ETV Bharat / bharat

ಮತ್ತೊಬ್ಬನ ಜತೆ ಪ್ರೇಯಸಿ ಡೇಟಿಂಗ್, ಸ್ನೇಹಿತನನ್ನೇ ಹತ್ಯೆಗೈದ ಪ್ರಿಯತಮ..! - ದೆಹಲಿ ಅಂಬೇಡ್ಕರ್​ ನಗರದ ಮರ್ಡರ್ ಕೇಸ್

ದೀಪಕ್​​, ಯೋಗಿ ಸಹಚರ ಕುನಾಲ್ ಕೊಲೆಗೆ ಹೊಂಚು ಹಾಕಿ, ಆನ್ಲೈನ್​ನಲ್ಲಿ ಬುಕ್ ಮಾಡಿ ಎರಡು ಚಾಕುಗಳನ್ನು ತರಿಸಿಕೊಂಡ. ಜೂನ್ 1ರ ರಾತ್ರಿ ಕುನಾಲ್​ ತನ್ನ ತಂದೆಯ ಜನ್ಮದಿನಕ್ಕೆ ಕೇಕ್ ತರಲು ಮದಂಗೀರ್ ಬಳಿಯ ಚೌಕ್​ನಲ್ಲಿ ಹೋಗುತ್ತಿದ್ದಾಗ, ದೀಪಕ್ ಮತ್ತು ಸಹಚರರು ಅವನನ್ನು ಇರಿದು ಕೊಂದಿದ್ದಾರೆ.

ಮತ್ತೊಬ್ಬನ ಜತೆ ಪ್ರೇಯಸಿ ಡೇಟಿಂಗ್, ಸ್ನೇಹಿತನನ್ನೇ ಹತ್ಯೆಗೈದ ಪ್ರಿಯತಮ..!

author img

By

Published : Jun 4, 2021, 8:14 PM IST

ನವದೆಹಲಿ: ಪ್ರೇಯಸಿ ಮತ್ತೊಬ್ಬನ ಜತೆ ಡೇಟಿಂಗ್​ ಹೋಗುತ್ತಿದ್ದಕ್ಕೆ ಕುಪಿತಗೊಂಡ ಪ್ರಿಯತಮ, ಯುವಕನಿಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ.

ಮತ್ತೊಬ್ಬನ ಜತೆ ಪ್ರೇಯಸಿ ಡೇಟಿಂಗ್, ಸ್ನೇಹಿತನನ್ನೇ ಹತ್ಯೆಗೈದ ಪ್ರಿಯತಮ..!

ಅಂಬೇಡ್ಕರ್​ ನಗರದಲ್ಲಿ ವಾಸಿಸುತ್ತಿದ್ದ ದೀಪಕ್ ಹಾಗೂ ಯುವತಿ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಇತ್ತೀಚೆಗೆ ಯುವತಿ ಯೋಗಿ ಎಂಬಾತನ ಸಹವಾಸ ಮಾಡಿದ್ದಕ್ಕೆ ದೀಪಕ್​​, ಪ್ರೇಯಸಿ ಕರೆಸಿ ಬುದ್ದಿಮಾತು ಹೇಳಿದ್ದ. ಆದರೂ, ಎಚ್ಚೆತ್ತುಕೊಳ್ಳಲಿಲ್ಲ.

ಈ ವಿಚಾರ ತಿಳಿದ ಯೋಗಿ ಹಾಗೂ ಅವನ ಸಹಚರರು ದೀಪಕ್ ಹತ್ಯೆಗೆ ಸಂಚು ರೂಪಿಸಿದರು. ವಿಷಯ ತಿಳಿದ ದೀಪಕ್​​ ಅಂಬೇಡ್ಕರ್ ನಗರ ತೊರೆದು ಬೇರೆಡೆ ವಾಸಿಸಲು ಶುರು ಮಾಡಿದ. ಎಷ್ಟು ದಿವಸ ಹೀಗೆ ಇರೋದು ಎಂದು ಯೋಚಿಸಿದ ದೀಪಕ್​​, ಯೋಗಿ ಸಹಚರ ಕುನಾಲ್ ಕೊಲೆಗೆ ಹೊಂಚು ಹಾಕಿ, ಆನ್ಲೈನ್​ನಲ್ಲಿ ಬುಕ್ ಮಾಡಿ ಎರಡು ಚಾಕುಗಳನ್ನು ತರಿಸಿಕೊಂಡ. ಜೂನ್ 1 ರ ರಾತ್ರಿ ಕುನಾಲ್​ ತನ್ನ ತಂದೆಯ ಜನ್ಮದಿನಕ್ಕೆ ಕೇಕ್ ತರಲು ಮದಂಗೀರ್ ಬಳಿಯ ಚೌಕ್​ನಲ್ಲಿ ಹೋಗುತ್ತಿದ್ದಾಗ, ದೀಪಕ್ ಮತ್ತು ಸಹಚರರು ಅವನನ್ನು ಇರಿದು ಕೊಂದಿದ್ದಾರೆ.

ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಸಮೀರ್ ಮತ್ತು ಸೊಹೈಲ್ ಎಂಬುವವರನ್ನು ಬಂಧಿಸಿದರು. ಆದರೆ, ದೀಪಕ್ ಮತ್ತು ಗೌರವ್​ ತಲೆ ಮರೆಸಿಕೊಂಡಿದ್ದರು. ಬಳಿಕ ತೀವ್ರ ಶೋಧ ನಡೆಸಿದ ಖಾಕಿ ಪಡೆ, ಹಸ್ತಾಲ್ ಗ್ರಾಮದ ಬಳಿ ಆರೋಪಿಗ ಹೆಡೆಮುರಿ ಕಟ್ಟಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.