ನವದೆಹಲಿ: ದೀಪಾವಳಿ ಬಳಿಕ ದೆಹಲಿ ವಾಯು ಗುಣಮಟ್ಟ ಮಂಗಳವಾರ ಅತ್ಯಂತ ಕಳಪೆಯಿಂದ ಕಳಪೆ ಮಟ್ಟಕ್ಕೆ ಸುಧಾರಿಸಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಕಳಪೆ ಗುಣಮಟ್ಟದಲ್ಲಿ ಎಕ್ಯೂಐ 221 ದಾಖಲಾಗಿದೆ. ಗಾಳಿಯ ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ವ್ಯವಸ್ಥೆ ಅಂಕಿಸಂಖ್ಯೆ ಪ್ರಕಾರ, ವಾಯು ಗುಣಮಟ್ಟದ ಸಾಂದ್ರತೆ ಪಿಎಂ 2.5 ಮತ್ತು ಪಿಎಂ 10ರ ಮಟ್ಟದಲ್ಲಿದೆ. ಇದು 221 (ಕಳಪೆ) 160 (ಸುಧಾರಿತ) ಮಧ್ಯದಲ್ಲಿದೆ.
ವಾಯುಗುಣಮಟ್ಟ ಸೂಚ್ಯಂಕ ಶೂನ್ಯದಿಂದ 50 ಇದ್ದರೆ ಉತ್ತಮ, 51 ಮತ್ತು 100ರಲ್ಲಿದ್ದರೆ ಸಮಾಧಾನಕರ, 101 ರಿಂದ 200ರಲ್ಲಿದ್ದರೆ ಸುಧಾರಿತ, 201ರಿಂದ 300ರ ನಡುವಿದ್ದರೆ ಕಳಪೆ ವರ್ಗವೆಂದು ಪರಿಗಣಿಸಲಾಗುತ್ತದೆ. ರಾಷ್ಟ್ರ ರಾಜಧಾನಿಯ ಪುಸ ನಗರ (186), ಲೋದಿ ರಸ್ತೆ (152) ಹಾಗೂ ಮಥುರಾ ರಸ್ತೆಯಲ್ಲಿ ಸೂಚ್ಯಂಕ 232 ದಾಖಲಾಗಿದ್ದು, ಕಳಪೆಯಾಗಿದೆ.
ನೋಯ್ಡಾದ ಎಕ್ಯೂಐ 302 (ತೀರ ಕಳಪೆ) ಮತ್ತು ಗುರುಗ್ರಾಮ್ನಲ್ಲಿ 162 (ಸುಧಾರಿತ) ಸೂಚ್ಯಂಕ ದಾಖಲಾಗಿದೆ.
ಇದನ್ನೂ ಓದಿ: ದೆಹಲಿಯ ಬಳಿಕ ಅಮೃತಸರದಲ್ಲೂ ಭೂಕಂಪನ; 4.1 ತೀವ್ರತೆ ದಾಖಲು