ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಕಾರ್ಯಾರಂಭವಾಗಿದೆ. ಈ ಮಧ್ಯೆ ಕರ್ನಾಟಕದ ಪ್ರತಿನಿಧಿಗಳ ವಿಶೇಷ ನಿಯೋಗವೊಂದು ಅಲ್ಲಿಗೆ ಭೇಟಿ ನೀಡಿ ಮಹತ್ವದ ಸಭೆ ನಡೆಸಿತು.
ಅಯೋಧ್ಯೆ ರಾಮ ಮಂದಿರ ಬಳಿ ರಾಜ್ಯ ಸರ್ಕಾರ 'ಕರ್ನಾಟಕ ರಾಯಭಾರಿ ಕಚೇರಿ' ನಿರ್ಮಾಣ ಮಾಡಲು ಮುಂದಾಗಿದ್ದು, ಈ ಬಗ್ಗೆ ಇವತ್ತು ಚರ್ಚೆ ನಡೆದಿದೆ. ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ರಾಜ್ಯದ ನಿಯೋಗ, ಕಟ್ಟಡ ನಿರ್ಮಾಣ ಕಾರ್ಯಕ್ಕೆ ನಿವೇಶನ ನೀಡಿರುವ ಕುರಿತು ಸ್ಥಳೀಯ ಜಿಲ್ಲಾಡಳಿತದಿಂದ ಮಾಹಿತಿ ಪಡೆದುಕೊಂಡಿತು.
ರಾಯಭಾರ ಕಚೇರಿ ಏಕೆ?
ಮಂದಿರ ನಿರ್ಮಾಣವಾಗುತ್ತಿದ್ದಂತೆ ಇಲ್ಲಿಗೆ ಭೇಟಿ ನೀಡುವ ಕರ್ನಾಟಕದ ಭಕ್ತರು, ಗಣ್ಯರ ಸೇವೆಗೆ ಈ ಕಚೇರಿ ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಅಧ್ಯಕ್ಷ ಎಂ.ರುದ್ರೇಶ್ ನೇತೃತ್ವದ ತಂಡ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಆರ್.ಪಿ.ಸಿಂಗ್ ಅವರೊಂದಿಗೆ ಸಭೆ ನಡೆಸಿತು. ಇನ್ನು, ದೇಗುಲದ ಆವರಣದಲ್ಲಿ ರಾಯಭಾರಿ ಕಚೇರಿ ನಿರ್ಮಿಸಲು ಎಲ್ಲ ರಾಜ್ಯಗಳಿಗೆ ಜಮೀನು ನೀಡಲಾಗಿದೆ.
ಇದನ್ನೂ ಓದಿರಿ: IND vs ENG Test ರೋಹಿತ್ ಜೊತೆ ವಿಹಾರಿ ಓಪನರ್: ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ಬ್ಯಾಟಿಂಗ್?
ರಾಮಮಂದಿರ ನಿರ್ಮಾಣ ಕಾರ್ಯಪ್ರಗತಿ ಕುರಿತು ಕಳೆದ ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಪರೆನ್ಸ್ ಮೂಲಕ ಮಹತ್ವದ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಉತ್ತರ ಪ್ರದೇಶ ಯೋಗಿ ಆದಿತ್ಯನಾಥ್ ಭಾಗಿಯಾಗಿದ್ದರು.