ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಈ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿದೆ. ಇನ್ನು ಕಾಶ್ಮೀರದಲ್ಲಿ ನಡೆಯಲಿರುವ ಮೊದಲ ಜಿ20 ಸಭೆಗೆ ಆಗಮಿಸುವ ವಿವಿಧ ದೇಶಗಳ ಪ್ರತಿನಿಧಿಗಳಿಗೆ ಸಿರಿಧಾನ್ಯಗಳಿಂದ ಮಾಡಿದ ಖಾದ್ಯಗಳನ್ನು ನೀಡಲಾಗುವುದು ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂದಿನಿಂದ 24 ರವರೆಗೆ ಶ್ರೀನಗರದಲ್ಲಿ ನಡೆಯುತ್ತಿರುವ ಜಿ20 ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಗ್ರಾಮೀಣ ಜೀವನೋಪಾಯ ಮಿಷನ್ (ಜೆಕೆಆರ್ಎಲ್ಎಂ) ಮತ್ತು ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ (ಐಎಚ್ಎಂ) ಪ್ರತಿನಿಧಿಗಳಿಗೆ ಸಿರಿಧಾನ್ಯ ಭಕ್ಷ್ಯಗಳನ್ನು ಉಣಬಡಿಸಲಿದ್ದೇವೆ ಎಂದು ಜೆಕೆಆರ್ಎಲ್ಎಂ ನಿರ್ದೇಶಕ ಇಂದೂ ಕಾವಲ್ ಚಿಬ್ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ನಾಲ್ಕು ಜಿಲ್ಲೆಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದೆ. ಜೆಕೆಆರ್ಎಲ್ಎಂ ನಿರ್ದೇಶಕ ಇಂದೂ ಕಾವಲ್ ಚಿಬ್ ಮಾತನಾಡಿ, "ದೇಶದಲ್ಲಿ ಎಷ್ಟು ರೀತಿಯ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತದೆ ಎಂಬುದರ ಬಗ್ಗೆ ಜನರಿಗೆ ಅರಿವು ಮೂಡಿಸಲು ಸರ್ಕಾರ ಬಯಸಿದೆ. ನಾವು ಇಲ್ಲಿ ಕನಿಷ್ಠ ಎಂಟು ವಿಧದ ಸಿರಿಧಾನ್ಯಗಳನ್ನು ಬೆಳೆಯಲು ಪ್ರಯತ್ನಿಸಿದ್ದೇವೆ ಮತ್ತು ಬೆಳೆಯ ಮಾದರಿಗಳನ್ನು ಸಹ ಇಟ್ಟಿದ್ದೇವೆ" ಎಂದು ಅವರು ಹೇಳಿದರು.
ವಿಶೇಷವೆಂದರೆ, ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಸಹಯೋಗದೊಂದಿಗೆ, ಜಮ್ಮು ಮತ್ತು ಕಾಶ್ಮೀರ ಗ್ರಾಮೀಣ ಜೀವನೋಪಾಯ ಮಿಷನ್ (ಜೆಕೆಆರ್ಎಲ್ಎಂ) ಸೇರಿ ಕಾಶ್ಮೀರ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ ಒಳಗೆ ವಿಶೇಷ ಮಿಲ್ಲೆಟ್ಸ್ ಕೆಫೆ ತೆರೆದಿದೆ. ಶ್ರೀನಗರದಲ್ಲಿ ಮೂರು ದಿನಗಳ ಜಿ20 ಸಭೆಯಲ್ಲಿ ಪ್ರತಿನಿಧಿಗಳು ಮತ್ತು ಭಾಗವಹಿಸುವವರಿಗೆ ಕೆಫೆಯಿಂದ ಆಹಾರ ನೀಡಲಾಗುತ್ತದೆ.
ಜಮ್ಮು ಮತ್ತು ಕಾಶ್ಮೀರ ಗ್ರಾಮೀಣ ಜೀವನೋಪಾಯ ಮಿಷನ್ ನಿರ್ದೇಶಕ ಇಂದು ಕಾವಲ್ ಚಿಬ್, ಈ ಕೆಫೆಯನ್ನು ಜಮ್ಮು ಮತ್ತು ಕಾಶ್ಮೀರ ಗ್ರಾಮೀಣ ಜೀವನೋಪಾಯ ಮಿಷನ್ನ ಮಹಿಳೆಯರು ನಡೆಸುತ್ತಿದ್ದಾರೆ. ಮಿಲೆಟ್ಸ್ ಕೆಫೆಯು ಮಾರುಕಟ್ಟೆಯನ್ನು ಸ್ಥಾಪಿಸುವುದರ ಜೊತೆಗೆ, ಆರ್ಥಿಕತೆಯನ್ನು ಪರಿವರ್ತಿಸುವಲ್ಲಿ ಜಮ್ಮು ಮತ್ತು ಕಾಶ್ಮೀರದ ಗ್ರಾಮೀಣ ಮಹಿಳೆಯರ ಪಾತ್ರವನ್ನು ಸಹ ಮಿಲ್ಲೆಟ್ಸ್ ಕೆಫೆ ಎತ್ತಿ ತೋರಿಸುತ್ತದೆ ಎಂದರು.
ಗ್ರಾಸ್ರೂಟ್ಸ್ ಇನ್ನೋವೇಶನ್ ಆಗ್ಮೆಂಟೇಶನ್ ನೆಟ್ವರ್ಕ್ (ಜಿಐಎಎನ್) ಜನರಲ್ ಮ್ಯಾನೇಜರ್ ಸೈಯದ್ ನದೀಮ್ ಮಾತನಾಡಿ, "ಈಗ ಜಗತ್ತು ಆರೋಗ್ಯಕರ ಆಹಾರದತ್ತ ಸಾಗುತ್ತಿದೆ, ಸಿರಿಧಾನ್ಯಗಳು ಭವಿಷ್ಯದ ಬೆಳೆ ಮತ್ತು ಆಹಾರವಾಗಿದೆ. ಇತರ ದೇಶಗಳು ಆರೋಗ್ಯಕರ ಆಹಾರವನ್ನು ಅಳವಡಿಸಿಕೊಳ್ಳುವುದನ್ನು ಮುಂದುವರಿಸಿದಾಗ, ನಾವು ಏಕೆ ಮಾಡಬಾರದಾ?. ಇದು ಎಲ್ಲಾ ಖನಿಜಗಳು ಮತ್ತು ಜೀವಸತ್ವಗಳನ್ನು ಒಳಗೊಂಡಿದೆ. ನಾವು ಮಹಿಳೆಯರನ್ನು ಸಬಲೀಕರಣಗೊಳಿಸಲಷ್ಟೇ ಬಯಸುವುದಿಲ್ಲ, ಅವರನ್ನು ಆರೋಗ್ಯವಂತರನ್ನಾಗಿ ಮಾಡಲು ಸಹ ನಾವು ಬಯಸುತ್ತೇವೆ ಎಂದು ಅವರು ಹೇಳಿದರು.
ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಬೇಸಿಗೆ ರಾಜಧಾನಿಯಾದ ಶ್ರೀನಗರದಲ್ಲಿ ಮೇ 22 ರಿಂದ 24 ವರೆಗೆ ನಡೆಯುವ ಜಿ20 "ಪ್ರವಾಸೋದ್ಯಮ ವರ್ಕಿಂಗ್ ಗ್ರೂಪ್ನ ಮೊದಲ ಸಭೆಗಾಗಿ ಅಂತಾರಾಷ್ಟ್ರೀಯ ಪ್ರತಿನಿಧಿಗಳು ಶ್ರೀನಗರಕ್ಕೆ ಆಗಮಿಸಿದ್ದಾರೆ.
ಇದನ್ನೂ ಓದಿ:ಶ್ರೀನಗರದಲ್ಲಿ ಜಿ 20 ಶೃಂಗಸಭೆ: ಪ್ರತಿನಿಧಿಗಳಿಗೆ ಆತ್ಮೀಯ ಸ್ವಾಗತ