಲಾ ಪಡಿತರ ಚೀಟಿದಾರರಿಗೆ ಎರಡು ತಿಂಗಳವರೆಗೆ ಉಚಿತ ರೇಷನ್​ ಘೋಷಿಸಿದ್ದಾರೆ.

  • लॉकडाउन में ग़रीबों को सबसे ज़्यादा आर्थिक मुसीबत का सामना करना पड़ता है। उनके लिए कुछ घोषणायें https://t.co/53ujzyjV6X

    — Arvind Kejriwal (@ArvindKejriwal) May 4, 2021 " class="align-text-top noRightClick twitterSection" data=" ">

1,56,000 ಕ್ಕೂ ಹೆಚ್ಚು ಆಟೋರಿಕ್ಷಾ ಚಾಲಕರು ಈ ಯೋಜನೆಯಿಂದ ಲಾಭ ಪಡೆಯುವ ನಿರೀಕ್ಷೆಯಿದೆ. ಮುಕ್ತ-ಪಡಿತರ ಯೋಜನೆಯ ಮೂಲಕ ದೆಹಲಿಯಲ್ಲಿರುವ ಎಲ್ಲಾ ಪಡಿತರ ಚೀಟಿದಾರರಿಗೆ ಎರಡು ತಿಂಗಳವರೆಗೆ ಉಚಿತ ಪಡಿತರ ನೀಡುತ್ತೇವೆ. ರಾಷ್ಟ್ರ ರಾಜಧಾನಿಯಲ್ಲಿ 72 ಲಕ್ಷಕ್ಕೂ ಹೆಚ್ಚು ಜನರಿಗೆ ಇದರಿಂದ ನೆರವಾಗಲಿದೆ ಎಂದು ಕೇಜ್ರಿವಾಲ್ ವಿವರಿಸಿದರು.

ಈ ನಿರ್ಧಾರದ ಅರ್ಥ ರಾಷ್ಟ್ರ ರಾಜಧಾನಿಯಲ್ಲಿ ವಿಧಿಸಲಾದ ನಿರ್ಬಂಧಗಳು ಎರಡು ತಿಂಗಳವರೆಗೆ ಇರುತ್ತವೆ ಎಂಬುದಲ್ಲ. ದೆಹಲಿಯ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಮುಂದಿನ ದಿನಗಳಲ್ಲಿ ಲಾಕ್​ಡೌನ್ ಅಗತ್ಯವಿಲ್ಲ ಎಂದು ಇದೇ ವೇಳೆ ಅವರು ಹೇಳಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.