ನವದೆಹಲಿ: ರಾಷ್ಟ್ರ ರಾಜಧಾನಿಯ ಗಾಳಿಯ ಗುಣಮಟ್ಟ 'ಅತ್ಯಂತ ಕಳಪೆ' ವಿಭಾಗದಲ್ಲಿದೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಅಂಶಗಳ ಪ್ರಕಾರ, ರಾಜಧಾನಿಯ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) ಬೆಳಿಗ್ಗೆ 9.10 ಕ್ಕೆ 352 ರಷ್ಟಿತ್ತು ಅಂದರೆ ಅತ್ಯಂತ ಕಲುಷಿತವಾಗಿದೆ ಎಂದು ಮಾಹಿತಿ ನೀಡಿದೆ.
ಸೂಚ್ಯಂಕದ ಪ್ರಕಾರ, 0 ಮತ್ತು 50 ರ ನಡುವಿನ ವಾಯು ಗುಣಮಟ್ಟವನ್ನು "ಉತ್ತಮ", 51 ಮತ್ತು 100 "ತೃಪ್ತಿದಾಯಕ", 101 ಮತ್ತು 200 "ಮಧ್ಯಮ", 201 ಮತ್ತು 300 "ಕಳಪೆ", 301 ಮತ್ತು 400 "ಅತ್ಯಂತ ಕಳಪೆ" ಮತ್ತು 401 ಮತ್ತು 500 "ತೀವ್ರ ಕಳಪೆ" ಎಂದು ಪರಿಗಣಿಸಲಾಗುತ್ತದೆ. ಭಾನುವಾರದಂದು 24-ಗಂಟೆಗಳ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು (AQI) ಸಂಜೆ 4 ಗಂಟೆಗೆ 339 ರಷ್ಟಿತ್ತು. ಇದು ಒಂದು ದಿನದ ಹಿಂದೆ 381 ರಿಂದ ಕುಸಿದಿದೆ.
ಇದನ್ನೂ ಓದಿ: ಎಲ್ಲೆಡೆ ಹಿಮದ ರಾಶಿ.. ಕಾಶ್ಮೀರ ರಸ್ತೆಯಲ್ಲಿ ಮಂಜುಗಡ್ಡೆ ತೆರವು ಕಾರ್ಯಾಚರಣೆ: ವಿಡಿಯೋ